Last Updated:
ಚೆನ್ನೈ ಸೂಪರ್ ಕಿಂಗ್ಸ್ 2025ರ ಐಪಿಎಲ್ 38ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 177 ರನ್ ಗುರಿ ನೀಡಿತು. ಶಿವಂ ದುಬೆ 50, ಜಡೇಜಾ 53 ರನ್ ಗಳಿಸಿದರು.
ಐಪಿಎಲ್ 2025ರ 38ನೇ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಶಿವಂ ದುಬೆ ಹಾಗೂ ಜಡೇಜಾ ಅವರ ಅರ್ಧಶತಕಗಳ ನೆರವಿನಿಂದ ಸಿಎಸ್ಕೆ ಅತಿಥೇಯ ಮುಂಬೈ ತಂಡಕ್ಕೆ ರನ್ಗಳ ಗುರಿ ನೀಡಿದೆ. ಸಿಎಸ್ಕೆ 20 ಓವರ್ಗಳಲ್ಲಿ5 ವಿಕೆಟ್ ಕಳೆದುಕೊಂಡು 176 ರನ್ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಲು ಇಳಿದ ಚೆನ್ನೈ ಸೂಪರ್ ಕಿಂಗ್ಸ್ ನಿಧಾನಗತಿ ಆರಂಭ ಪಡೆಯಿತು. ಅಲ್ಲದೆ ನಾಲ್ಕನೇ ಓವರ್ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ರಚಿನ್ 9 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾದರು. ಅಶ್ವಿನಿ ಕುಮಾರ್ ರಚಿ್ನ ವಿಕೆಟ್ ಪಡೆದು ಮೊದಲ ಆಘಾತ ಕೊಟ್ಟಿದ್ದರು. ಆದರೆ ಇಂದೇ ಪದಾರ್ಪಣೆ ಮಾಡಿದ 17 ವರ್ಷದ ಆಯುಷ್ ಮ್ಹಾತ್ರೆ ಸ್ಫೋಟಕ ಆರಂಭ ಪಡೆದರು. ದೀಪಕ್ ಚಾಹರ್ ಬೌಲಿಂಗ್ನಲ್ಲಿ ಔಟ್ ಆಗುವ ಮುನ್ನ ಅವರು 15 ಎಸೆತಗಳಲ್ಲಿ 32 ರನ್ ಗಳಿಸಿದರು. ಇದರಲ್ಲಿ 4 ಬೌಂಡರಿ, 2 ಆಕರ್ಷಕ ಸಿಕ್ಸರ್ ಸಿಡಿಸಿದ್ದರು. ಆದರೆ ಕಳೆದ ಪಂದ್ಯದಲ್ಲಿ ಮಿಂಚಿದ್ದ ರಶೀದ್ 20 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದರು.
ಆದರೆ ಸ್ಟಾರ್ ಆಲ್ರೌಂಡರ್ ಶಿವಂ ದುಬೆ 32 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 50 ರನ್ ಗಳಿಸಿ ಔಟಾದರು. ಬುಮ್ರಾ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಔಟ್ ಮಾಡಿದರು. ಆದರೆ ದುಬೆ ಮತ್ತು ಜಡೇಜಾ ನಡುವೆ ನಾಲ್ಕನೇ ವಿಕೆಟ್ಗೆ 79 ರನ್ಗಳ ಜೊತೆಯಾಟ ನೀಡಿದ್ದರು. ಇನ್ನು ಜಡೇಜಾ ಕೂಡ ಅರ್ಧಶತಕ ಸಿಡಿಸಿದರು. 4ನೇ ಕ್ರಮಾಂಖದಲ್ಲಿ ಬಡ್ತಿ ಪಡೆದು ಆಡಿದ ಜಡೇಜಾ 5 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ಸಹಿತ ಅಜೇಯ 53 ರನ್ಗಳಿಸಿದರು. ಧೋನಿ 4 ರನ್ಗಳಿಸಷ್ಟೇ ಶಕ್ತವಾದರೆ, ಜೇಮೀ ಓವರ್ಟನ್ ಅಜೇಯ 4 ರನ್ಗಳಿಸಿದರು.
April 20, 2025 9:22 PM IST