Innovation: ಹಾಳಾಗಿ ಬಿದ್ದ ಟಯರ್‌ ಗಳಿಂದ ತಪ್ಪಿತು ಅಪಘಾತ! ಇವು ರಸ್ತೆ ಕಾಯೋ ಗಾಲಿಗಳು | Mangalore Kadur Highway Tire Barricade New Measure to Prevent Accidents | ದಕ್ಷಿಣ ಕನ್ನಡ

Innovation: ಹಾಳಾಗಿ ಬಿದ್ದ ಟಯರ್‌ ಗಳಿಂದ ತಪ್ಪಿತು ಅಪಘಾತ! ಇವು ರಸ್ತೆ ಕಾಯೋ ಗಾಲಿಗಳು | Mangalore Kadur Highway Tire Barricade New Measure to Prevent Accidents | ದಕ್ಷಿಣ ಕನ್ನಡ

Last Updated:

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಗಳೂರು-ಕಡೂರು ಹೆದ್ದಾರಿಯ ಜಕ್ರಿಬೆಟ್ಟಿನಲ್ಲಿ, ಕಬ್ಬಿಣದ ಬ್ಯಾರಿಕೇಡ್‌ಗಳ ಬದಲು ಟಯರ್‌ಗಳನ್ನು ಬಳಸಿ ಸುರಕ್ಷತೆಯ ದೃಷ್ಟಿಯಿಂದ ಹೊಸ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ.

+

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಿಗೆ (Highway) ಸಂಪರ್ಕ ಕಲ್ಪಿಸುವ ಜಂಕ್ಷನ್‌ಗಳಲ್ಲಿ ಸಾಮಾನ್ಯವಾಗಿ ಬ್ಯಾರಿಕೇಡ್‌ಗಳನ್ನು (Barricade)  ಅಳವಡಿಸಲಾಗುತ್ತದೆ. ಹೆಚ್ಚಾಗಿ ಎಲ್ಲಾ ಕಡೆಗಳಲ್ಲೂ ಬ್ಯಾರಿಕೇಡ್‌ಗಳನ್ನು ಕಬ್ಬಿಣವನ್ನು ಬಳಸಿಕೊಂಡು ರಸ್ತೆಗೆ (Road) ತಡೆಯಾಗುವ ಆಕಾರದಲ್ಲಿ ನಿರ್ಮಿಸಲಾಗುತ್ತದೆ. ಆದರೆ ಇಲ್ಲೊಂದು ಕಡೆಯಲ್ಲಿರುವ ಬ್ಯಾರಿಕೇಡ್ ಕೊಂಚ ಡಿಫರೆಂಟ್ ಮತ್ತು ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗಿದೆ. ಹೌದು, ಇಂತಹ ಡಿಫರೆಂಟ್ (Different) ಬ್ಯಾರಿಕೇಡ್ ಇರೋದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಯ ಜಕ್ರಿಬೆಟ್ಟು ಎನ್ನುವಲ್ಲಿ.

ದಿನ ನಡೆಯುತ್ತಿದ್ದ ಅಪಘಾತಗಳನ್ನು ತಪ್ಪಿಸಿದ ಗಾಲಿಗಳು

ಬಂಟ್ವಾಳ ಪೇಟೆ ಮತ್ತು ಹೆದ್ದಾರಿಯನ್ನು ಸಂಪರ್ಕಿಸುವ ಇಲ್ಲಿ ದಿನಂಪ್ರತಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದವು. ಈ ಕಾರಣಕ್ಕಾಗಿ ಪೊಲೀಸ್ ಇಲಾಖೆ ಕಬ್ಬಿಣದ ಬ್ಯಾರಿಕೇಡ್ ಅನ್ನು ಅಳವಡಿಸಿತ್ತು. ಆದರೆ ಈ ಬ್ಯಾರಿಕೇಡ್‌ಗೆ ಡಿಕ್ಕಿಯಾಗಿ ಹಲವು ವಾಹನಗಳು ಜಖಂ ಆದ, ದ್ವಿಚಕ್ರವಾಹನ ಸವಾರರು ಗಾಯಗೊಂಡ ಪ್ರಕರಣಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಈ ಭಾಗದ ಸ್ಥಳೀಯರೊಬ್ಬರು ಕಬ್ಬಿಣದ ಬ್ಯಾರಿಕೇಡ್ ಬದಲು ಬಳಸಿ ಡಂಪ್ ಮಾಡಿದ ಟಯರ್‌ಗಳನ್ನು ಜೋಡಿಸಿ ಇಲ್ಲಿ ಬ್ಯಾರಿಕೇಡ್ ನಿರ್ಮಿಸಿದ್ದಾರೆ.

ಇದಕ್ಕೆ ಢಿಕ್ಕಿ ಹೊಡೆದರೂ ಏನು ಆಗುವುದಿಲ್ಲ!

ಇದನ್ನೂ ಓದಿ: Dakshina Kannada Twins: ಅವಳ್ಯಾರು? ಇವಳ್ಯಾರು? ಅಯ್ಯೋ! ಅನ್ಬೇಡಿ ಇದು ಅವಳಿಗಳ ಸಾಮ್ರಾಜ್ಯ! ಮಕ್ಕಳ ಮುಖದಲ್ಲಿ ಕೋಟಿ-ಚೆನ್ನಯ್ಯರ ನೆನಪು

ಟಯರ್‌ಗಳನ್ನು ಆಕರ್ಷಕವಾಗಿ ಜೋಡಿಸಿ ಬ್ಯಾರಿಕೇಡ್ ಮಾದರಿಯಲ್ಲೇ ಮಾಡಲಾಗಿದೆ. ರಸ್ತೆಯ ನಾಲ್ಕು ಕಡೆಗಳಲ್ಲಿ ಇದನ್ನು ನಿರ್ಮಿಸಲಾಗಿದ್ದು, ರಾತ್ರಿ ವೇಳೆ ವಾಹನ ಸವಾರರಿಗೆ ಸ್ಪಷ್ಟವಾಗಿ ಇದು ಕಾಣುವಂತೆ ಇದಕ್ಕೆ ರಿಫ್ಲೆಕ್ಟರ್ ಸ್ಟಿಕ್ಕರ್, ರಾತ್ರಿ ವೇಳೆ ಮಾತ್ರ ಉರಿಯುವ ಸೋಲಾರ್ ಆಧಾರಿತ ಲೈಟ್‌ಗಳನ್ನು ಅಳವಡಿಸಲಾಗಿದೆ. ಈ ಟಯರ್‌ಗಳಿಂದ ನಿರ್ಮಾಣಗೊಂಡ ಬ್ಯಾರಿಕೇಡ್‌ಗೆ ನಿಯಂತ್ರಣ ತಪ್ಪಿದ ವಾಹನಗಳು ಡಿಕ್ಕಿ ಹೊಡೆದರೂ ವಾಹನಕ್ಕೆ ಮತ್ತು ಸವಾರರಿಗೆ ಹಾನಿಯಾಗದೆ ಬಚಾವ್ ಆದ ಹಲವು ಘಟನೆಗಳು ನಡೆದಿವೆ. ಈ ಕಾರಣಕ್ಕಾಗಿ ಬ್ಯಾರಿಕೇಡ್ ವಾಹನ ಸವಾರರ ಸುರಕ್ಷತೆಗೂ ಕಾರಣವಾಗಿದೆ.