33 ರನ್ಗಳಿಸಿದ್ದ ಪ್ರಭಸಿಮ್ರನ್
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ, ದೃಢನಿಶ್ಚಯದಿಂದ ಬೌಲಿಂಗ್ ಮಾಡಲಿದೆ. ಕೃನಾಲ್ ಪಾಂಡ್ಯ (4-0-25-2), ಸುಯಾಶ್ ಶರ್ಮಾ (4-0-26-2), ಮತ್ತು ರೊಮಾರಿಯೊ ಶೆಫರ್ಡ್ (2-0-18-1) ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಪಂಜಾಬ್ ತಂಡವನ್ನ 157ಕ್ಕೆ ನಿಯಂತ್ರಿಸಿತ್ತು. ಪ್ರಿಯಾಂಶ್ ಆರ್ಯ 22 ರನ್, ಪ್ರಭ್ಸಿಮ್ರನ್ ಸಿಂಗ್ 33 ರನ್, ಶ್ರೇಯಸ್ ಅಯ್ಯರ್ 6 ರನ್, ಜೋಸ್ ಇಂಗ್ಲಿಸ್ 29 ರನ್, ನೆಹಾಲ್ ವಾಧೇರಾ 5 ರನ್, ಸ್ಟೊಯಿನಿಸ್ 1 ,ಶಶಾಂಕ್ ಸಿಂಗ್ 31 ರನ್ ಮತ್ತು ಜಾನ್ಸೆನ್ ಅಜೇಯ 25 ರನ್ ಗಳಿಸಿದ್ದರು.
ಯುವಿ ದಾಖಲೆ ಬ್ರೇಕ್
ಈ ಪಂದ್ಯದಲ್ಲಿ ಪಂಜಾಬ್ನ ಆರಂಭಿಕ ಆಟಗಾರ ಪ್ರಭಸಿಮ್ರಾನ್ ಸಿಂಗ್, ಫ್ರಾಂಚೈಸಿಯ ದಂತಕಥೆ ಆಟಗಾರ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಹಿಂದಿಕ್ಕಿದರು. ಪಂಜಾಬ್ ಕಿಂಗ್ಸ್ ಪರ ಯುವರಾಜ್ 959 ರನ್ (51 ಪಂದ್ಯಗಳಲ್ಲಿ) ಗಳಿಸಿದರೆ, ಈ ಪಂದ್ಯದಲ್ಲಿ ಪ್ರಭಸಿಮ್ರಾನ್ ಯುವರಾಜ್ ಅವರ ರನ್ಗಳ ಸಂಖ್ಯೆಯನ್ನು ಮೀರಿಸಿದರು.
ಪಂಜಾಬ್ ಪರ ಪ್ರಭಮ್ರನ್ 42 ಪಂದ್ಯಗಳಲ್ಲಿ 965 ರನ್ ಗಳಿಸಿದ್ದರು. ಸರಾಸರಿ ಮತ್ತು ಸ್ಟ್ರೈಕ್ ರೇಟ್ ಎರಡರಲ್ಲೂ ಪ್ರಭಸಿಮ್ರಾನ್ ಯುವರಾಜ್ ಗಿಂತ ಉತ್ತಮವಾಗಿದ್ದಾರೆ ಪಂಜಾಬ್ ಪರ ಯುವರಾಜ್ ಅವರ ಸರಾಸರಿ 22.30 ಆಗಿದ್ದರೆ, ಪ್ರಭಸಿಮ್ರನ್ ಅವರ ಸರಾಸರಿ 22.97 ಆಗಿದೆ. ಯುವಿಯ ಸ್ಟ್ರೈಕ್ ರೇಟ್ 127.86 ಆಗಿದ್ದರೆ, ಪ್ರಭಸಿಮ್ರನ್ ಅವರ ಸ್ಟ್ರೈಕ್ ರೇಟ್ 150.55 ಆಗಿದೆ.
