Inspirational Story: ʼಮುದ್ದು ಕೃಷ್ಣನುʼ ಕೊಟ್ಟ ದುಡ್ಡು ನೊಂದ ಜೀವಕ್ಕೆ ಆಸರೆಯಾಯಿತು! ಇದು ಪುತ್ತೂರಿನ ಮುತ್ತಿನಂತಹ ಸಂಸ್ಥೆಯ ಕಾರ್ಯ | Dakshinakannada Muddukrishna contest funds 20000 rupees aid to Ashwini | ದಕ್ಷಿಣ ಕನ್ನಡ

Inspirational Story: ʼಮುದ್ದು ಕೃಷ್ಣನುʼ ಕೊಟ್ಟ ದುಡ್ಡು ನೊಂದ ಜೀವಕ್ಕೆ ಆಸರೆಯಾಯಿತು! ಇದು ಪುತ್ತೂರಿನ ಮುತ್ತಿನಂತಹ ಸಂಸ್ಥೆಯ ಕಾರ್ಯ | Dakshinakannada Muddukrishna contest funds 20000 rupees aid to Ashwini | ದಕ್ಷಿಣ ಕನ್ನಡ

Last Updated:

ಉಳ್ಳಾಲದ ದುರಂತದಲ್ಲಿ ಕಾಲು ಕಳೆದುಕೊಂಡ ಅಶ್ವಿನಿಯವರಿಗೆ ಎಪಿಎನ್ ಕ್ರಿಯೇಷನ್ಸ್ ಮುದ್ದು ಕೃಷ್ಣ ಸ್ಪರ್ಧೆಯ ಮೂಲಕ 20000 ರೂಪಾಯಿ ಸಹಾಯಧನ ನೀಡಿದೆ.

ಸಹಾಯಧನ
ಸಹಾಯಧನ

ದಕ್ಷಿಣಕನ್ನಡ: ಮುದ್ದು ಕೃಷ್ಣ ಸ್ಪರ್ಧೆ ಬಹುಶಃ ಇಡೀ ಜಗತ್ತಿನಲ್ಲಿ (World) ಎಲ್ಲಾ ಕಡೆ ಮಾಡಲಾಗುತ್ತದೆ. ಏನೇನೋ ಮಸ್ತ್‌ ಮಸ್ತ್‌ ವೇಷಗಳೂ (Costume) ಹಾಗೆಯೇ ಹೊಸ ಹೊಸ ಅಳವಡಿಕೆಗಳು ಈಗೆಲ್ಲಾ ಯೋಜಿಸಿ ಕಾರ್ಯಕ್ರಮಗಳನ್ನು (Program) ಮಾಡಲಾಗುತ್ತದೆ. ಆದರೆ ಇಲ್ಲೊಂದು ಸಂಸ್ಥೆ ಉಂಟು, ಆ ಸಂಸ್ಥೆ ಮಾಡಿದ್ದೆಂತಹ ಮಹತ್ವದ ಕಾರ್ಯ ಗೊತ್ತಾ? ನಾವು ಹೇಳ್ತೀವಿ ಕೇಳಿ!

ಉಳ್ಳಾಲದ ದುರಂತಕ್ಕೆ ಉಳ್ಳಾಯನಂತೆ ಬಂದ ಸಂಸ್ಥೆ

2025 ರ ಮೇ 30 ರಂದು ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರುಮಣೆ ಕೋಡಿ ಎಂಬಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಭೀಕರ ದುರಂತ ಸಂಭವಿಸಿತ್ತು. ಗುಡ್ಡ ಕುಸಿತದಿಂದಾಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದರು. ಸಾವನ್ನಪ್ಪಿದ ಕುಟುಂಬಕ್ಕೆ ವಿವಿಧ ಸಂಘಸಂಸ್ಥೆಗಳು ತಮ್ಮ ಕೈಲಾದಷ್ಟು ಸಹಾಯಹಸ್ತವನ್ನು ಚಾಚಿದ್ದು, ಸಹಾಯ ನೀಡಿದ ಸಂಸ್ಥೆಗಳ ಸಾಲಿಗೆ ಪುತ್ತೂರಿನ ಎಪಿಎನ್ ಕ್ರಿಯೇಷನ್ ಸಂಸ್ಥೆಯೂ ಸೇರಿಕೊಂಡಿದೆ.

ಅಸಹಾಯಕ ಕುಟುಂಬಗಳಿಗೆ ಸಹಾಯ ಮಾಡೋದೇ ಗುರಿ

ಅಸಹಾಯಕ ಕುಟುಂಬಗಳಿಗೆ ಏನಾದರೂ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ಮುದ್ದುಮಕ್ಕಳ ಸ್ಪರ್ಧೆಯನ್ನು ಆಯೋಜಿಸಿ ಅದರಿಂದ ಬಂದ ಹಣವನ್ನು ಮಕ್ಕಳನ್ನೂ, ತನ್ನ ಕಾಲನ್ನೂ ಕಳೆದುಕೊಂಡ ಸಂತ್ರಸ್ತೆ ಅಶ್ವಿನಿಯವರಿಗೆ ಹಸ್ತಾಂತರಿಸಲಾಗಿದೆ. ಈಕೆ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ.

ಮುದ್ದುಕೃಷ್ಣ ಸ್ಪರ್ಧೆಯ ನೋಂದಣಿ ಶುಲ್ಕದಿಂದ ಬಂದ ಮೊತ್ತ

ಮುದ್ದುಕೃಷ್ಣ ಸ್ಪರ್ಧೆ 2025 ಏರ್ಪಡಿಸಿ ಸ್ಪರ್ಧೆಗೆ ಬಂದ ನೋಂದಣಿ ಶುಲ್ಕ 17800 ರೂಪಾಯಿಗಳು ಮತ್ತು ಎಪಿಎನ್ ಕ್ರಿಯೇಷನ್ಸ್ ಸಂಘಟಕರಾದ ಪ್ರವೀಣ್ ನಾಯಕ್ ರವರು ನೀಡಿದ 2200 ರೂಪಾಯಿಗಳನ್ನು ಸೇರಿಸಿ ಒಟ್ಟು 20000 ರೂಪಾಯಿಗಳನ್ನು ಸಹಾಯಧನ ಮೂಲಕ ಹಸ್ತಾಂತರಿಸಲಾಗಿದೆ.

ಇದು ಸಹಾಯ ಪಡೆದ 26 ನೇ ಕುಟುಂಬ