Last Updated:
ಪುತ್ತೂರಿನ ಶಿವಕೃಪೆ ಹೋಟೆಲ್‌ನಲ್ಲಿ ದಿನೇಶ್ ಹೆಗಡೆ ಉಚಿತ ಊಟ ಸೇವೆ ನಡೆಸುತ್ತಿದ್ದಾರೆ. ಗ್ರಾಹಕರು ಕೂಪನ್ ಮೂಲಕ ದಾನ ಮಾಡಬಹುದು. ಬಡವರಿಗೆ, ಮಕ್ಕಳಿಗೆ ಉಚಿತ ಊಟ ಸಿಗುತ್ತದೆ.
ದಕ್ಷಿಣ ಕನ್ನಡ: ಹಲವು ಪ್ರಕಾರಗಳಲ್ಲಿ ದಾನಧರ್ಮಗಳನ್ನು ಮಾಡೋ ಜನ (People) ಜಗತ್ತಿನೆಲ್ಲೆಡೆ ಇದ್ದಾರೆ. ಆ ಮೂಲಕ ದೀನದಲಿತರ ಬಾಳಿಗೆ ಬೆಳಕಾಗಿದ್ದಾರೆ. ಎಲ್ಲಾ ದಾನಗಳಿಗಿಂತ (Donate) ದಾನ ಹಸಿದವನಿಗೆ ಒಂದು ತುತ್ತು ಅನ್ನ ನೀಡೋ ದಾನವಾಗಿದೆ. ಹಸಿದವನಿಗೆ ಅನ್ನ ನೀಡುವ ಹೋಟೆಲ್ (Hotel) ಒಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದೆ. ಕಳೆದ ಒಂದು ವರ್ಷದಿಂದ ಈ ಸೇವೆಯನ್ನು (Service) ಇಲ್ಲಿ ನೀಡಲಾಗುತ್ತಿದ್ದು, ಊಟಕ್ಕೆ ಹಣವಿಲ್ಲದಿದ್ದರೂ ಈ ಹೋಟೆಲ್ ಗೆ ಬಂದು ಹೊಟ್ಟೆ ತುಂಬಾ ಊಟ ಮಾಡಬಹುದಾಗಿದೆ.
ಹೌದು, ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದ ಬೈಪಾಸ್‌ನಲ್ಲಿರುವ ಸಣ್ಣದೊಂದು ಹೋಟೆಲ್‌ನಲ್ಲಿ ನಡೆಯುತ್ತಿರುವ ದೊಡ್ಡ ಕಾರ್ಯ. ಶಿವಕೃಪ ಎನ್ನುವ ಈ ಹೋಟೆಲ್‌ಗೆ ಹಸಿದು ಬಂದವರು ಹೊಟ್ಟೆ ತುಂಬಾ ಊಟ ಮಾಡಿ ತೆರಳಬಹುದಾಗಿದೆ. ಇಲ್ಲಿಗೆ ಬರುವ ಗ್ರಾಹಕರು ತಮ್ಮ ಊಟದ ಬಿಲ್ ಜೊತೆಗೆ ಇನ್ನೊಬ್ಬನ ಬಿಲ್ ಅನ್ನ ಪಾವತಿಸಿ ಕೂಪನ್ ಒಂದನ್ನ ಹೋಟೆಲ್‌ನ ಹೊರಗೆ ಹಾಕಿರುವ ಬೋರ್ಡ್ ಒಂದರಲ್ಲಿ ಅಂಟಿಸಿ ಹೋಗುತ್ತಾರೆ.
ಹೀಗೆ ಅಂಟಿಸಿ ಹೋಗುವ ಕೂಪನ್‌ಗಳನ್ನ ತೆಗೆದು ಅನ್ನಕ್ಕೆ ಹಣವಿಲ್ಲದ ಮಂದಿ ಊಟ ಮಾಡಬಹುದಾಗಿದೆ. ಸೇವಾ ಸಂಸ್ಥೆಯೊಂದರ ಮೂಲಕ ಆರಂಭಗೊಂಡ ಈ ಸೇವೆಯನ್ನು ಬಳಿಕದ ದಿನಗಳಲ್ಲಿ ಹೋಟೆಲ್‌ನ ಮಾಲಕರಾದ ದಿನೇಶ್ ಹೆಗಡೆಯವರೇ ಮುಂದುವರಿಸಿಕೊಂಡು ಬಂದಿದ್ದಾರೆ. ಕೆಲವರಿಗೆ ದಾನ ಮಾಡಬೇಕೆಂಬ ಇಚ್ಛೆ ಇರುತ್ತದೆ, ಆದರೆ ಹೇಗೆ ಮಾಡಿದರೆ ಉತ್ತಮ ಎನ್ನುವ ಸ್ಪಷ್ಟತೆ ಇರುವುದಿಲ್ಲ.
