India vs England: ಸುಂದರ್ ದಾಳಿಗೆ ಕುಸಿದ ಇಂಗ್ಲೆಂಡ್! ಭಾರತಕ್ಕೆ ಗೆಲ್ಲಲು 193ರನ್​ಗಳ ಸಾಧಾರಣ ಗುರಿ | India vs England Thrilling Target Set as England Bowled Out for 192 India Chases 193

India vs England: ಸುಂದರ್ ದಾಳಿಗೆ ಕುಸಿದ ಇಂಗ್ಲೆಂಡ್! ಭಾರತಕ್ಕೆ ಗೆಲ್ಲಲು 193ರನ್​ಗಳ ಸಾಧಾರಣ ಗುರಿ | India vs England Thrilling Target Set as England Bowled Out for 192 India Chases 193

Last Updated:

ಇಂಗ್ಲೆಂಡ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 192 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಇಂಗ್ಲೆಂಡ್ ಪರ ಜೋ ರೂಟ್ 40 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ವಾಷಿಂಗ್ಟನ್ ಸುಂದರ್​ ಭಾರತದ ಪರ 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು.

ಭಾರತ ತಂಡಭಾರತ ತಂಡ
ಭಾರತ ತಂಡ

ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ (Lords Cricket Stadium) ಮೂರನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಪಡೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಪಂದ್ಯದ ನಾಲ್ಕನೇ ದಿನದಂದು, ಇಂಗ್ಲೆಂಡ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 192 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಇಂಗ್ಲೆಂಡ್ ಪರ ಜೋ ರೂಟ್ (Joe Root) 40 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ವಾಷಿಂಗ್ಟನ್ ಸುಂದರ್ (Washington Sunder)​ ಭಾರತದ ಪರ 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಐದು ಪಂದ್ಯಗಳ ಟೆಸ್ಟ್ ಸರಣಿಯು ಈಗಾಗಲೆ 1-1 ರಲ್ಲಿ ಸಮಬಲಗೊಂಡಿದೆ. ಭಾರತಕ್ಕೆ ಈ ಪಂದ್ಯವನ್ನ ಗೆದ್ದು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸುವ ಅವಕಾಶವಿದೆ.

ಸಿರಾಜ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್

3ನೇ ದಿನ 2 ರನ್​ಗಳಿಸಿದ್ದ ಇಂಗ್ಲೆಂಡ್ ತಂಡ 4ನೇ ದಿನ ಆಟ ಮುಂದುವರಿಸಿ 22 ರನ್​ಗಳಾಗುಷ್ಟರಲ್ಲಿ ಬೆನ್ ಡಕೆಟ್ ವಿಕೆಟ್ ಕಳೆದುಕೊಂಡಿತು.  ಮೊಹಮ್ಮದ್ ಸಿರಾಜ್ 12 ರನ್​ಗಳಿಸಿದ್ದ ಬೆನ್ ಡಕೆಟ್ ಅವರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್‌ಗೆ ಮೊದಲ ಹೊಡೆತ ನೀಡಿದರು.  3ನೇ ಕ್ರಮಾಂಕದಲ್ಲಿ ಬಂದ ಒಲ್ಲಿ ಪೋಪ್ ಕೂಡ ಕೇವಲ 4 ರನ್​ಗಳಿಸಿ  ಸಿರಾಜ್ ಬೌಲಿಂಗ್​​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು.

ಇದನ್ನೂ ಓದಿ: India vs England: ಲಾರ್ಡ್ಸ್ ಮೈದಾನದಲ್ಲಿ ಅತಿ ಯಶಸ್ವಿ ಟೆಸ್ಟ್​ ರನ್ ಚೇಸ್‌ ಎಷ್ಟು? ಟಾಪ್ 5 ಗರಿಷ್ಠ ರನ್ ಚೇಸ್ ಇಲ್ಲಿದೆ

ನಿತೀಶ್ ರೆಡ್ಡಿ ಜ್ಯಾಕ್ ಕ್ರಾಲಿಯನ್ನು ಪೆವಿಲಿಯನ್‌ಗೆ ಕಳುಹಿಸಿದರು. ಕ್ರಾಲೆ 22 ರನ್ ಗಳಿಸಿದರು. ಹ್ಯಾರಿ ಬ್ರೂಕ್ ಅವರನ್ನು ಆಕಾಶ್‌ದೀಪ್  ಕ್ಲೀನ್ ಬೌಲ್ಡ್ ಮಾಡಿದರು. ನಂತರ ಬಂದ ಸ್ಫೋಟಕ ಬ್ಯಾಟರ್​ ಬ್ರೂಕ್ 19 ಎಸೆತಗಳಲ್ಲಿ 23 ರನ್ ಗಳಿಸಿದರು.  ಈ ಹಂತದಲ್ಲಿ ಒಂದಾದ ರೂಟ್-ಬೆನ್ ಸ್ಟೋಕ್ಸ್  128 ಎಸೆತಗಳಲ್ಲಿ 67 ರನ್ ಸೇರಿಸಿದರು. ಇದು ಇಡೀ ಇನ್ನಿಂಗ್ಸ್​ನಲ್ಲಿ ಗರಿಷ್ಠ ಜೊತೆಯಾಟವಾಯಿತು.  ಈ ಹಂತದಲ್ಲಿ ಬೌಲಿಂಗ್ ಇಳಿದ ವಾಷಿಂಗ್ಟನ್ ಸುಂದರ್ ರೂಟ್ ವಿಕೆಟ್ ಪಡೆದು ಭಾರತಕ್ಕೆ ಭರ್ಜರಿ ಬ್ರೇಕ್ ನೀಡಿದರು. ರೂಟ್ 96 ಎಸೆತಗಳಲ್ಲಿ  1 ಸಿಕ್ಸರ್ ಸಹಿತ 40 ರನ್​ಗಳಿಸಿದರು.

ಸುಂದರ್ 4 ವಿಕೆಟ್

ರೂಟ್ ವಿಕೆಟ್ ಬೀಳುತ್ತಿದ್ದಂತೆ ಇಂಗ್ಲೆಂಡ್ ಪತನ ಆರಂಭವಾಯಿತು. 154ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ದಿಢೀರ್ ಕುಸಿತ ಕಂಡು 192ಕ್ಕೆ ಆಲೌಟ್ ಆಯಿತು.  ಕೇವಲ  38 ರನ್​ಗಳಾಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಇದರಲ್ಲಿ 4 ವಿಕೆಟ್ ವಾಷಿಂಗ್ಟನ್ ಸುಂದರ್ ಪಾಲಾದರೆ, ಬುಮ್ರಾ 2 ವಿಕೆಟ್ ಪಡೆದರು.

ಇಂಗ್ಲೆಂಡ್​ಗೆ ಇತಿಶ್ರೀ ಹಾಡಿದ ಬುಮ್ರಾ

ರೂಟ್ ಔಟ್ ಆದ ನಂತರ ಬಂದ ಜೇಮೀ ಸ್ಮಿತ್ ಕೂಡ ಸುಂದರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಸ್ಮಿತ್ 14 ಎಸೆತಗಳಲ್ಲಿ 8 ರನ್ ಗಳಿಸಿದರು. ಬೆನ್ ಸ್ಟೋಕ್ಸ್ 96 ಎಸೆತಗಳಲ್ಲಿ 33 ರನ್ ಗಳಿಸಿ  ಸುಂದರ್ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.  ಬ್ರೈಡನ್ ಕಾರ್ಸ್ ಕೇವಲ ಒಂದು ರನ್ ಹಾಗೂ 10 ರನ್​ಗಳಿಸಿದ್ದ ಕ್ರಿಸ್ ವೋಕ್ಸ್​ರನ್ನ ಬುಮ್ರಾ  ಬೌಲ್ಡ್  ಮಾಡಿ ಪೆವಿಲಿಯನ್​​ ಸೇರಿಸಿದರು.   ವಾಷಿಂಗ್ಟನ್ ಸುಂದರ್ ಕೊನೆಯ 11ನೇ ಬ್ಯಾಟರ್ ಶೋಯಿಬ್ ಬಶೀರ್ (2) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಇಂಗ್ಲೆಂಡ್‌ನ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಜೋಫ್ರಾ 5 ರನ್ ಗಳಿಸಿ ಅಜೇಯರಾಗಿ ಮರಳಿದರು.

ಭಾರತದ ಪರ ವಾಸಿಂಗ್ಟನ್ ಸುಂದರ್ 22 ರನ್​ ನೀಡಿ 4 ವಿಕೆಟ್ ಪಡೆದು ಟಾಪ್ ಬೌಲರ್ ಆದರೆ, ಸಿರಾಜ್ 31ಕ್ಕೆ2, ಬುಮ್ರಾ 38ಕ್ಕೆ1, ನಿತೀಶ್ ಕುಮಾರ್ ರೆಡ್ಡಿ 20ಕ್ಕೆ1, ಆಕಾಶ್ ದೀಪ್ 30ಕ್ಕೆ1 ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನ 62 ಓವರ್​ಗಳಲ್ಲಿ ಆಲೌಟ್ ಮಾಡಲು ನೆರವಾದರು.