Last Updated:
ಟೂರ್ನಿಯಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಟೀಮ್ ಇಂಡಿಯಾ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಲು ವಿಪಲವಾಯಿತು. ಆದರೂ ಅಭಿಷೇಕ್ ಶರ್ಮಾರ 38 ಹಾಗೂ ಸಂಜು ಸ್ಯಾಮ್ಸನ್ 56 ರನ್ಗಳ ನೆರವಿನಿಂದ 188 ರನ್ಗಳಿಸಿತು.
2025ರ ಏಷ್ಯಾಕಪ್ನಲ್ಲಿ ಒಮಾನ್ ವಿರುದ್ಧ ಮುಖಾಮುಖಿಯಾಗಿರುವ ಭಾರತ ತಂಡ ಸಂಜು ಸ್ಯಾಮ್ಸನ್ ಸಿಡಿಸಿದ ಅರ್ಧಶತಕದ ನೆರವಿನಿಂದ ಒಮಾನ್ಗೆ 189 ರನ್ಗಳ ಸವಾಲಿನ ಗುರಿ ನೀಡಿದೆ. ಟೂರ್ನಿಯಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಟೀಮ್ ಇಂಡಿಯಾ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಲು ವಿಪಲವಾಯಿತು. ಆದರೂ ಅಭಿಷೇಕ್ ಶರ್ಮಾರ 38 ಹಾಗೂ ಸಂಜು ಸ್ಯಾಮ್ಸನ್ 56 ರನ್ಗಳ ನೆರವಿನಿಂದ 188 ರನ್ಗಳಿಸಿತು.
ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ 5, ಹಾರ್ದಿಕ್ ಪಾಂಡ್ಯ 1, ಅಕ್ಷರ್ ಪಟೇಲ್ 28, ಶಿವಂ ದುಬೆ 5, ತಿಲಕ್ ವರ್ಮಾ 29 ರನ್ಗಳಿಸಿದರು.
ಭಾರತ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್(ವಿಕೀ), ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಶ್ದೀಪ್ ಸಿಂಗ್, ಕುಲ್ದೀಪ್ ಯಾದವ್
ಒಮಾನ್ ಪ್ಲೇಯಿಂಗ್ XI: ಜತೀಂದರ್ ಸಿಂಗ್ (ನಾಯಕ), ಅಮೀರ್ ಕಲೀಮ್, ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ (ವಿಕೀ), ಫೈಸಲ್ ಶಾ, ಮೊಹಮ್ಮದ್ ನದೀಮ್, ಆರ್ಯನ್ ಬಿಶ್ತ್, ಜಿಕ್ರಿಯಾ ಇಸ್ಲಾಂ, ಶಕೀಲ್ ಅಹ್ಮದ್, ಜಿತೇನ್ ರಾಮನಂದಿ, ಸಮಯ್ ಶ್ರೀವಾಸ್ತವ
September 19, 2025 9:52 PM IST