IPL 2025: ಸಿಎಸ್​ಕೆ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಿಂದ ಹಾರ್ದಿಕ್​ಗೆ ನಿಷೇಧ! ಈ ಸ್ಟಾರ್ ಕ್ರಿಕೆಟರ್​​ ಮುಂಬೈ ಇಂಡಿಯನ್ಸ್​​ ನಾಯಕ

IPL 2025: ಸಿಎಸ್​ಕೆ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಿಂದ ಹಾರ್ದಿಕ್​ಗೆ ನಿಷೇಧ! ಈ ಸ್ಟಾರ್ ಕ್ರಿಕೆಟರ್​​ ಮುಂಬೈ ಇಂಡಿಯನ್ಸ್​​ ನಾಯಕ

Last Updated:

ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಹಾರ್ದಿಕ್ ಪಾಂಡ್ಯ ಒಂದು ಪಂದ್ಯ ನಿಷೇಧಕ್ಕೆ ಒಳಗಾಗಿರುವುದರಿಂದ ಅವರ ಬದಲಿಗೆ ಹೊಸ ನಾಯಕ ಕಣಕ್ಕಳಿಯಲಿದ್ದಾರೆ.

ಮುಂಬೈ ಇಂಡಿಯನ್ಸ್ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್

ಮಾರ್ಚ್ 23, 2025ರಂದು ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ 2025ರ (IPL 2025) ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ತನ್ನ ಪ್ರಶಸ್ತಿ ಬೇಟೆಯನ್ನು ಆರಂಭಿಸಲಿದೆ. ಆದರೆ, ಈ ಪಂದ್ಯದಲ್ಲಿ ಮುಂಬೈ ತಂಡದ ಖಾಯಂ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಗೈರುಹಾಜರಾಗಲಿದ್ದಾರೆ. ಕಳೆದ ಋತುವಿನಲ್ಲಿ ನಿಧಾನಗತಿಯ ಓವರ್ ದರಕ್ಕೆ ಸಂಬಂಧಿಸಿದಂತೆ ಐಪಿಎಲ್ ಆಡಳಿತ ಮಂಡಳಿಯು ಹಾರ್ದಿಕ್ ಮೇಲೆ ಒಂದು ಪಂದ್ಯದ ನಿಷೇಧ ಮತ್ತು 30 ಲಕ್ಷ ರೂ. ದಂಡ ವಿಧಿಸಲಾಗಿತ್ತ. ಈ ಕಾರಣದಿಂದಾಗಿ, ಮುಂಬೈ ತಂಡದ ನಾಯಕತ್ವದ ಜವಾಬ್ದಾರಿಯನ್ನು ಸೂರ್ಯಕುಮಾರ್ ಯಾದವ್ (Surya Kumar Yadav) ವಹಿಸಿಕೊಳ್ಳುವ ಸಾಧ್ಯತೆ ಇದೆ.

ನಾಯಕನಿಲ್ಲದೆ ಮುಂಬೈ ಅಭಿಯಾನ ಆರಂಭ

ಕಳೆದ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ತೋರಿತ್ತು. ತಂಡವು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿತ್ತು ಮತ್ತು ಮೂರು ಪಂದ್ಯಗಳಲ್ಲಿ ನಿಧಾನಗತಿಯ ಓವರ್ ದರಕ್ಕೆ ಹಾರ್ದಿಕ್ ಕಾರಣರಾಗಿದ್ದರು. ಇದರ ಪರಿಣಾಮವಾಗಿ, ಐಪಿಎಲ್ ನಿಯಮಗಳ ಪ್ರಕಾರ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಈ ನಿಷೇಧದಿಂದಾಗಿ ಹಾರ್ದಿಕ್ ಚೆನ್ನೈ ವಿರುದ್ಧದ ಆರಂಭಿಕ ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಗಿದೆ.

