IPL 2025: ಆರ್‌ಸಿಬಿ vs ಡೆಲ್ಲಿ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯಗಳನ್ನ ಗೆದ್ದ ತಂಡ ಯಾವುದು? ಬೆಂಗಳೂರಿನಲ್ಲಿ 2 ತಂಡಗಳ ದಾಖಲೆ ಹೇಗಿದೆ? | RCB vs DC The Battle Begins Exploring the Head-to-Head Record Past Results and Key Performers in IPL 2025

IPL 2025: ಆರ್‌ಸಿಬಿ vs ಡೆಲ್ಲಿ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯಗಳನ್ನ ಗೆದ್ದ ತಂಡ ಯಾವುದು? ಬೆಂಗಳೂರಿನಲ್ಲಿ 2 ತಂಡಗಳ ದಾಖಲೆ ಹೇಗಿದೆ? | RCB vs DC The Battle Begins Exploring the Head-to-Head Record Past Results and Key Performers in IPL 2025

ಈ ಋತುವಿನಲ್ಲಿ ಅಂಕಿ ಅಂಶ

ಆರ್‌ಸಿಬಿ ಈ ಋತುವಿನಲ್ಲಿ ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈ ವಿರುದ್ಧ ಗೆಲುವು ಸಾಧಿಸಿದೆ. ಆದರೆ ಚಿನ್ನಸ್ವಾಮಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡಿದೆ. ಡೆಲ್ಲಿ ವಿಶಾಖಪಟ್ಟಣಂ ಮತ್ತು ಚೆನ್ನೈನಲ್ಲಿ ಗೆದ್ದು ವೈವಿಧ್ಯಮಯ ಪಿಚ್‌ಗಳಲ್ಲಿ ಸಾಮರ್ಥ್ಯ ತೋರಿದೆ. ಹಾಗಾಗಿ ಎರಡು ತಂಡಗಳ ನಡುವೆ ಬಿಗ್​ ಫೈಟ್ ನಿರೀಕ್ಷಿಸಬಹುದಾಗಿದೆ.

ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ವಿರಾಟ್ (4 ಪಂದ್ಯಗಳಲ್ಲಿ 185 ರನ್, ಸರಾಸರಿ 61.66) ಮತ್ತು ರಜತ್ ಪಾಟಿದಾರ್ (135 ರನ್) ಮಿಂಚಿದ್ದಾರೆ. ಡೆಲ್ಲಿ ಕಡೆ ಬ್ಯಾಟಿಂಗ್‌ನಲ್ಲಿ ಕೆ.ಎಲ್. ರಾಹುಲ್ (3 ಪಂದ್ಯಗಳಲ್ಲಿ 112 ರನ್) ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ (89 ರನ್) ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ್ ವಿರುದ್ಧ ಕನ್ನಡಿಗ ಪ್ರಸಿಧ್ ಪರಾಕ್ರಮ! 50 ರನ್​ಗಳಿಂದ ಗೆದ್ದು ಬೀಗಿದ ಗುಜರಾತ್

ಹೆಡ್ ಟು ಹೆಡ್ ಮಾಹಿತಿ

ಆರ್‌ಸಿಬಿ ಮತ್ತು ಡೆಲ್ಲಿ ಇದುವರೆಗೆ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 19 ಗೆಲುವು ದಾಖಲಿಸಿದರೆ, ಡೆಲ್ಲಿ 11 ಗೆಲುವು ಪಡೆದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಮುಗಿದಿದೆ. ಚಿನ್ನಸ್ವಾಮಿಯಲ್ಲಿ 12 ಪಂದ್ಯಗಳಲ್ಲಿ ಆರ್‌ಸಿಬಿ 8 ಬಾರಿ ಗೆದ್ದಿದ್ದು, ಡೆಲ್ಲಿ 4 ಗೆಲುವು ಸಾಧಿಸಿದೆ. ಕಳೆದ ಋತುವಿನಲ್ಲಿ ಆರ್‌ಸಿಬಿ 23 ರನ್‌ಗಳಿಂದ ಡೆಲ್ಲಿ ವಿರುದ್ಧ ಜಯ ಗಳಿಸಿತ್ತು.

