IPL 2025: ಆತ ದೊಡ್ಡ ಕ್ರಿಮಿನಲ್, ಅವನಿಂದಲೇ ಫೈನಲ್​​ನಲ್ಲಿ ಪಂಜಾಬ್ ಕಿಂಗ್ಸ್​ಗೆ ಸೋಲಾಯಿತು! ಯುವರಾಜ್ ಸಿಂಗ್ ತಂದೆ ಆರೋಪ | Yograj Singh Slams Shreyas Iye Criminal Offence in IPL 2025 Final Sparks Controversy

IPL 2025: ಆತ ದೊಡ್ಡ ಕ್ರಿಮಿನಲ್, ಅವನಿಂದಲೇ ಫೈನಲ್​​ನಲ್ಲಿ ಪಂಜಾಬ್ ಕಿಂಗ್ಸ್​ಗೆ ಸೋಲಾಯಿತು! ಯುವರಾಜ್ ಸಿಂಗ್ ತಂದೆ ಆರೋಪ | Yograj Singh Slams Shreyas Iye Criminal Offence in IPL 2025 Final Sparks Controversy

Last Updated:

2025ರ ಐಪಿಎಲ್ ಫೈನಲ್ ಪಂದ್ಯವು ಜೂನ್ 4, 2025ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಪಂಜಾಬ್ ಕಿಂಗ್ಸ್ ತಂಡವು 11 ವರ್ಷಗಳ ನಂತರ ಫೈನಲ್‌ಗೆ ತಲುಪಿತ್ತು, ಆದರೆ 191 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಕೇವಲ 184/7 ರನ್‌ಗಳಿಗೆ ಸೀಮಿತವಾಯಿತು. ಶಶಾಂಕ್ ಸಿಂಗ್ ಅವರ ಅರ್ಧಶತಕದ (61 ರನ್) ಉತ್ತಮ ಪ್ರದರ್ಶನವೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಾಗಲಿಲ್ಲ.

ಪಂಜಾಬ್ ಕಿಂಗ್ಸ್ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್

2025ರ ಫೈನಲ್​​ (IPL 2025) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು 6 ರನ್​ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ್ದ ಪಂಜಾಬ್ ತಂಡ ಫೈನಲ್​​ನಲ್ಲಿ ಪ್ರಶಸ್ತಿ ಗೆಲ್ಲುವುದರಲ್ಲಿ ಸ್ವಲ್ಪದರಲ್ಲೆ ಎಡವಿತು. ಪಂಜಾಬ್​ ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನ ತಪ್ಪಿಸಿದ್ದು ಶ್ರೇಯಸ್ ಅಯ್ಯರ್ (Shreyas Iyer), ಅವರೇ ಪಂಜಾಬ್ ಕಿಂಗ್ಸ್ ತಂಡದ ಸೋಲಿ ಬಿಗ್ಗೆಸ್ಟ್ ವಿಲನ್ ಎಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ಯುವರಾಜ್ ಸಿಂಗ್‌ರ ತಂದೆ ಯೋಗರಾಜ್ ಸಿಂಗ್ ಕಟುವಾಗಿ ಟೀಕಿಸಿದ್ದಾರೆ. ಶ್ರೇಯಸ್ ಅಯ್ಯರ್‌ರ ಬ್ಯಾಟಿಂಗ್ ವೈಫಲ್ಯವನ್ನು “ಕ್ರಿಮಿನಲ್ ಅಫೆನ್ಸ್” ಎಂದು ಕರೆದಿರುವ ಯೋಗರಾಜ್, ಅವರಿಂದಾಗಿಯೇ ಪಂಜಾಬ್ ಕಿಂಗ್ಸ್ ಟ್ರೋಫಿಯನ್ನು ಕೈತಪ್ಪಿಸಿಕೊಂಡಿತು ಎಂದು ಆರೋಪಿಸಿದ್ದಾರೆ.

2025ರ ಐಪಿಎಲ್ ಫೈನಲ್ ಪಂದ್ಯವು ಜೂನ್ 4, 2025ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಪಂಜಾಬ್ ಕಿಂಗ್ಸ್ ತಂಡವು 11 ವರ್ಷಗಳ ನಂತರ ಫೈನಲ್‌ಗೆ ತಲುಪಿತ್ತು, ಆದರೆ 191 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಕೇವಲ 184/7 ರನ್‌ಗಳಿಗೆ ಸೀಮಿತವಾಯಿತು. ಶಶಾಂಕ್ ಸಿಂಗ್ ಅವರ ಅರ್ಧಶತಕದ (61 ರನ್) ಉತ್ತಮ ಪ್ರದರ್ಶನವೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಾಗಲಿಲ್ಲ.

ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ನ ನಾಯಕ ಶ್ರೇಯಸ್ ಅಯ್ಯರ್ ಕೇವಲ 2 ಎಸೆತಗಳಲ್ಲಿ 1 ರನ್ ಗಳಿಸಿ ರೊಮಾರಿಯೊ ಶೆಫರ್ಡ್‌ರ ಎಸೆತದಲ್ಲಿ ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿ ಔಟಾದರು. ಈ ಆರಂಭಿಕ ವಿಕೆಟ್ ಪತನವು ಪಂದ್ಯದ ಒಂದು ನಿರ್ಣಾಯಕ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಅಯ್ಯರ್ ವಿಕೆಟ್​ ಬೀಳುತ್ತಿದ್ದಂತೆ ಪಂಜಾಬ್ ಒತ್ತಡಕ್ಕೆ ಒಳಗಾಗಿ ಹೆಚ್ಚು ಡಾಟ್ ಬಾಲ್ ಆಡಿತು. ಇದು ಕೊನೆಯ ಓವರ್​ಗಳಲ್ಲಿ ತಂಡಕ್ಕೆ ಓವರ್​ಗೆ 18 ರನ್​ಗಳಿಸುವ ಅನಿವಾರ್ಯತೆಯನ್ನುಂಟು ಮಾಡಿತು.

ಯೋಗರಾಜ್ ಸಿಂಗ್‌ರ ಟೀಕೆ

ಯೋಗರಾಜ್ ಸಿಂಗ್, ಸುದ್ದಿ ಸಂಸ್ಥೆ ಎಎನ್‌ಐಗೆ ಮಾತನಾಡುತ್ತಾ, ಶ್ರೇಯಸ್ ಅಯ್ಯರ್‌ರ ಬ್ಯಾಟಿಂಗ್‌ನ್ನು ತೀವ್ರವಾಗಿ ಖಂಡಿಸಿದ್ದಾರೆ. “ಫೈನಲ್ ಪಂದ್ಯದಲ್ಲಿ ಪಂಜಾಬ್ ಸೋಲಿಗೆ ಒಬ್ಬನೇ ಅಪರಾಧಿ, ಅದು ಶ್ರೇಯಸ್ ಅಯ್ಯರ್. ಅವರು ಜವಾಬ್ದಾರಿಯಿಂದ ಆಡಿದ್ದರೆ ಪಂಜಾಬ್ ಕಿಂಗ್ಸ್ ಗೆದ್ದಿರುತ್ತಿತ್ತು. ಏಕೆಂದರೆ ಅವರ ನಂತರ ತಂಡದಲ್ಲಿ ಉತ್ತಮ ಆಟಗಾರರೇ ಇರಲಿಲ್ಲ,” ಎಂದು ಯೋಗರಾಜ್ ಕೋಪದಿಂದ ಹೇಳಿದ್ದಾರೆ.

ಶ್ರೇಯಸ್​ ಆಡಿದಾಗಲೆಲ್ಲಾ ಪಂಜಾಬ್ ಕಿಂಗ್ಸ್ ಗೆದ್ದಿತ್ತು. ಅವರ ನಂತರ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರು ಯಾರೂ ಇಲ್ಲ. ಇದನ್ನರಿತು ಅವರು ನಿಧಾನವಾಗಿ ಆಡಬೇಕಿತ್ತು. ನೀನು ಪಂಜಾಬ್ ಕಿಂಗ್ಸ್‌ನ್ನು ಫೈನಲ್‌ಗೆ ಕರೆದೊಯ್ದೆ, ಆದರೆ ಫೈನಲ್‌ನಲ್ಲಿ ನಿನ್ನ ವೈಫಲ್ಯದಿಂದ ತಂಡ ಸೋತಿತು. ವಿರಾಟ್ ಕೊಹ್ಲಿ ಕೇವಲ 40 ರನ್ ಗಳಿಸಿದರೂ, ಅವರ ಆಟ 80 ರನ್‌ಗೆ ಸಮನಾಗಿತ್ತು. ಆದರೆ ನಿನ್ನಿಂದಾಗಿ ತಂಡ ಸೋತಿತು. ನನಗೆ ತುಂಬಾ ಕೋಪ ಬಂದಿದೆ,” ಎಂದು ಹೇಳಿದ್ದಾರೆ.

ಯೋಗರಾಜ್‌ರ ಕೋಪದ ಹಿಂದಿನ ಕಾರಣ

ಯೋಗರಾಜ್ ಸಿಂಗ್‌ರ ಈ ತೀವ್ರ ಟೀಕೆಯ ಹಿಂದೆ ಶ್ರೇಯಸ್ ಅಯ್ಯರ್‌ರ ಆರಂಭಿಕ ವಿಕೆಟ್ ಪತನವು ತಂಡದ ಮೇಲೆ ಉಂಟುಮಾಡಿದ ಒತ್ತಡವೇ ಮುಖ್ಯ ಕಾರಣ. ಅಯ್ಯರ್ ತಂಡವನ್ನು ಫೈನಲ್‌ಗೆ ಕರೆದೊಯ್ದಿದ್ದರಿಂದ ಅವರಿಂದ ದೊಡ್ಡ ಇನ್ನಿಂಗ್ಸ್‌ನ ನಿರೀಕ್ಷೆ ಇತ್ತು. ಆದರೆ, ಅವರ 1 ರನ್‌ನ ವೈಫಲ್ಯವು ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿತು ಎಂದು ಯೋಗರಾಜ್ ಆರೋಪಿಸಿದ್ದಾರೆ. “ನಿನ್ನೆ ಏನಾಯಿತು ಎಂದು ಯಾರೂ ನೋಡುವುದಿಲ್ಲ, ಆದರೆ ಇಂದು ಏನಾಯಿತು ಎಂಬುದೇ ಚರ್ಚೆಯಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ.