Last Updated:
ಐಪಿಎಲ್ನಲ್ಲಿ ಮೊದಲ ಪಂದ್ಯವನ್ನಾಡಿದ ಗುಜರಾತ್ ಟೈಟನ್ಸ್ ಬೌಲರ್ ಕರೀಮ್ ಜನತ್ ಬರೋಬ್ಬರಿ 30 ರನ್ ಬಿಟ್ಟುಕೊಟ್ಟರು. 14 ವರ್ಷದ ಸೂರ್ಯವಂಶಿ 3 ಬೌಂಡರಿ, 3 ಸಿಕ್ಸರ್ ಸಹಿತ 30 ರನ್ ಚಚ್ಚಿದರು.
ಅಫ್ಘಾನಿಸ್ತಾನದ ವೇಗಿ ಕರೀಮ್ ಜನತ್ (Karim Janat) ಏಪ್ರಿಲ್ 28 ಸೋಮವಾರದಂದು ತಮ್ಮ ಐಪಿಎಲ್ ಚೊಚ್ಚಲ ಪಂದ್ಯವನ್ನಾಡಿದರು. ಗುಜರಾತ್ ಟೈಟನ್ಸ್ (Gujarat Titans) ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಕೊಂಡಿತ್ತು. ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ಸಿಗದಿದ್ದರೂ ಬೌಲಿಂಗ್ ಮಾಡಲು ಅವಕಾಶ ಕೊಡಲಾಯಿತು. ಅವರ ಮುಂದೆ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryanvanshi)ಬ್ಯಾಟಿಂಗ್ ಮಾಡುತ್ತಿದ್ದರು, ಸೂರ್ಯವಂಶಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಕರೀಮ್ ಜನತ್ ಅವರ ಐಪಿಎಲ್ ವೃತ್ತಿಜೀವನ ಆರಂಭವಾಗುವ ಮೊದಲೇ ಕೊನೆಗೊಳಿಸುವ ಭೀತಿಯನ್ನು ಉಂಟು ಮಾಡಿದರು. ಭಾರತದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಕರೀಮ್ ಜನತ್ ಕೊನೆಯ ಎರಡು ಓವರ್‌ಗಳಲ್ಲಿ 66 ರನ್‌ಗಳನ್ನು ನೀಡಿದ್ದಾರೆ ಎಂದು ತಿಳಿದರೆ ಖಂಡಿತ ಶಾಕ್ ಆಗುತ್ತೀರ.
ಒಂದೇ ಓವರ್‌ನಲ್ಲಿ 3 ಸಿಕ್ಸರ್ಸ್, 3 ಬೌಂಡರಿ
201ರನ್ಗಳ ಚೇಸಿಂಗ್ ವೇಳೆ ರಾಜಸ್ಥಾನ ರಾಯಲ್ಸ್‌ನ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ವಿರುದ್ಧ ಕರೀಮ್ ಜನತ್ ಬೌಲಿಂಗ್ ಮಾಡಲು ಬಂದರು. ಕರೀಮ್ ಜನತ್ ಅವರ ಮೊದಲ ಎಸೆತದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್ ಬಾರಿಸಿದರು, ಎರಡನೇ ಎಸೆತದಲ್ಲಿ ಬೌಂಡರಿ ಮತ್ತು ಮೂರನೇ ಎಸೆತದಲ್ಲಿ ಮತ್ತೆ ಸಿಕ್ಸರ್ ಬಾರಿಸಿದರು. ಇದಾದ ನಂತರ, ವೈಭವ್ ಸೂರ್ಯವಂಶಿ ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ಮತ್ತೊಮ್ಮೆ ಬೌಂಡರಿ ಮತ್ತು ಕೊನೆಯ ಎಸೆತದಲ್ಲಿ ಒಂದು ಸಿಕ್ಸರ್ ಬಾರಿಸಿದರು. ಕರೀಮ್ ಜನತ್ ತಮ್ಮ ಮೊದಲ ಓವರ್‌ನಲ್ಲಿ ಒಟ್ಟು 30 ರನ್ ಬಿಟ್ಟುಕೊಟ್ಟರು. ಇದಾದ ನಂತರ, ನಾಯಕ ಶುಭಮನ್ ಗಿಲ್ ಅವರಿಗೆ ಮತ್ತೆ ಓವರ್ ಕೊಡುವ ಮನಸ್ಸೇ ಮಾಡಲಿಲ್ಲ. ಆದರೆ ವೈಭವ್ ಆವ ಓವರ್ ಬಳಿಕೆ ಕೇವಲ 10 ಎಸೆತಗಳ ಅಂತರದಲ್ಲಿ ಔಟ್ ಆದರು. ಆದರೆ ಐಪಿಎಲ್ನಲ್ಲಿ 2ನೇ ವೇಗದ ಶತಕ ಸಿಡಿಸಿ ದಾಖಲೆ ಬರೆದರು. 35 ಎಸೆತಗಳಲ್ಲಿ ಶತಕ ಸಿಡಿಸಿದ ಅವರು ಭಾರತದ ಪರ ವೇಗದ ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು.
