IPL 2025: ಈ ಕಾರಣದಿಂದ ಆರ್‌ಸಿಬಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನ ಪಡೆಯುವ ಸಾಧ್ಯತೆ! ಆಸೀಸ್​ ಲೆಜೆಂಡ್​ ಭವಿಷ್ಯ | Adam Gilchrist predicts RCB will finish last in the points table in the 2025 IPL

IPL 2025: ಈ ಕಾರಣದಿಂದ ಆರ್‌ಸಿಬಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನ ಪಡೆಯುವ ಸಾಧ್ಯತೆ! ಆಸೀಸ್​ ಲೆಜೆಂಡ್​ ಭವಿಷ್ಯ | Adam Gilchrist predicts RCB will finish last in the points table in the 2025 IPL

Last Updated:

ಆರ್‌ಸಿಬಿ ಹಲವು ಬಲಾವಣೆಗಳನ್ನು ಮಾಡಿಕೊಂಡು ಕಣಕ್ಕಿಳಿಯಲು ಸಜ್ಜಾಗಿದೆ. ಅದರಲ್ಲೂ ವಿಶೇಷವಾಗಿ ಇಂದು (ಮಾರ್ಚ್22) ನಡೆಯುವ ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು ಎದುರಿಸಲಿದೆ.

ಐಪಿಎಲ್ಐಪಿಎಲ್
ಐಪಿಎಲ್

ಅಭಿಮಾನಿಗಳ ಫೇವರಿಟ್ ತಂಡ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬರೋಬ್ಬರಿ 17 ಸೀಸನ್‌ಗಳಿಂದ ಆಡ್ತಾ ಇದೆ. ಆದ್ರೆ, ಇದುವರೆಗೂ ಒಂದೆ ಒಂದು ಟ್ರೋಫಿ (Trophy) ಗೆಲ್ಲುವಲ್ಲಿ ತಂಡಕ್ಕೆ ಸಾಧ್ಯವಾಗಿಲ್ಲ. ಈ ಬಾರಿಯಾದ್ರೂ ಕಪ್ ಗೆಲ್ಲಲೇಬೇಕೆಂದು ತಂಡದಲ್ಲಿ ಹಲವು ಬಲಾವಣೆಗಳನ್ನು ಮಾಡಿಕೊಂಡು ಕಣಕ್ಕಿಳಿಯಲು ಸಜ್ಜಾಗಿದೆ. ಅದರಲ್ಲೂ ವಿಶೇಷವಾಗಿ ಇಂದು (ಮಾರ್ಚ್22) ನಡೆಯುವ ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ (KKR) ತಂಡವನ್ನು ಎದುರಿಸಲಿದೆ.

ಆ್ಯಡಂ ಗಿಲ್‌ಕ್ರಿಸ್ಟ್ ಆರ್‌ಸಿಬಿ ಕುರಿತು ಹೇಳಿದ್ದೇನು

ಈ ನಡುವೆ ಅನೇಕ ಕ್ರಿಕೆಟ್ ಪಂಡಿತರು ಆರ್‌ಸಿಬಿ ಕುರಿತು ಭವಿಷ್ಯ ನುಡಿಯುತ್ತಿದ್ದಾರೆ. ಈ ನಡುವೆ ಆಸ್ಟ್ರೇಲಿಯಾದ ಮಾಜಿ ಲೆಜಂಡರಿ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್ ಆರ್‌ಸಿಬಿ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ಅದು ಆರ್‌ಸಿಬಿ ಅಭಿಮಾನಿಗಳನ್ನು ಕೆರಳಿಸಿದೆ. ಹಾಗಿದ್ರೆ ಗಿಲ್‌ಕ್ರಿಸ್ಟ್ ಏನಂದು ಎಂದು ನೋಡೋಣ ಬನ್ನಿ.

RCB 2025 ರ ಐಪಿಎಲ್‌ ಸೀಸನ್‌ನಲ್ಲಿ ಕೊನೆಯ ಸ್ಥಾನದಲ್ಲಿರಲಿದೆ

ಆರ್‌ಸಿಬಿ ಕುರಿತು ಪಾಡ್‌ಕಾಸ್ಟ್ ಒಂದರಲ್ಲಿ ಪ್ರತಿಕ್ರಿಯೆ ನೀಡಿದ ಗಿಲ್‌ಕ್ರಿಸ್ಟ್ ಅವರಿ, RCB 2025 ರ ಐಪಿಎಲ್‌ ಸೀಸನ್‌ನಲ್ಲಿ ಕೊನೆಯ ಸ್ಥಾನದಲ್ಲಿರಬಹುದು ಎಂದು ಹೇಳುವ ಮೂಲಕ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಅಂದಹಾಗೆ ಅವರು ಹೀಗೆ ಹೇಳಿರುವುದಕ್ಕೆ ವಿವರಣೆ ಕೂಡ ನೀಡದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾಘನ್ ಅವರ ಜೊತೆಗಿನ ಕ್ಲಬ್ ಪ್ರೈರಿ ಫೈರ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಗಿಲ್‌ಕ್ರಿಸ್ಟ್, RCB ಇಂಗ್ಲಿಷ್ ಆಟಗಾರರ ಮೇಲೆ ಭಾರೀ ಹೂಡಿಕೆ ಮಾಡಿದೆ, ಹಾಗಾಗಿ ಆ ತಂಡಕ್ಕೆ ಹಿನ್ನಡೆಯಾಗಬಹುದು ಎಂದು ಹೇಳಿದ್ದಾರೆ.

