Last Updated:
ಏಷ್ಯಾಕಪ್ನಲ್ಲಿ ಭಾರತ ಮತ್ತ ಪಾಕಿಸ್ತಾನ ತಂಡವನ್ನ ಎದುರಿಸಲಿದೆ. ಕಳೆದ 7 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದರೂ, ಸೂಪರ್ 4ರಲ್ಲಿ ಭಾರತ ಎಚ್ಚರಿಕೆಯಿಂದ ಇರಬೇಕಾದ 5 ಪ್ರಮುಖ ಕಾರಣಗಳಿವೆ.
ಏಷ್ಯಾ ಕಪ್ 2025ರ (Asia cup) ಗುಂಪು ಹಂತದಲ್ಲಿ ಭಾರತ ಪಾಕಿಸ್ತಾನವನ್ನು (India vs Pakistan) 7 ವಿಕೆಟ್‌ಗಳಿಂದ ಸೋಲಿಸಿ ಸೂಪರ್ 4ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರೂ, ಈಗ ಸೂಪರ್ 4ರಲ್ಲಿ ಮತ್ತೊಂದು ಹೈವೋಲ್ಟೇಜ್ ಮ್ಯಾಚ್ ಎದುರಾಗುತ್ತಿದೆ. ಸೆಪ್ಟೆಂಬರ್ 21ರ ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಈ ಹೈ-ವೋಲ್ಟೇಜ್ ಪಂದ್ಯ (ಸ್ಥಳೀಯ ಸಮಯ 8:00 PM IST) ಭಾರತಕ್ಕೆ ದೊಡ್ಡ ಸವಾಲು. ಕಳೆದ 7 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದರೂ, ಸೂಪರ್ 4ರಲ್ಲಿ ಭಾರತ ಎಚ್ಚರಿಕೆಯಿಂದ ಇರಬೇಕಾದ 5 ಪ್ರಮುಖ ಕಾರಣಗಳಿವೆ. ಇದು ಭಾರತದ ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡಕ್ಕೆ ಅಪಾಯಕಾರಿ ಸಾಧ್ಯತೆಗಳನ್ನು ಹೊಂದಿದೆ.
ಪಾಕಿಸ್ತಾನವು ಕ್ರಿಕೆಟ್‌ನಲ್ಲಿ ಅತ್ಯಂತ ಊಹಿಸಲಾಗದ ತಂಡವಾಗಿದೆ. ಆ ತಂಡ ಗೆಲ್ಲುವಂಥ ಪಂದ್ಯಗಳನ್ನು ಸೋಲುತ್ತದೆ, ಸೋಲುವಂಥ ಪಂದ್ಯಗಳನ್ನು ಗೆಲ್ಲುತ್ತದೆ. ಗುಂಪು ಹಂತದಲ್ಲಿ ಭಾರತಕ್ಕೆ ಸೋತರೂ, ಅವರ ಫಾರ್ಮ್ ಕಳಪೆಯಲ್ಲ. ಒಂದೇ ಪಂದ್ಯದಲ್ಲಿ ಅವರು ತಮ್ಮ ಆಟದ ಶೈಲಿಯನ್ನು ಬದಲಾಯಿಸಿ ಅಪಾಯಕಾರಿಯಾಗಬಹುದು. ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ಅಬ್ರಾರ್ ಅಹ್ಮದ್‌ರಂತಹ ಬೌಲರ್‌ಗಳು ಯಾವುದೇ ಸಮಯದಲ್ಲಿ ಅಪಾಯಕಾರಯಾಗಬಹುದು. ಭಾರತ ಇಂತಹ ತಂಡವನ್ನು ಕಡಿಮೆ ಅಂದಾಜು ಮಾಡಿದರೆ, ಅದು ದೊಡ್ಡ ತಪ್ಪಾಗುತ್ತದೆ.
ಭಾರತ ತಂಡ ಟಿ20 ಸ್ವರೂಪದಲ್ಲಿ ಕಳೆದ ಕೆಲವು ವರ್ಷಗಳಿಂದ ಉತ್ತಮ ಫಾರ್ಮ್‌ನಲ್ಲಿದೆ. 2023ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಸೋತಂತೆ, ದೀರ್ಘ ಗೆಲುವಿನ ಸರಣಿಯ ನಂತರ ಒಂದು ಕೆಟ್ಟ ದಿನ ಬರಬಹುದು. ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿಯಮತಹ ಸ್ಪಿನರ್‌ಗಳು ಗುಂಪು ಹಂತದಲ್ಲಿ ಮಿಂಚಿದ್ದರು, ಆದರೆ ಅತಿಯಾದ ಆತ್ಮವಿಶ್ವಾಸದಿಂದ ಅವರು ತಪ್ಪು ಮಾಡಿದರೆ, ಪಾಕಿಸ್ತಾನ ಅದನ್ನು ಬಳಸಿಕೊಳ್ಳಬಹುದು. ಭಾರತ ಕಳೆದ 7 ಪಂದ್ಯಗಳಲ್ಲಿ ಪಾಕ್ಗೆ ಸೋತಿಲ್ಲ, ಆದರೆ ಭಾರತ ತಂಡ ಇದನ್ನ ಅತಿ ಆತ್ಮವಿಶ್ವಾಸಕ್ಕೆ ಒಳಗಾಗದೇ ಗಂಭೀರವಾಗಿ ಪರಿಗಣಿಸಬೇಕು.