ಇದನ್ನೂ ಓದಿ: ವೈಭವ್ ವಿಶ್ವದಾಖಲೆಯ ಶತಕಕ್ಕೆ ಧೂಳೀಪಟವಾಯ್ತು ಗುಜರಾತ್! ರಾಜಸ್ಥಾನಕ್ಕೆ 8 ವಿಕೆಟ್ಗಳ ಭರ್ಜರಿ ಜಯ
ಐಪಿಎಲ್ನಲ್ಲೇ ಕೆಟ್ಟ ದಾಖಲೆ
ಪದಾರ್ಪಣೆ ಪಂದ್ಯದಲ್ಲೇ ಕರೀಮ್ ಜನತ್ ಕಳಪೆ ದಾಖಲೆ ಬರೆದರು. ಏಕೆಂದರೆ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಯಾವುದೇ ಬೌಲರ್ ಮೊದಲ ಓವರ್‌ನಲ್ಲಿ 25 ಕ್ಕಿಂತ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿಲ್ಲ. 2019 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದ ವರುಣ್ ಚಕ್ರವರ್ತಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 25 ರನ್ ಬಿಟ್ಟುಕೊಟ್ಟಿದ್ದ ಕಳಪೆ ದಾಖಲೆಯಾಗಿತ್ತು. ಇದೀಗ ಕರೀಮ್ ಜನತ್ 30 ರನ್‌ಗಳನ್ನು ಬಿಟ್ಟುಕೊಟ್ಟರು.
ಕಳೆದ 2 ಓವರ್‌ಗಳಲ್ಲಿ 66 ರನ್
ಇದಲ್ಲದೆ, ಭಾರತದಲ್ಲಿ ಆಡುವಾಗ ಟಿ20 ಕ್ರಿಕೆಟ್‌ನಲ್ಲಿ ಕೊನೆಯ ಎರಡು ಓವರ್‌ಗಳಲ್ಲಿ ಕರೀಮ್ ಜನತ್ ಒಟ್ಟು 66 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಭಾರತದಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಅವರು ಒಂದೇ ಓವರ್‌ನಲ್ಲಿ 36 ರನ್‌ಗಳನ್ನು ನೀಡಿದ್ದರು. ಕಳೆದ ವರ್ಷ ಜನವರಿಯಲ್ಲಿ ಭಾರತದ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಕರೀಮ್ ಜನತ್ ಕೊನೆಯ ಓವರ್ ಬೌಲಿಂಗ್ ಮಾಡಿದ್ದರು. ಆ ಓವರ್‌ನಲ್ಲಿ ಭಾರತದ ಸ್ಫೋಟಕ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಒಟ್ಟು 36 ರನ್ ಚಚ್ಚಿದ್ದರು. ಹೀಗಾಗಿ ಕರೀಮ್ ಭಾರತದಲ್ಲಿ ಮಾಡಿದ ತಮ್ಮ ಕಳೆದ ಎರಡು ಓವರ್‌ಗಳಲ್ಲಿ 66 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದರಿಂದ ಭವಿಷ್ಯದಲ್ಲಿ ಅವರಿಗೆ ಗುಜರಾತ್ ಟೈಟನ್ಸ್‌ನಲ್ಲಿ ಅವಕಾಶ ಸಿಗದಿರಬಹುದು ಎಂದು ಹೇಳಬಹುದು. ಏಕೆಂದರೆ ಜೆರಾಲ್ಡ್ ಕೊಯೆಟ್ಜಿ ಮತ್ತು ದಾಸುನ್ ಶನಕ ಪ್ರಸ್ತುತ ಜಿಟಿಯಲ್ಲಿ ಬೆಂಚ್‌ಗೆ ಸೀಮಿತರಾಗಿದ್ದಾರೆ. ಬಹುಶಃ ಮುಂದಿನ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಬಹುದು.
ಇದನ್ನೂ ಓದಿ: 2008ರಲ್ಲಿ ಡೆಲ್ಲಿ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಲಿಲ್ಲ? ಕಾರಣ ಬಿಚ್ಚಿಟ್ಟ ಅಂದಿನ ನಾಯಕ ಸೆಹ್ವಾಗ್
ಪಂದ್ಯದ ವಿವರ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 209ರನ್ಗಳಿಸಿತ್ತು. ಶುಭ್ಮನ್ ಗಿಲ್ 84, ಜೋಸ್ ಬಟ್ಲರ್ 50, ಸಾಯಿ ಸುದರ್ಶನ್ 39 ರನ್ಗಳಿಸಿದ್ದರು. 210 ರನ್ಗಳ ಗುರಿಯನ್ನ ರಾಜಸ್ಥಾನ್ ರಾಯಲ್ಸ್ ಕೇವಲ 15.5 ಓವರ್‌ಗಳಲ್ಲಿ ಚೇಸ್ ಮಾಡಿದರು. ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದರು. ಒಟ್ಟಾರೆ 38 ಎಸೆತಗಳಲ್ಲಿ 7 ಬೌಂಡರಿ, 11 ಸಿಕ್ಸರ್ಗಳ ಸಹಿತ 101 ರನ್ಗಳಿಸಿ ಗೆಲುವಿನ ರೂವಾರಿಯಾದರು.
April 29, 2025 4:07 PM IST