ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್ ಮಾರ್ಚ್ 22ರಿಂದ ಆರಂಭವಾಗಲಿದ್ದು, ಈ ಬಾರಿ ತಂಡಗಳು 300 ರನ್‌ಗಳ ಗಡಿಯನ್ನು ದಾಟುತ್ತವೆಯೇ ಎಂಬ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಮೂಡಿದೆ. ಐಪಿಎಲ್‌ನಲ್ಲಿ ಈವರೆಗೆ 260 ರನ್‌ಗಳಿಗಿಂತ ಹೆಚ್ಚಿನ ಮೊತ್ತ 8 ಬಾರಿ ದಾಖಲಾಗಿದ್ದು, ಇದರಲ್ಲಿ 7 ಬಾರಿ ಕಳೆದ 2024ರ ಸೀಸನ್‌ನಲ್ಲಿ ಸಾಧಿಸಲಾಗಿದೆ. ಈ ದಾಖಲೆಯ ಬ್ಯಾಟಿಂಗ್ ಪ್ರದರ್ಶನದ ನಂತರ, 2025ರಲ್ಲಿ 300 ರನ್‌ಗಳ ಮೈಲಿಗಲ್ಲು ಸಾಧ್ಯವೇ ಎಂಬ ಚರ್ಚೆ ಜೋರಾಗಿದೆ.
ಆಕಾಶ್ ಚೋಪ್ರಾ ಭವಿಷ್ಯ
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ, ಐಪಿಎಲ್ 2025ರಲ್ಲಿ ಖಂಡಿತವಾಗಿಯೂ 300 ರನ್ ದಾಖಲೆ ಸೃಷ್ಟಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡವು ಪವರ್‌ಪ್ಲೇನಲ್ಲಿ ಒಮ್ಮೆಯಲ್ಲ, ಎರಡು ಬಾರಿ 100ಕ್ಕೂ ಹೆಚ್ಚು ರನ್ ಗಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್‌ರಂತಹ ಸ್ಫೋಟಕ ಬ್ಯಾಟರ್‌ಗಳಿರುವ ಎಸ್‌ಆರ್‌ಎಚ್ 300 ರನ್‌ಗಳ ಗಡಿ ದಾಟುವ ಸಾಧ್ಯತೆ ಇದೆ ಎಂದು ಚೋಪ್ರಾ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಬಿ ಡಿವಿಲಿಯರ್ಸ್ ಕೂಡ ಭಾಗವಹಿಸಿದ್ದು, 300 ರನ್ ಸಾಧ್ಯ ಎಂದು ಒಪ್ಪಿಕೊಂಡರೂ ಯಾವ ತಂಡ ಎಂದು ಊಹಿಸಿಲ್ಲ. ಮಾಜಿ ಆರ್‌ಸಿಬಿ ನಿರ್ದೇಶಕ ಮೈಕ್ ಹೆಸ್ಸನ್ ಕೂಡ ಈ ಅಭಿಪ್ರಾಯಕ್ಕೆ ಸಮ್ಮತಿಸಿದ್ದಾರೆ.