ಅದೇ ರೀತಿ ಹಸಿದಿದ್ದರೂ ಬೇಡಿ ತಿನ್ನಲು ಮನಸ್ಸಿಲ್ಲದವರೂ ಇದ್ದಾರೆ. ಎರಡೂ ಮಾನಸಿಕತೆಯವರಿಗಾಗಿಯೇ ಈ ರೀತಿಯ ವ್ಯವಸ್ಥೆಯನ್ನು ಈ ಹೋಟೆಲ್‌ನಲ್ಲಿ ಮಾಡಲಾಗಿದೆ. ಹೋಟೆಲ್‌ನ ಕ್ಯಾಶ್ ಕೌಂಟರ್ ಮುಂಭಾಗದಲ್ಲಿ ಈ ಅನ್ನ ಸೇವೆಯ ವಿವರಗಳನ್ನು ಹಾಕಲಾಗಿದ್ದು, ಮಾಹಿತಿ ಪಡೆದುಕೊಂಡ ಗ್ರಾಹಕ ಆತನ ಮನಸ್ಸಿದ್ದರೆ ಒಂದು ಅಥವಾ ಅದಕ್ಕಿಂತ ಹೆಚ್ಚು ಕೂಪನ್‌ಗಳನ್ನ ಪಡೆದುಕೊಂಡು ಕೂಪನ್‌ಗಳನ್ನ ಬೋರ್ಡ್‌ಗೆ ಅಂಟಿಸಿ ತೆರಳುತ್ತಾನೆ.
ದಿನವೊಂದಕ್ಕೆ 20 ಕ್ಕೂ ಹೆಚ್ಚು ಕೂಪನ್ ವಿತರಣೆ
ದಿನವೊಂದಕ್ಕೆ 20 ಕ್ಕೂ ಮಿಕ್ಕಿದ ಜನ ಈ ಕೂಪನ್‌ಗಳನ್ನ ಪಡೆದು ಊಟ ಮಾಡಿದರೆ, ಕೆಲವು ದಿನಗಳಲ್ಲಿ ಈ ಸಂಖ್ಯೆಯಲ್ಲಿ ಏರಿಳಿತಗಳೂ ಉಂಟಾಗುತ್ತದೆ. ಹೋಟೆಲ್ ಪಕ್ಕದಲ್ಲೇ ಸ್ಕ್ಯಾನಿಂಗ್ ಸೆಂಟರ್ ಕೂಡಾ ಇದ್ದು, ಅಲ್ಲಿಗೆ ಬರುವ ಬಡ ಕುಟುಂಬಗಳ ಸದಸ್ಯರಿಗೂ ಈ ಹೋಟೆಲ್‌ನಲ್ಲಿ ಉಚಿತವಾದ ಊಟ ನೀಡಲಾಗುತ್ತದೆ. ಅಲ್ಲದೆ ಪಕ್ಕದ ಶಾಲೆಗೆ ಬರುವ ಬಡ ಮಕ್ಕಳಿಗೂ ಬೇಕಾದ ತಿಂಡಿಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಯೂ ಇಲ್ಲಿದೆ. ಹೇಳಿಕೊಳ್ಳುವಷ್ಟು ಈ ಹೋಟೆಲ್‌ಗೆ ಹೆಸರಿಲ್ಲದಿದ್ದರೂ, ಅನ್ನ ಸೇವೆಯ ಕಾರಣಕ್ಕಾಗಿ ಇದು ಎಲ್ಲೆಡೆ ಗುರುತಿಸಿಕೊಂಡಿದೆ. ಭಿಕ್ಷೆ ಬೇಡಿಕೊಂಡು ಬರುವವರಿಗೆ ಇಲ್ಲಿ ಭಿಕ್ಷೆ ನೀಡದೆ ಅನ್ನ ನೀಡಲಾಗುತ್ತದೆ. ಇವರಿಗೆ ತಿಂಗಳಿಗೆ 5 ಲಕ್ಷ ಆದಾಯವಿದೆ.
Dakshina Kannada,Karnataka
December 12, 2025 2:54 PM IST