Last Updated:
ಮೂಡಬಿದರೆಯ ಆಳ್ವಾಸ್ ಕಾಲೇಜಿನ ಧನಲಕ್ಷ್ಮಿ ಪೂಜಾರಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುವ ಮಹಿಳಾ ಕಬಡ್ಡಿ ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ದಕ್ಷಿಣ ಕನ್ನಡ: ಒಂದೊಂದೇ ಪಟ್ಟಿಗೆ ಪಂಟರುಗಳನ್ನೇ ನಡುಗಿಸುವ ಈ ಹುಡುಗಿ (Girl) ಗೆರೆ ದಾಟಿ ಬಂದಳೆಂದರೆ ತಂಡಕ್ಕೆ ಪಾಯಿಂಟ್ ನಿಕ್ಕಿ. ಇವಳೇನಾದರೂ ಅಖಾಡದಲ್ಲಿ (Ground) ತನ್ನ ಕರಾಮತ್ತು ತೋರಿಸಿದರೆ ಯಾರೂ ಕೂಡ ಎದುರಲ್ಲಿ ಇರೋಲ್ಲ. ಇಂತಹ ಪವರ್ ಫುಲ್ ಆಟಗಾರ್ತಿ (Player) ಯಾರಪ್ಪಾ? ಅಂತೀರಾ ಇವಳೇ ಆಕೆ! ದಕ್ಷಿಣ ಕನ್ನಡದ ಮೂಡಬಿದರೆಯ ಆಳ್ವಾಸ್ ನ ವಿದ್ಯಾರ್ಥಿನಿ (Student) ಧನಲಕ್ಷ್ಮಿ ಪೂಜಾರಿ.
ನವೆಂಬರ್ 12 ರಿಂದ 25 ರವರೆಗೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಲಿರುವ ವಿಶ್ವಕಪ್ ಮಹಿಳೆಯರ ಕಬಡ್ಡಿ ಪಂದ್ಯಕ್ಕೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ. ಆಳ್ವಾಸ್ ಕಾಲೇಜಿನ ಧನಲಕ್ಷ್ಮಿ ಪೂಜಾರಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಸುರತ್ಕಲ್‌ನ ಇಡ್ಯಾ ನಿವಾಸಿ ನಾರಾಯಣ ಪೂಜಾರಿ ಮತ್ತು ಶಶಿಕಲಾ ದಂಪತಿಯ ಪುತ್ರಿ. ಇಡೀ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಆಟಗಾರ್ತಿ ಅನ್ನೋದು ಕರುನಾಡಿಗೆ ಹೆಮ್ಮೆ ತಂದಿದೆ. ಶಿಕ್ಷಣ, ಕ್ರೀಡೆಗೆ ಹೆಚ್ಚಿನ ಒತ್ತು ನೀಡುವ ಆಳ್ವಾಸ್ ಕಾಲೇಜಿನಿಂದ ಧನಲಕ್ಷ್ಮಿ ಆಯ್ಕೆಯಾಗಿರೋದು ಆಳ್ವಾಸ್ ಕಾಲೇಜಿಗೆ ಖುಷಿ ತಂದಿದೆ. ಧನಲಕ್ಷ್ಮಿ ಪೂಜಾರಿ ಆಳ್ವಾಸ್ ಕಾಲೇಜಿನಲ್ಲಿ ಪದವಿಪೂರ್ವ, ಪದವಿ ಶಿಕ್ಷಣ ಮುಗಿಸಿ ಈಗ ಡಿಪ್ಲೋಮೋ ವ್ಯಾಸಂಗ ಮಾಡುತ್ತಿದ್ದಾರೆ. ಆಳ್ವಾಸ್‌ನಲ್ಲಿ ಕ್ರೀಡಾದತ್ತು ನಿಧಿಯ ಮೂಲಕ ಉಚಿತ ಶಿಕ್ಷಣವನ್ನು ಧನಲಕ್ಷ್ಮಿ ಪಡೆಯುತ್ತಿದ್ದಾರೆ.
ಧನಲಕ್ಷ್ಮಿ ಜೂನಿಯರ್ ನ್ಯಾಷನಲ್, ಸೀನಿಯರ್ ನ್ಯಾಷನಲ್, ಹಾಗೂ ಫೆಡರೇಶನ್ ಕಪ್‌ನಲ್ಲಿ ಒಟ್ಟು ೧೨ ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಸೀನಿಯರ್ ಹಾಗೂ ಜೂನಿಯರ್ ವಿಭಾಗದಲ್ಲಿ ನಾಲ್ಕು ಬಾರಿ ರಾಷ್ಟ್ರೀಯ ತರಬೇತಿ ಕೂಟದಲ್ಲಿ ಭಾಗವಹಿಸಿದ್ದಾರೆ. ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಗೇಮ್‌ನಲ್ಲಿ ಮಂಗಳೂರು ಯೂನಿವರ್ಸಿಟಿಯನ್ನು ಪ್ರತಿನಿಧಿಸಿದ್ದಾರೆ.
12 ರಾಷ್ಟ್ರಗಳ ಜೊತೆ ಸೆಣೆಸಾಟ ಮಾಡಲಿರುವ ಚೆಲುವೆ
Dakshina Kannada,Karnataka
November 20, 2025 12:35 PM IST