ದುಬೈ ಕ್ರೀಡಾಂಗಣವು ಪಾಕಿಸ್ತಾನಕ್ಕೆ ಮತ್ತೊಂದಯ ತವರಿನಂತಿದೆ. ಪಾಕ್ ಇಲ್ಲಿ 35 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ, ಇದು ಬೇರೆ ಯಾವುದೇ ಏಷ್ಯನ್ ತಂಡಕ್ಕೂ (15ಕ್ಕಿಂತ ಹೆಚ್ಚು) ದುಪ್ಪಟ್ಟು ಪಂದ್ಯಗಳಾಗಿವೆ. ವಿಶ್ವಕಪ್ ಇತಿಹಾಸದಲ್ಲಿ ಭಾರತ ಪಾಕಿಸ್ತಾನಕ್ಕೆ ಒಂದೇ ಒಂದು ಬಾರಿ ಸೋತಿದ್ದು, ಆ ಪಂದ್ಯ ನಡೆದದ್ದು ದುಬೈನಲ್ಲೇ! ಪಾಕಿಸ್ತಾನದ ಆಟಗಾರರು ಇಲ್ಲಿಯ ಪಿಚ್, ಹವಾಮಾನ ಮತ್ತು ಒತ್ತಡವನ್ನು ಚೆನ್ನಾಗಿ ತಿಳಿದು ಆಡುತ್ತಾರೆ. ಭಾರತಕ್ಕೆ ಇದು ಹೊಸ ಅನುಭವ, ಆದ್ದರಿಂದ ಎಚ್ಚರಿಕೆಯಿಂದ ಇರಬೇಕು.
ಗುಂಪು ಹಂತದಲ್ಲಿ ಭಾರತಕ್ಕೆ ಸೋತ ಪಾಕಿಸ್ತಾನ ತಂಡ ಭಾರೀ ಅವಮಾನವನ್ನು ಅನುಭವಿಸಿದೆ. ಪಂದ್ಯ ಮೊದಲು ಹ್ಯಾಂಡ್‌ಶೇಕ್ ವಿವಾದ, ಏಕಪಕ್ಷೀಯ ಸೋಲು, ಮತ್ತು ಪಂದ್ಯ ನಂತರ ಐಸಿಸಿ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕುವ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದ್ದು – ಇವೆಲ್ಲವೂ ಪಾಕಿಸ್ತಾನದಲ್ಲಿ ಸೇಡಿನ ಜ್ವಾಲೆಯನ್ನು ಹೊತ್ತಿಸಿದೆ. ಈ ಅಸಮಾಧಾನವು ಪಾಕಿಸ್ತಾನ ಆಟಗಾರರನ್ನು ಪ್ರತೀಕಾರಕ್ಕಾಗಿ ಆಟವಾಡುವಂತೆ ಮಾಡಬಹುದು, ಇದು ಸ್ವಲ್ಪ ಯಾಮಾರಿದರು ಭಾರತಕ್ಕೆ ಅಪಾಯಕಾರಿಯಾಗಲಿದೆ.
2022ರ ಏಷ್ಯಾ ಕಪ್‌ನಲ್ಲಿ ಯುಎಇಯಲ್ಲಿ ಗುಂಪು ಹಂತದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಗೆದ್ದಿತ್ತು, ಆದರೆ ಸೂಪರ್ 4ರಲ್ಲಿ ಇದೇ ದುಬೈನಲ್ಲಿ ಪಾಕಿಸ್ತಾನವು ಭಾರತವನ್ನು ಸೋಲಿಸಿತು! ಈ ಇತಿಹಾಸವು ಭಾರತಕ್ಕೆ ಎಚ್ಚರಿಕೆಯ ಸಂದೇಶ. ಪಾಕಿಸ್ತಾನ ಗುಂಪು ಸೋಲನ್ನು ಸೂಪರ್ 4ರಲ್ಲಿ ಪುನರಾವರ್ತಿಸಿ ಗೆದ್ದಿತ್ತು, ಆದ್ದರಿಂದ ಭಾರತ ಈಗ ಹಿಂದಿನ ತಪ್ಪುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆಡಬೇಕು. ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್, ಮತ್ತು ಶಿವಮ್ ದುಬೆರಂತಹ ಆಟಗಾರರು ಈ ಬಾರಿ ಜವಾಬ್ದಾರಿಯಿಂದ ಆಡಬೇಕು.
September 20, 2025 2:50 PM IST