ಇಂಗ್ಲೀಷ್ ಆಟಗಾರರ ನೆಚ್ಚಿಕೊಂಡಿರುವುದೇ ಕಾರಣ

2025ರ ಐಪಿಎಲ್ 18ನೇ ಸೀಸನ್‌ನಲ್ಲಿ RCB ಕೊನೆಯ ಸ್ಥಾನದಲ್ಲಿರುವ ಅವಕಾಶ ಹೆಚ್ಚಿದೆ. ಏಕೆಂದರೆ ಆರ್‌ಸಿಬಿ ತಂಡ ಕೆವಲ ಇಂಗ್ಲೀಷ್ ಆಟಗಾರರನ್ನೇ ಹೆಚ್ಚಾಗಿ ನಂಬಿಕೊಂಡಿದೆ. ಹಾಗಾಗಿ ಈ ಆಟಗಾರರು ಕೈ ಕೊಟ್ಟರೆ ತಂಡಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ಗಿಲ್‌ಕ್ರಿಸ್ಟ್ ವ್ಯಂಗ್ಯವಾಡಿದರು.

ಇದನ್ನೂ ಓದಿ: IPL 2025 KKR vs RCB: ಈಡನ್ ಗಾರ್ಡನ್​​ನಲ್ಲಿ ಅತಿ ಹೆಚ್ಚು ರನ್‌ ಚೇಸ್ ಮಾಡಿ ಗೆದ್ದ ತಂಡಗಳಿವು!

RCB ಅಭಿಮಾನಿಗಳು ಅಥವಾ ಅವರ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ತನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ನಾನು ವಿರಾಟ್ ವಿರುದ್ಧ ಮಾತಾಡ್ತಾನು ಇಲ್ಲ ಅವರ ಅಭಿಮಾನಿಗಳ ವಿರುದ್ಧವೂ ಏನೂ ಮಾತಾಡ್ತಾ ಇಲ್ಲ, ನಾನು ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ, ಆದರೆ ನೀವು ನಿಮ್ಮ ಟೀಮ್ ಮ್ಯಾನೇಜ್ಮೆಂಟ್ ಜೊತೆ ಮಾತನಾಡಬೇಕು ಎಂದು ಕಿವಿ ಮಾತು ಹೇಳಿದರು. 2009ರಲ್ಲಿ ಡೆಕ್ಕನ್ ಚಾರ್ಜಸ್ ತಂಡವನ್ನು ಆರ್‌ಸಿಬಿ ವಿರುದ್ಧ ಗೆಲಲ್ಲಿಸಿದ್ದು ಇದೇ ಗಿಲ್‌ಕ್ರಿಸ್ಟ್ ಎನ್ನುವುದು ವಿಶೇಷ.

ಐಪಿಎಲ್ 2025 ರಲ್ಲಿ ಆರ್‌ಸಿಬಿಯಲ್ಲಿರುವ ಇಂಗ್ಲಿಷ್ ಸ್ಟಾರ್ಸ್

ಐಪಿಎಲ್ 2025 ಮೆಗಾ ಹರಾಜಿನಲ್ಲಿ ಕೆಲವು ಆಟಗಾರರ ದೊಡ್ಡ ಮೊತ್ತದ ಹಣ ನೀಡಿ ಖರೀದಿಸಿದೆ. ವಿಶೇಷವಾಗಿ ಇಂಗ್ಲಿಷ್ ಆಟಗಾರರನ್ನು ಕೇಂದ್ರೀಕರಿಸಿ ಬಿಡ್ ಮಾಡಿತ್ತು. ಫಿಲ್ ಸಾಲ್ಟ್ ಅವರಿಗೆ 11.5 ಕೋಟಿ ಕೊಟ್ಟು ಖರೀದಿಸಿತು. ಮಾತ್ರವಲ್ಲ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ₹8.75 ಕೋಟಿಗೆ ಖರೀದಿಸಿದ. ಇಂಗ್ಲಿಷ್ ಯುವ ಕ್ರಿಕೆಟಿಗ ಜಾಕೋಬ್ ಬೆಥೆಲ್ ₹2.6 ಕೋಟಿಗೆ ತಂಡವನ್ನು ಸೇರಿಕೊಂಡಿದ್ದಾರೆ. ಹೀಗೆ ಇಂಗ್ಲೀಷ್ ಆಟಗರರಿಗೆ ಮನ್ನಣೆ ನೀಡಿರುವುದು ಗಿಲ್ಲಿ ಹೇಳಿಕೆಗೆ ಪ್ರಮುಖ ಕಾರಣವಾಗಿದೆ.