IPL 2025: ಐಪಿಎಲ್‌ನ ಉಳಿದ ಪಂದ್ಯಗಳನ್ನು ನಮ್ಮ ದೇಶದಲ್ಲಿ ನಡೆಸಿ! ಮುಕ್ತ ಆಹ್ವಾನ ನೀಡಿದ ಭಾರತದ ಮಿತ್ರ ರಾಷ್ಟ್ರ | India Pakistan Crisis IPL 2025 Postponed by One Week and england ex captain michle whaghan invite to england for Playing ipl

IPL 2025: ಐಪಿಎಲ್‌ನ ಉಳಿದ ಪಂದ್ಯಗಳನ್ನು ನಮ್ಮ ದೇಶದಲ್ಲಿ ನಡೆಸಿ! ಮುಕ್ತ ಆಹ್ವಾನ ನೀಡಿದ ಭಾರತದ ಮಿತ್ರ ರಾಷ್ಟ್ರ | India Pakistan Crisis IPL 2025 Postponed by One Week and england ex captain michle whaghan invite to england for Playing ipl

Last Updated:

ಒಂದು ವಾರದ ಬಳಿಕ ಪರಿಸ್ಥಿತಿ ನೋಡಿಕೊಂಡು ಪಂದ್ಯಾವಳಿಯನ್ನು ಮರು ಆರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಬಿಸಿಸಿಐ (BCCI) ಸ್ಪಷ್ಟಪಡಿಸಿದೆ.

 ಐಪಿಎಲ್ ಟ್ರೋಫಿ ಐಪಿಎಲ್ ಟ್ರೋಫಿ
ಐಪಿಎಲ್ ಟ್ರೋಫಿ

ಭಾರತ-ಪಾಕಿಸ್ತಾನ (India-Pakistan) ನಡುವೆ ಉಂಟಾಗಿರುವ ಬಿಕ್ಕಟ್ಟಿನ ಬಳಿಕ ಐಪಿಎಲ್ (IPL 2025) ಪಂದ್ಯಾವಳಿಗಳನ್ನು ಒಂದು ವಾರಗಳ ಕಾಲ ರದ್ದು ಮಾಡಲಾಗಿದೆ. ಒಂದು ವಾರದ ಬಳಿಕ ಪರಿಸ್ಥಿತಿ ನೋಡಿಕೊಂಡು ಪಂದ್ಯಾವಳಿಯನ್ನು ಮರು ಆರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಬಿಸಿಸಿಐ (BCCI) ಸ್ಪಷ್ಟಪಡಿಸಿದೆ. ಈ ನಡುವೆ ಐಪಿಎಲ್ ಅನ್ನು ನಮ್ಮ ದೇಶದಲ್ಲಿ ಆಡಿಸಿ ಎಂದು ಇಂಗ್ಲೆಂಡ್ (England) ಮಾಜಿ ಆಟಗಾರ ಬಿಸಿಸಿಐಗೆ ಕೇಳಿದ್ದಾರೆ.

ಸದ್ಯ, ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿ ಉದ್ಭವಿಸಿದೆ. ಈ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಐಪಿಎಲ್ ಅನ್ನು ಒಂದು ವಾರ ಮುಂದೂಡಲು ನಿರ್ಧರಿಸಲಾಗಿದೆ. ಹಾಗಾಗಿ ಈಗ ನಾವು ಐಪಿಎಲ್ ಕುರಿತು ಅಪ್ಡೇಟ್‌ಗಗಿ ಒಂದು ವಾರ ಕಾಯಬೇಕಾಗುತ್ತದೆ. ಹಾಗಾದರೆ ಒಂದು ವಾರದ ನಂತರ ಐಪಿಎಲ್ ಎಲ್ಲಿ ನಡೆಯಲಿದೆ? ಎಂಬ ಪ್ರಶ್ನೆಗಳು ಸಹ ಉಂಟಾಗಿದೆ. ಈ ನಡುವೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಎಕ್ಸ್ ಪೋಸ್ಟ್ ಮೂಲಕ ತಮ್ಮ ದೇಶದಲ್ಲಿ ಉಳಿದಿರುವ ಐಪಿಎಲ್ ಆಯೋಜಿಸುವಂತೆ ಕೇಳಿಕೊಂಡಿದ್ದಾರೆ.

ಮೈಕಲ್ ವಾನ್ ಮುಕ್ತ ಆಹ್ವಾನ

ಐಪಿಎಲ್ 2025 ಮುಂದೂಡಲ್ಪಟ್ಟ ನಂತರ, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ‘ಎಕ್ಸ್’ ನಲ್ಲಿ ಪೋಸ್ಟ್ ಬರೆದಿದ್ದಾರೆ. ಈ ಪೋಸ್ಟ್‌ನಲ್ಲಿ, ಅವರು ಭಾರತಕ್ಕೆ ಇಂಗ್ಲೆಂಡ್‌ನಲ್ಲಿ ಐಪಿಎಲ್ ಆಯೋಜಿಸಲು ಸಲಹೆ ನೀಡಿದ್ದಾರೆ. ಬ್ರಿಟನ್‌ನಲ್ಲಿ ಐಪಿಎಲ್ ಪೂರ್ಣಗೊಳಿಸಲು ಸಾಧ್ಯವೇ ಎಂದು ನಾನು ಆಶ್ಚರ್ಯಪಡುತ್ತೇನೆ ಎಂದು ಮೈಕೆಲ್ ವಾನ್ ಬರೆದುಕೊಂಡಿದ್ದಾರ. ನಮ್ಮಲ್ಲಿ ಮೈದಾನಗಳೂ ಇವೆ ಮತ್ತು ಈ ಲೀಗ್ ಮುಗಿದ ನಂತರ, ಭಾರತೀಯ ಆಟಗಾರರು ಟೆಸ್ಟ್ ಸರಣಿಗಾಗಿ ಅಲ್ಲಿಯೇ ಉಳಿಯಬಹುದು ಎಂದಿದ್ದಾರೆ. ಆದ್ರೆ, ಇದು ಕೇವಲ ತಮ್ಮ ಕಲ್ಪನೆ ಎಂದು ಕೂಡ ಅವರು ಹೇಳಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ಸರಣಿಗೂ ಅನುಕೂಲ

ವಾಸ್ತವವಾಗಿ, ಐಪಿಎಲ್ ಮುಗಿದ ತಕ್ಷಣ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜೂನ್ 20 ರಿಂದ ಉಭಯ ದೇಶಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಆದ್ದರಿಂದ, ಐಪಿಎಲ್‌ನ ಉಳಿದ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ನಡೆಸಿದರೆ ಭಾರತೀಯ ಟೆಸ್ಟ್ ತಂಡಕ್ಕೆ ಸ್ಥಾನ ಪಡೆಯುವ ಆಟಗಾರರು ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿಯೇ ಉಳಿಯಬಹುದು.

ಇದು ಆಟಗಾರರಿಗೆ ಪ್ರಯೋಜನವನ್ನು ನೀಡುತ್ತದೆ ಏಕೆಂದರೆ ಆಗ ಅವರು ಇಂಗ್ಲೆಂಡ್‌ನ ಪರಿಸ್ಥಿತಿಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ ಎಂದು ಮೈಕೆಲ್ ವಾನ್ ಹೇಳಿ್ದ್ದಾರೆ. ಆದ್ರೆ ವಾನ್ ಅವರ ಸಲಹೆಯನ್ನು ಬಿಸಿಸಿಐ ಯಾವ ರೀತಿ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.