ಗಾಯದಿಂದ ಚೇತರಿಕೆ
ಫಾಫ್ ಡು ಪ್ಲೆಸಿಸ್ ಐಪಿಎಲ್ 2025ರ ಏಪ್ರಿಲ್ 10ರಂದು ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ರಜತ್ ಪಾಟಿದಾರ್ರ ಶಾಟ್ನಲ್ಲಿ ಚೆಂಡನ್ನು ತಡೆಯಲು ಎಕ್ಸ್ಟ್ರಾ ಕವರ್ನಿಂದ ಓಡಿದಾಗ ಬೆನ್ನಿನಲ್ಲಿ ನೋವು ಕಾಣಿಸಿಕೊಂಡಿತ್ತು. ಈ ಗಾಯದಿಂದಾಗಿ ಅವರು ಐದು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಆದರೆ, ಈಗ ಸಂಪೂರ್ಣ ಫಿಟ್ನೆಸ್ ಮರಳಿ ಪಡೆದಿರುವ ಫಾಫ್, ತಮ್ಮ ಹಳೆಯ ಫ್ರಾಂಚೈಸಿ ಆರ್ಸಿಬಿಯ ವಿರುದ್ಧ ಆಡಲು ತಯಾರಾಗಿದ್ದಾರೆ. ಈ ಋತುವಿನಲ್ಲಿ ಫಾಫ್ 3 ಪಂದ್ಯಗಳಲ್ಲಿ 81 ರನ್ ಗಳಿಸಿದ್ದು, ಒಂದು ಅರ್ಧಶತಕವನ್ನು (54 ರನ್, ಸಿಎಸ್ಕೆ ವಿರುದ್ಧ) ಒಳಗೊಂಡಿದೆ. ಅವರ ಸ್ಟ್ರೈಕ್ ರೇಟ್ 140.35 ಇದ್ದು, ಆರಂಭಿಕರಾಗಿ ತಂಡಕ್ಕೆ ಒಳ್ಳೆಯ ಆರಂಭ ನೀಡುವ ಸಾಮರ್ಥ್ಯವನ್ನು ತೋರಿದ್ದಾರೆ.
ಇದನ್ನೂ ಓದಿ: IPL ಇತಿಹಾಸದಲ್ಲಿ ಹೆಚ್ಚು ಪಂದ್ಯ ಮಳೆಗೆ ಆಹುತಿಯಾಗಿರುವುದು ಯಾವ ತಂಡದ್ದೂ ಗೊತ್ತಾ?
ತಂಡದ ಸಂಯೋಜನೆಯಲ್ಲಿ ಬದಲಾವಣೆ
ಫಾಫ್ರ ಮರಳುವಿಕೆಯಿಂದ ಡೆಲ್ಲಿ ಕ್ಯಾಪಿಟಲ್ಸ್ನ ಬ್ಯಾಟಿಂಗ್ ಲೈನ್-ಅಪ್ ಮತ್ತಷ್ಟು ಸ್ಟ್ರಾಂಗ್ ಆಗಲಿದೆ. ಅವರ ಫಿಟ್ನೆಸ್ನಿಂದ ಕರುಣ್ ನಾಯರ್ಗೆ ಆರಂಭಿಕ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಫಾಫ್, ಅಭಿಷೇಕ್ ಪೊರೆಲ್ ಜೊತೆಗೆ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ, ಆದರೆ ಕರುಣ್ ನಾಯರ್ 3 ಅಥವಾ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಕಳೆದ ಕೆಲವು ಪಂದ್ಯಗಳಲ್ಲಿ ಕರುಣ್ (135 ರನ್, 4 ಇನಿಂಗ್ಸ್) ಮತ್ತು ಅಭಿಷೇಕ್ (225 ರನ್, ಸ್ಟ್ರೈಕ್ ರೇಟ್ 146) ಉತ್ತಮ ಫಾರ್ಮ್ನಲ್ಲಿದ್ದಾರೆ, ಆದರೆ ಫಾಫ್ರ ಅನುಭವವು ತಂಡಕ್ಕೆ ಹೆಚ್ಚಿನ ಸ್ಥಿರತೆಯನ್ನು ತರುವ ನಿರೀಕ್ಷೆಯಿದೆ. ರಾಹುಲ್ (323) ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ.
