Last Updated:
ಮೊದಲೆರಡು ಪಂದ್ಯದಲ್ಲಿ ಮೊದಲಿಗೆ ಬೌಲಿಂಗ್ ಮಾಡಿದ್ದ ಟೀಮ್ ಇಂಡಿಯಾ ಇದೀಗ ಬ್ಯಾಟರ್ಗಳ ಬಲ ಪರೀಕ್ಷೆ ನಡೆಸಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ದೊಡ್ಡ ಮೊತ್ತದ ಗುರಿಯನ್ನ ನಿರೀಕ್ಷಿಸಬಹುದಾಗಿದೆ.
ಈಗಾಗಲೇ ಸೂಪರ್ 4 ಪ್ರವೇಶಿಸಿರುವ ಭಾರತ (Team India) ತಂಡ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿರುವ ಒಮಾನ್(Oman) ವಿರುದ್ಧ ಏಷ್ಯಾಕಪ್ 2025 ರ ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲೆರಡು ಪಂದ್ಯದಲ್ಲಿ ಮೊದಲಿಗೆ ಬೌಲಿಂಗ್ ಮಾಡಿದ್ದ ಟೀಮ್ ಇಂಡಿಯಾ ಇದೀಗ ಬ್ಯಾಟರ್ಗಳ ಬಲ ಪರೀಕ್ಷೆ ನಡೆಸಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ದೊಡ್ಡ ಮೊತ್ತದ ಗುರಿಯನ್ನ ನಿರೀಕ್ಷಿಸಬಹುದಾಗಿದೆ.
ಭಾರತ ತಂಡ ಈ ಪಂದ್ಯದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಭಾರತದ ಟಾಪ್ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿಗೆ ವಿರಾಮ ನೀಡಿ, ಅವರ ಸ್ಥಾನಕ್ಕೆ ಹರ್ಷಿತ್ ರಾಣಾ ಹಾಗೂ ಅರ್ಶದೀಪ್ ಸಿಂಗ್ರನ್ನ ಕರೆತಂದಿದೆ.
ಏಷ್ಯಾಕಪ್ನಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಿ, ಅವರೇ ಪಂದ್ಯವನ್ನು ಮುಗಿಸಿದ್ದಾರೆ. ಹಾಗಾಗಿ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳಿಗೆ ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿಲ್ಲ. ಭಾರತವು ಸೂಪರ್ ಫೋರ್ಗೆ ಮೊದಲು ಬ್ಯಾಟಿಂಗ್ ಬಲವನ್ನ ಪರೀಕ್ಷಿಸಲು ಇಂದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಮುಂದಿನ ಏಳು ದಿನಗಳಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದರೆ ಒಟ್ಟು ನಾಲ್ಕು ಪಂದ್ಯಗಳನ್ನು ಆಡಬೇಕಾಗುತ್ತದೆ. ಇದನ್ನು ಪರಿಗಣಿಸಿ, ತಂಡದ ಆಡಳಿತ ಮಂಡಳಿಯು ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಅವರಿಗೆ ಕೆಲವು ಬ್ಯಾಟಿಂಗ್ ಅವಕಾಶಗಳನ್ನು ನೀಡಬಹುದಾಗಿದೆ.
ಅತ್ತ ಕೊನೆಯ ಪಂದ್ಯವನ್ನಾಡುತ್ತಿರುವ ಲೀಗ್ನಲ್ಲಿ ಹೊರಬಿದ್ದಿರುವ ಒಮಾನ್ ತಂಡ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಒಮಾನ್ಗೆ ಇದು ದೊಡ್ಡ ಪಂದ್ಯವಾಗಲಿದೆ. ತಂಡದ ಆಟಗಾರರು ಛಾಪು ಮೂಡಿಸಲು ಉತ್ಸುಕರಾಗಿದ್ದಾರೆ. ಒಮಾನ್ ಆಡಿರುವ ಎರಡೂ ಪಂದ್ಯಗಳಲ್ಲೂ ಸೋತಿದೆ. ಪಾಕಿಸ್ತಾನ ವಿರುದ್ಧ 93 ರನ್ ಹಾಗೂ ಯುಎಇ ವಿರುದ್ಧ 42 ರನ್ಗಳಿಂದ ಸೋತಿದೆ.
ಭಾರತ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್(ವಿಕೀ), ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಶ್ದೀಪ್ ಸಿಂಗ್, ಕುಲ್ದೀಪ್ ಯಾದವ್
ಒಮಾನ್ ಪ್ಲೇಯಿಂಗ್ XI: ಜತೀಂದರ್ ಸಿಂಗ್ (ನಾಯಕ), ಅಮೀರ್ ಕಲೀಮ್, ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ (ವಿಕೀ), ಫೈಸಲ್ ಶಾ, ಮೊಹಮ್ಮದ್ ನದೀಮ್, ಆರ್ಯನ್ ಬಿಶ್ತ್, ಜಿಕ್ರಿಯಾ ಇಸ್ಲಾಂ, ಶಕೀಲ್ ಅಹ್ಮದ್, ಜಿತೇನ್ ರಾಮನಂದಿ, ಸಮಯ್ ಶ್ರೀವಾಸ್ತವ
September 19, 2025 7:44 PM IST