Last Updated:
ಐಪಿಎಲ್ 2025ರ 7ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡದ ಟ್ರಾವಿಸ್ ಹೆಡ್ ಅವರನ್ನು ಪ್ರಿನ್ಸ್ ಯಾದವ್ ಕ್ಲೀನ್ ಬೌಲ್ಡ್ ಮಾಡಿದರು.
ಐಪಿಎಲ್ 2025ನೇ ಸಾಲಿನ 7ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ (LSG) ಹಾಗೂ ಸನ್ ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ (Hyderabad) ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ ಲಖನೌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಟ್ರಾವಿಸ್ ಹೆಡ್ (Travis Head) ಬಿಗ್ ಇನ್ನಿಂಗ್ಸ್ ಕಟ್ಟು ಮುನ್ಸೂಚನೆ ನೀಡಿದರು. 28 ಎಸೆತಗಳಲ್ಲಿ 47 ರನ್ ಗಳಿಸಿದ್ದ ಹೆಡ್ ಅವರನ್ನು ಪ್ರಿನ್ಸ್ ಯಾದವ್ (Prince Yadav) ಕ್ಲೀನ್ ಬೌಲ್ಡ್ ಮಾಡಿದ್ದಾರೆ. ಹಾಗಿದ್ರೆ ಯಾರು ಈ ಪ್ರಿನ್ಸ್ ಎಂಬುದನ್ನು ಇಲ್ಲಿ ನೋಡೋಣ.
2025 ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಟ್ರಾವಿಸ್ ಹೆಡ್ ಅವರನ್ನು ಪ್ರಿನ್ಸ್ ಯಾದವ್ ಔಟ್ ಮಾಡಿದರು. ಆಸ್ಟ್ರೇಲಿಯಾದ ಆಟಗಾರ ನೀಡಿದ ಸುಲಭದ ಕ್ಯಾಚ್ ಅನ್ನು ಒಮ್ಮೆ ನಿಕೋಲಸ್ ಪೂರನ್ ಮತ್ತೊಮ್ಮೆ ರವಿ ಬಿಷ್ಣೋಯ್ ಎರಡು ಬಾರಿ ಕೈಚೆಲ್ಲಿದ್ದರು. ಬಳಿಕ ಎಚ್ಚರದಿಂದ ಮತ್ತೊಂದು ಅರ್ಧಶತಕದತ್ತ ಸಾಗುತ್ತಿದ್ದ ಹೆಡ್ ಅವರನ್ನು ಪ್ರಿನ್ಸ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಮಾಡಿದರು.
ಇದನ್ನೂ ಓದಿ: Rohit Sharma: ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ರೋಹಿತ್ ಔಟ್! ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ರೋಹಿತ್ ಶಾಕಿಂಗ್ ನಿರ್ಧಾರ!
ದೇಸೀಯ ಕ್ರಿಕೆಟ್‌ನಲ್ಲಿ ಗಮನಸೆಳೆದ ಪ್ರಿನ್ಸ್
23 ವರ್ಷದ ಪ್ರಿನ್ಸ್ ದೆಹಲಿಯ ಪರ ದೇಸೀಯ ಕ್ರಿಕೆಟ್ ಆಡುತ್ತಾರೆ. ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಅವರು ರಿಷಭ್ ಪಂತ್ ಅವರ ಪುರಾನಿ ದಿಲ್ಲಿ ತಂಡವನ್ನು ಪ್ರತಿನಿಧಿಸಿದರು. 10 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಪಡೆದು ದೆಹಲಿಯ ವೈಟ್-ಬಾಲ್ ತಂಡಕ್ಕೆ ಆಯ್ಕೆಗೊಂಡರು. ಅವರ ವೇಗದ ಬೌಲಿಂಗ್ ಗಮನಿಸುತ್ತಾ ಬಂದಿದ್ದ LSG ಅವರ ಪ್ರತಿಭೆ ಗುರುತಿಸಿ ತಂಡಕ್ಕೆ ಆಯ್ಕೆ ಮಾಡಿಕೊಂಡಿತು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಪ್ರಿನ್ಸ್ ಉತ್ತರ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ನಿತೀಶ್ ರಾಣಾ ಮತ್ತು ಸಮೀರ್ ರಿಜ್ವಿ ಅವರ ವಿಕೆಟ್ ಪಡೆದಿದ್ದರು. ಬಳಿಕ ಐಪಿಎಲ್ ಮೆಗಾ-ಹರಾಜಿನಲ್ಲಿ LSG ಅವರನ್ನು 30 ಲಕ್ಷ ರೂಪಾಯಿಗಳಿಗೆ ಖರೀದಿಸಿತು.
March 27, 2025 9:00 PM IST
IPL 2024: ಸ್ಟಾರ್ ಬೌಲರ್‌ಗಳಿಗೆ ಅಟ್ಟಾಡಿಸಿ ಹೊಡಿತಾ ಇದ್ದ ಟ್ರಾವಿಸ್ ಹೆಡ್‌ರನ್ನೇ ಕ್ಲೀನ್ ಬೌಲ್ಡ್ ಮಾಡಿದ 23ರ ಯುವಕ! ಯಾರು ಈ ಪ್ರಿನ್ಸ್ ಯಾದವ್?