ಇದನ್ನೂ ಓದಿ: ಮಿಂಚಿದ ಪಡಿಕ್ಕಲ್, ಕೊಹ್ಲಿ! ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡ RCB; ಎದುರಾಳಿ ನೆಲದಲ್ಲಿ ಸತತ 5ನೇ ಜಯ
ಅಗ್ರಸ್ಥಾನದಲ್ಲಿ ಕೆಎಲ್ ರಾಹುಲ್
ಐಪಿಎಲ್ನಲ್ಲಿ ಪಂಜಾಬ್ ಫ್ರಾಂಚೈಸಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೆಎಲ್ ರಾಹುಲ್ (2548). ಅವರ ನಂತರ ಶಾನ್ ಮಾರ್ಷ್ (2477), ಡೇವಿಡ್ ಮಿಲ್ಲರ್ (1974), ಮಯಾಂಕ್ ಅಗರ್ವಾಲ್ (1513), ಮ್ಯಾಕ್ಸ್ವೆಲ್ (1424), ಕ್ರಿಸ್ ಗೇಲ್ (1339), ವೃದ್ಧಿಮಾನ್ ಸಹಾ (1190), ಮನನ್ ವೋಹ್ರಾ (1106), ಮಂದೀಪ್ ಸಿಂಗ್ (1073), ಕುಮಾರ್ ಸಂಗಕ್ಕಾರ (1009) ಮತ್ತು ಶಿಖರ್ ಧವನ್ (985) ಇದ್ದಾರೆ. ಪಂಜಾಬ್ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಪ್ರಭ್ಸಿಮ್ರನ್ ಪ್ರಸ್ತುತ 12 ನೇ ಸ್ಥಾನದಲ್ಲಿದ್ದಾರೆ.
ಪ್ರಭಸಿಮ್ರನ್ ದಾಖಲೆ
2019ರ ಋತುವಿನಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಪ್ರಭ್ಸಿಮ್ರಾನ್, 2023 ಮತ್ತು 2024 ರ ಋತುಗಳಲ್ಲಿ ಮನ್ನಣೆ ಪಡೆದುಕೊಂಡರು. 2023 ರ ಋತುವಿನಲ್ಲಿ 14 ಪಂದ್ಯಗಳಲ್ಲಿ 358 ರನ್ ಗಳಿಸಿದ್ದ ಪ್ರಭಸಿಮ್ರನ್, 2024 ರ ಋತುವಿನಲ್ಲಿ 14 ಪಂದ್ಯಗಳಲ್ಲಿ 334 ರನ್ ಗಳಿಸಿದ್ದರು. 2023 ರ ಋತುವಿನಲ್ಲಿ ದೆಹಲಿ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಪ್ರಭಸಿಮ್ರಾನ್ ಬೆಳಕಿಗೆ ಬಂದರು. ಈ ಋತುವಿನ ಮೆಗಾ ಹರಾಜಿಗೂ ಮುನ್ನ, ಪಂಜಾಬ್ ಪ್ರಭಸಿಮ್ರನ್ ಅವರನ್ನು 4 ಕೋಟಿಗೆ ಉಳಿಸಿಕೊಂಡಿದೆ. ಪ್ರಸಕ್ತ ಋತುವಿನಲ್ಲಿ ಸಾಧಾರಣ ಪ್ರದರ್ಶನ ನೀಡುವ ಮೂಲಕ ಪ್ರಭಸಿಮ್ರನ್ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ.
ಇದನ್ನೂ ಓದಿ: ಮಿಂಚಿದ ಪಡಿಕ್ಕಲ್, ಕೊಹ್ಲಿ! ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡ RCB; ಎದುರಾಳಿ ನೆಲದಲ್ಲಿ ಸತತ 5ನೇ ಜಯ
ಈ ಋತುವಿನಲ್ಲಿ ಪಂಜಾಬ್ ತಂಡ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಗುಜರಾತ್ ಮತ್ತು ದೆಹಲಿ, ಆರ್ಸಿಬಿ ಮೊದಲ 3 ಸ್ಥಾನಗಳಲ್ಲಿವೆ.
April 20, 2025 8:09 PM IST