ಇದನ್ನೂ ಓದಿ: IPL 2025: 2008 ರಿಂದ 2025! ಎಲ್ಲಾ 18 ಆವೃತ್ತಿಯಲ್ಲಿ ಕಾಣಿಸಿಕೊಂಡ 7 ಲೆಜೆಂಡರಿ ಕ್ರಿಕೆಟಿಗರಿವರು

ರೇಸ್​​ನಲ್ಲಿ ಇಬ್ಬರು ಸ್ಟಾರ್ ಪ್ಲೇಯರ್ಸ್

ಹಾರ್ದಿಕ್ ಅನುಪಸ್ಥಿತಿಯಲ್ಲಿ ಮುಂಬೈ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಚರ್ಚೆ ತೀವ್ರಗೊಂಡಿದೆ. ಮಾಜಿ ನಾಯಕ ರೋಹಿತ್ ಶರ್ಮಾ ಮತ್ತೆ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದ್ದರೂ, ಸೂರ್ಯಕುಮಾರ್ ಯಾದವ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಉತ್ತಮ ನಾಯಕತ್ವದ ದಾಖಲೆ ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ತಂಡವು 18 ಪಂದ್ಯಗಳಲ್ಲಿ 14 ಗೆಲುವು ಸಾಧಿಸಿ, ಕೇವಲ 4 ಸೋಲುಗಳನ್ನು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ, ಸೂರ್ಯಕುಮಾರ್‌ಗೆ ಈ ಅವಕಾಶ ದೊರೆಯುವ ಸಂಭವ ಜೋರಾಗಿದೆ.

ಬುಮ್ರಾ ಅಲಭ್ಯ

ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನೊಂದು ಸವಾಲು ಎಂದರೆ ವೇಗಿ ಜಸ್ಪ್ರೀತ್ ಬುಮ್ರಾ ಅವರ ಗಾಯ. ಬೆನ್ನಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಬುಮ್ರಾ ಗಾಯಗೊಂಡಿದ್ದರು. ಪ್ರಸ್ತುತ ಅವರು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ರಿಹ್ಯಾಬ್ ಪ್ರಕ್ರಿಯೆಯಲ್ಲಿದ್ದಾರೆ. ಏಪ್ರಿಲ್ ಆರಂಭದಲ್ಲಿ ಅವರು ತಂಡವನ್ನು ಸೇರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಐಪಿಎಲ್​ನ 10 ತಂಡಗಳ ನಾಯಕರ ಹೆಸರು ಬಹಿರಂಗ! ಹೇಗಿದೆ ನೋಡಿ 10 ಕ್ಯಾಪ್ಟನ್​​ಗಳ ದಾಖಲೆ

ತಂಡದ ಆರಂಭಿಕ ತಯಾರಿ

ಹಾರ್ದಿಕ್ ಮತ್ತು ಬುಮ್ರಾ ಇಬ್ಬರೂ ಆರಂಭಿಕ ಪಂದ್ಯದಲ್ಲಿ ಲಭ್ಯವಿಲ್ಲದ ಸ್ಥಿತಿಯಲ್ಲಿ, ಮುಂಬೈ ಇಂಡಿಯನ್ಸ್ ತಂಡವು ತನ್ನ ಇತರ ಆಟಗಾರರ ಮೇಲೆ ಭರವಸೆ ಇಡಬೇಕಾಗಿದೆ. ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್ ಮತ್ತು ರೀಸ್ ಟೋಪ್ಲೆ ತಂಡದ ವೇಗದ ಬೌಲಿಂಗ್ ಆಯ್ಕೆಗಳಾಗಿದ್ದಾರೆ. ಇದರ ಜೊತೆಗೆ, ರೋಹಿತ್ ಶರ್ಮಾ, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಶಕ್ತಿಯು ತಂಡಕ್ಕೆ ಬಲವನ್ನು ಒದಗಿಸಲಿದೆ. ಈ ಬಾರಿ ಐಪಿಎಲ್‌ನಲ್ಲಿ ಉತ್ತಮ ಆರಂಭ ಪಡೆಯುವ ಗುರಿಯೊಂದಿಗೆ ಮುಂಬೈ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಶಕ್ತಿಯನ್ನು ಪರೀಕ್ಷಿಸಲಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IPL 2025: ಸಿಎಸ್​ಕೆ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಿಂದ ಹಾರ್ದಿಕ್​ಗೆ ನಿಷೇಧ! ಈ ಸ್ಟಾರ್ ಕ್ರಿಕೆಟರ್​​ ಮುಂಬೈ ಇಂಡಿಯನ್ಸ್​​ ನಾಯಕ