ಆರ್ಸಿಬಿ ವಿರುದ್ಧ ಫಾಫ್ರ ಸವಾಲು
2024ರ ಋತುವಿನವರೆಗೆ ಆರ್ಸಿಬಿಯ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್, ಈಗ ಡೆಲ್ಲಿ ಕ್ಯಾಪಿಟಲ್ಸ್ನ ಭಾಗವಾಗಿದ್ದಾರೆ. ಆರ್ಸಿಬಿಯೊಂದಿಗೆ 130 ಪಂದ್ಯಗಳಲ್ಲಿ 4,013 ರನ್ (ಸರಾಸರಿ 35.20, ಸ್ಟ್ರೈಕ್ ರೇಟ್ 136.40) ಗಳಿಸಿದ್ದ ಫಾಫ್, ತಮ್ಮ ಹಳೆಯ ತಂಡದ ವಿರುದ್ಧ ಆಕರ್ಷಕ ಪಂದ್ಯವನ್ನು ಆಡಲು ಕಾತರರಾಗಿದ್ದಾರೆ. ಈ ಪಂದ್ಯವು ಫಾಫ್ಗೆ ಭಾವನಾತ್ಮಕವಾಗಿಯೂ ಮಹತ್ವದ್ದಾಗಿದೆ, ಏಕೆಂದರೆ ಅವರು ಮೊದಲ ಬಾರಿಗೆ ದೆಹಲಿಯ ತವರು ಮೈದಾನದಲ್ಲಿ ಆರ್ಸಿಬಿಯ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಆರ್ಸಿಬಿಯ ವಿರಾಟ್ ಕೊಹ್ಲಿ (392 ರನ್),ಫಿಲ್ ಸಾಲ್ಟ್ (239 ರನ್, ಸ್ಟ್ರೈಕ್ ರೇಟ್ 168) ಹಾಗೂ ದೇವದತ್ ಪಡಿಕ್ಕಲ್ (230 ರನ್) ಡಿಸಿಯ ಬೌಲಿಂಗ್ಗೆ ಸವಾಲಾಗಲಿದ್ದಾರೆ.
ಇದನ್ನೂ ಓದಿ: ಭಾರತ ಮನಸ್ಸು ಮಾಡಿದ್ರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನ ಸರ್ವನಾಶ ಮಾಡುತ್ತೆ! ಪಾಕ್ ಮಾಜಿ ನಾಯಕನ ವಿಡಿಯೋ
ಪಂದ್ಯದ ಕುತೂಹಲ
ಡೆಲ್ಲಿ ಕ್ಯಾಪಿಟಲ್ಸ್ 8 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ, ಆದರೆ ಆರ್ಸಿಬಿ 9 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ 3ನೇ ಸ್ಥಾನದಲ್ಲಿದೆ. ಫಾಫ್ರ ಮರಳುವಿಕೆಯಿಂದ ಡಿಸಿಯ ಬ್ಯಾಟಿಂಗ್ ಶಕ್ತಿಯು ಹೆಚ್ಚಲಿದ್ದು, ಕುಲದೀಪ್ ಯಾದವ್ (12 ವಿಕೆಟ್), ಮಿಚೆಲ್ ಸ್ಟಾರ್ಕ್(11) ಮತ್ತು ಮುಕೇಶ್ ಕುಮಾರ್ (9 ವಿಕೆಟ್) ಬೌಲಿಂಗ್ನಲ್ಲಿ ತಂಡಕ್ಕೆ ಚೈತನ್ಯ ನೀಡಲಿದ್ದಾರೆ.
ಈ ಪಂದ್ಯವನ್ನು ಗೆಲ್ಲುವ ತಂಡ ಪ್ಲೇ ಆಫ್ಗೆ ಮತ್ತಷ್ಟು ಹತ್ತಿರವಾಗಲಿದೆ. ಈ ಪಂದ್ಯದ ಜೊತೆಗೆ ಇನ್ನೊಂದೆ ಒಂದು ಪಂದ್ಯ ಗೆದ್ದರೆ ಸಾಕು ಆ ತಂಡ ಪ್ಲೇ ಆಫ್ ಪ್ರವೇಶಿಸಲಿದೆ.
April 27, 2025 4:47 PM IST