IPL 2025: ಇನ್ನಿಂಗ್ಸ್ ಕೊನೆಯಲ್ಲಿ ಕನ್ನಡಿಗನ ಮ್ಯಾಜಿಕ್! ಸೋಲಿನ ಸುಳಿಯಲ್ಲಿದ್ದ ಪಂದ್ಯವನ್ನು ರೋಚಕವಾಗಿ ಗೆದ್ದ ಪಂಜಾಬ್!

IPL 2025: ಇನ್ನಿಂಗ್ಸ್ ಕೊನೆಯಲ್ಲಿ ಕನ್ನಡಿಗನ ಮ್ಯಾಜಿಕ್! ಸೋಲಿನ ಸುಳಿಯಲ್ಲಿದ್ದ ಪಂದ್ಯವನ್ನು ರೋಚಕವಾಗಿ ಗೆದ್ದ ಪಂಜಾಬ್!

Last Updated:

ಗುಜರಾತ್ ಟೈಟಾನ್ಸ್ ವಿರುದ್ಧ ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 11 ರನ್‌ಗಳ ರೋಚಕ ಗೆಲುವು ಸಾಧಿಸಿತು.

ವೈಶಾಕ್ ವಿಜಯಕುಮಾರ್ವೈಶಾಕ್ ವಿಜಯಕುಮಾರ್
ವೈಶಾಕ್ ವಿಜಯಕುಮಾರ್

ಐಪಿಎಲ್ 2025ನೇ ಸಾಲಿನ ತಮ್ಮ ಮೊದಲ ಪಂದ್ಯದಲ್ಲಿ ಇಂದು ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆದಿದ್ದು, ಪಂದ್ಯವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ರೋಚಕ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಹಾವು ಏಣಿ ಆಟದಂತೆ ಸಾಗಿದ ಪಂದ್ಯವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಯಲ್ಲಿ ಕನ್ನಡಿಗ ವೈಶಾಕ್ ವಿಜಯಕುಮಾರ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ 11 ರನ್‌ಗಳ ಅಂತರದಲ್ಲಿ ರೋಚಕವಾಗಿ ಗೆದ್ದು ಬೀಗಿತು.