ಅತಿ ಹೆಚ್ಚುರನ್​ ಗಳಿಸಿದ ತಂಡ ಮತ್ತು ಆಟಗಾರ

ಆರ್​ಸಿಬಿ ಡೆಲ್ಲಿ ವಿರುದ್ಧ 215 ರನ್​ಗಳಿಸಿರುವುದು ಅತಿದೊಡ್ಡ ಮೊತ್ತವಾಗಿದೆ. 95ಕ್ಕೆ ಆಲೌಟ್ ಆಗಿರುವುದು 2 ತಂಡಗಳ ಮುಖಾಮುಖಿಯಲ್ಲಿ ಅತ್ಯಂತ ಕಡಿಮೆ ಮೊತ್ತವಾಗಿದೆ. 1081 ರನ್​ಗಳಿಸುರುವ ವಿರಾಟ್ ಕೊಹ್ಲಿ 2 ತಂಡಗಳ ಮುಖಾಮುಖಿಯಲ್ಲಿ ಹೆಚ್ಚು ರನ್​ಗಳಿಸಿದ ಬ್ಯಾಟರ್ ಆಗಿದ್ದಾರೆ. 128 ರನ್​ಗಳಿಸಿರುವ ಕ್ರೀಸ್​ ಗೇಲ್ ಗರಿಷ್ಠ ವೈಯಕ್ತಿಕ ರನ್​ ಸಿಡಿಸಿದ ಬ್ಯಾಟರ್ ಆಗಿದ್ದಾರೆ. 15 ವಿಕೆಟ್ ಪಡೆದಿರುವ ಚಹಲ್ ಗರಿಷ್ಠ ವಿಕೆಟ್ ಟೇಕರ್​​ ಆಗಿದ್ದಾರೆ.

ಕೊಹ್ಲಿ vs ಸ್ಟಾರ್ಕ್

ವಿರಾಟ್ ಕೊಹ್ಲಿ ಟಿ20ಯಲ್ಲಿ ಸ್ಟಾರ್ಕ್ ವಿರುದ್ಧ 31 ಎಸೆತಗಳಲ್ಲಿ 72 ರನ್ (ಸರಾಸರಿ 72) ಗಳಿಸಿದ್ದಾರೆ. ಆದರೆ ಈ ಋತುವಿನಲ್ಲಿ ಸ್ಟಾರ್ಕ್ 3 ಪಂದ್ಯಗಳಲ್ಲಿ 9 ವಿಕೆಟ್ (ಸರಾಸರಿ 11) ಪಡೆದು ಭೀಕರ ಫಾರ್ಮ್‌ನಲ್ಲಿದ್ದಾರೆ. ಪವರ್‌ಪ್ಲೇ ಈ ಪಂದ್ಯದ ಎರಡೂ ತಂಡಕ್ಕೂ ನಿರ್ಣಾಯಕವಾಗಲಿದೆ.

ಇದನ್ನೂ ಓದಿ: ICC Ranking: ಐಪಿಎಲ್​ ಆಡ್ತಿದ್ರೂ ನೋ ಟೆನ್ಷನ್! ಈಗಲೂ ಶುಭ್​​ಮನ್ ಗಿಲ್ ವರ್ಲ್ಡ್​ ನಂ. 1 ಬ್ಯಾಟ್ಸ್​ಮನ್

ಸ್ಪಿನ್ ಸವಾಲು

ಡೆಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ 3 ಪಂದ್ಯಗಳಲ್ಲಿ 6 ವಿಕೆಟ್ (ಎಕಾನಮಿ 6.0) ಪಡೆದಿದ್ದಾರೆ. ಕೊಹ್ಲಿ ಸ್ಪಿನ್ ವಿರುದ್ಧ ಸುಧಾರಿಸಿದ್ದು, ಹೈ ಮತ್ತು ಸ್ವೀಪ್ ಶಾಟ್‌ಗಳೊಂದಿಗೆ ಎದುರಿಸಲಿದ್ದಾರೆ. ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಸ್ಪಿನ್‌ಗೆ ಪರಿಣತರಾಗಿದ್ದಾರೆ. ಹಾಗಾಗಿ ಡೆಲ್ಲಿ ಸ್ಪಿನ್ ಅಸ್ತ್ರ ಆರ್​ಸಿಬಿಗೆ ಅಷ್ಟೇನು ದೊಡ್ಡ ತಲೆನೋವಾಗುವುದಿಲ್ಲ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IPL 2025: ಆರ್‌ಸಿಬಿ vs ಡೆಲ್ಲಿ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯಗಳನ್ನ ಗೆದ್ದ ತಂಡ ಯಾವುದು? ಬೆಂಗಳೂರಿನಲ್ಲಿ 2 ತಂಡಗಳ ದಾಖಲೆ ಹೇಗಿದೆ?