ಇದನ್ನೂ ಓದಿ: IPLನ ಯಶಸ್ವಿ ತಂಡ, ಗರಿಷ್ಠ ಸ್ಕೋರ್, ಬ್ಯಾಟಿಂಗ್-ಬೌಲಿಂಗ್ ದಾಖಲೆ! ಶ್ರೀಮಂತ ಲೀಗ್ನ A to Z ರೆಕಾಡ್ಸ್
ಈ ಬಾರೀ ಖಚಿತ ಎಂದ ಲೀಮನ್
ಕೆಕೆಆರ್‌ನ ಕಾರ್ಯತಂತ್ರ ಸಲಹೆಗಾರ ಬೇಥನ್ ಲೀಮನ್, ” ಹೌದು, ಖಂಡಿತವಾಗಿ 300 ರನ್ ದಾಖಲೆ ಸಾಧ್ಯ. ಕಳೆದ ಎರಡು ವರ್ಷಗಳಲ್ಲಿ ದೊಡ್ಡ ಸ್ಕೋರ್‌ಗಳನ್ನು ಕಂಡಿದ್ದೇವೆ. 2024ರಲ್ಲಿ 260 ರನ್‌ಗಳ ಗಡಿ 7 ಬಾರಿ ದಾಟಿವೆ. ಪವರ್‌ಪ್ಲೇನಲ್ಲಿ 100 ರನ್ ಗಳಿಸುವುದು ಸಾಮಾನ್ಯವಾಗಿದೆ. ತಂಡಗಳು ಹೊಸ ನಿಯಮಗಳ ಲಾಭ ಪಡೆಯುತ್ತಿವೆ. ಹೆಚ್ಚುವರಿ ಬ್ಯಾಟರ್‌ಗಳನ್ನು ಇರಿಸಿಕೊಂಡು ಆಕ್ರಮಣಕಾರಿ ಬ್ಯಾಟಿಂಗ್ ನಡೆಸುತ್ತಿವೆ ಎಂದು ತಿಳಿಸಿದ್ದಾರೆ. ಇಂಗ್ಲೆಂಡ್ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದಾಗ ಲೀಮನ್ ಪ್ರಮುಖ ವಿಶ್ಲೇಷಕರಾಗಿದ್ದರು.
ಐಪಿಎಲ್‌ನ ಅತಿ ಹೆಚ್ಚು ತಂಡದ ಸ್ಕೋರ್‌ಗಳು
ಸನ್‌ರೈಸರ್ಸ್ ಹೈದರಾಬಾದ್ vs ಆರ್‌ಸಿಬಿ (2024): 287/3
ಸನ್‌ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ (2024): 277/3
ಕೋಲ್ಕತ್ತಾ ನೈಟ್ ರೈಡರ್ಸ್ vs ದೆಹಲಿ ಕ್ಯಾಪಿಟಲ್ಸ್ (2024): 272/7
ಸನ್‌ರೈಸರ್ಸ್ ಹೈದರಾಬಾದ್ vs ದೆಹಲಿ ಕ್ಯಾಪಿಟಲ್ಸ್ (2024): 266/7
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪುಣೆ ವಾರಿಯರ್ಸ್ (2013): 263/5
ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್ (2024): 262/8
ಕೋಲ್ಕತ್ತಾ ನೈಟ್ ರೈಡರ್ಸ್ vs ಆರ್‌ಸಿಬಿ (2024): 261/7
ಸನ್‌ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ (2024): 260/6
ಇದನ್ನೂ ಓದಿ: IPLನ ಯಶಸ್ವಿ ತಂಡ, ಗರಿಷ್ಠ ಸ್ಕೋರ್, ಬ್ಯಾಟಿಂಗ್-ಬೌಲಿಂಗ್ ದಾಖಲೆ! ಶ್ರೀಮಂತ ಲೀಗ್ನ A to Z ರೆಕಾಡ್ಸ್
2024ಕ್ಕೂ ಮುನ್ನ ಐಪಿಎಲ್‌ನ ಅತ್ಯಧಿಕ ಸ್ಕೋರ್ 263/5 ಆಗಿತ್ತು, ಇದನ್ನು ಆರ್‌ಸಿಬಿ 2013ರಲ್ಲಿ ದಾಖಲಿಸಿತ್ತು. ಈ ದಾಖಲೆಯನ್ನು ಮುರಿಯಲು 11 ವರ್ಷ ಬೇಕಾಯಿತು. ಆದರೆ 2024ರಲ್ಲಿ 260 ರನ್‌ಗಳ ಗಡಿ 7 ಬಾರಿ ದಾಟಿವೆ. ಹಾಗಾಗಿ 300 ರನ್‌ಗಳ ಗಡಿ ದಾಟುವ ಸಾಧ್ಯತೆಯ ಬಗ್ಗೆ ಚರ್ಚೆ ಜೋರಾಗಿದೆ.
March 21, 2025 8:42 PM IST