IPL 2025: ಐಪಿಎಲ್‌ನಲ್ಲಿ 18 ವರ್ಷದಿಂದ ಆಡ್ತಾ ಇರುವ ಧೋನಿ, ಕೊಹ್ಲಿ, ರೋಹಿತ್‌ಗೆ ಬಿಸಿಸಿಐನಿಂದ ಗೌರವ! ಕನ್ನಡಿಗನನ್ನು ಕಡೆಗಣಿಸಿದ್ಯಾಕೆ? | IPL 2025 Dhoni Rohit Virat Honored Manish Pandey Ignored

IPL 2025: ಐಪಿಎಲ್‌ನಲ್ಲಿ 18 ವರ್ಷದಿಂದ ಆಡ್ತಾ ಇರುವ ಧೋನಿ, ಕೊಹ್ಲಿ, ರೋಹಿತ್‌ಗೆ ಬಿಸಿಸಿಐನಿಂದ ಗೌರವ! ಕನ್ನಡಿಗನನ್ನು ಕಡೆಗಣಿಸಿದ್ಯಾಕೆ? | IPL 2025 Dhoni Rohit Virat Honored Manish Pandey Ignored

ಧೋನಿ, ರೋಹಿತ್  ಹಾಗೂ ವಿರಾಟ್‌ಗೆ ಸಿಕ್ಕ ಗೌರವ ಮನೀಶ್‌ ಪಾಂಡೆಗೇಕಿಲ್ಲ?

ಐಪಿಎಲ್ 2008ನೇ ಆವೃತ್ತಿಯಿಂದಲೂ ಎಂ ಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಮಾತ್ರವಲ್ಲ ಎಲ್ಲಾ 18 ಸೀಸನ್‌ಗಳನ್ನೂ ಕೂಡ ಆಡಿಕೊಂಡು ಬಂದಿದ್ದಾರೆ. ಹಾಗಾಗಿ ಈ ಮೂವರು ಲೆಜಂಡ್ ಆಟಗಾರರನ್ನು ಬಿಸಿಸಿಐ ಅಭಿನಂದಿಸಿದೆ. ಆದ್ರೆ, ಈ ಸಾಲಿನಲ್ಲಿ ಇರುವ ಕರ್ನಾಟಕ ಮೂಲದ ಸ್ಟಾರ್ ಬ್ಯಾಟ್ಸಮನ್ ಹಾಗೂ ಐಪಿಎಲ್‌ನಲ್ಲಿ ಮೊದಲ ಶತಕ ಸಿಡಿಸಿದ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿರುವ ಮನೀಶ್ ಪಾಂಡೆ ಅವರನ್ನು ಬಿಸಿಸಿಐ ಕಡೆಗಣಿಸಿದೆ.

ಮನೀಶ್ ಪಾಂಡೆ ಕೆಕೆಆರ್ ತಂಡದ ಭಾಗವಾಗಿದ್ದಾರೆ.

ಸದ್ಯ, ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಮನೀಶ್ ಪಾಂಡೆ. ಅವರು ಐಪಿಎಲ್‌ನ ಎರಡನೇ ಸೀಸನ್ 2009 ರಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಗಮನಸೆಳೆದಿದ್ದರು. ಆ ಋತುವಿನಲ್ಲಿ ಆರ್‌ಸಿಬಿ ಪರ ಆಡುವಾಗ, ಮನೀಶ್ ಪಾಂಡೆ ಡೆಕ್ಕನ್ ಚಾರ್ಜರ್ಸ್ ವಿರುದ್ಧ 114 ರನ್‌ಗಳ ಅದ್ಭುತ ಶತಕ ಗಳಿಸಿದರು. ಈಗ ಅವರು ಐಪಿಎಲ್‌ನ 18 ನೇ ಸೀಸನ್ ಅಂದರೆ ಐಪಿಎಲ್ 2025 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಭಾಗವಾಗಿದ್ದಾರೆ. ಕೆಕೆಆರ್ ಅವರನ್ನು 75 ಲಕ್ಷ ರೂ.ಗೆ ಖರೀದಿಸಿದೆ.

18 ವರ್ಷ ಆಡಿರುವ ಮನೀಶ್‌ಗೆ ಸಿಗದ ಗೌರವ

ಐಪಿಎಲ್ 18 ನೇ ವರ್ಷದ ಹಾದಿಯಲ್ಲಿ ನಿರಂತರವಾಗಿ ಎಲ್ಲಾ ಸೀಸನ್‌ಗಳನ್ನು ಆಡಿದ್ದಕ್ಕಾಗಿ ಧೋನಿ, ರೋಹಿತ್ ಮತ್ತು ವಿರಾಟ್ ಅವರಿಗೆ ಸ್ಮರಣಿಕೆಗಳನ್ನು ನೀಡುವ ಮೂಲಕ ಗೌರವಿಸಲಾಗಿದೆ. ಆದ್ರೆ, ಐಪಿಎಲ್‌ನಲ್ಲಿ ಇದೇ ಸಾಲಿನಲ್ಲಿರುವ ಮನೀಶ್ ಪಾಂಡೆ ಅವರಿಗೂ ಅದೇ ಗೌರವ ಸಿಗಬೇಕಿತ್ತು. ಆದರೆ, ಧೋನಿ, ರೋಹಿತ್ ಮತ್ತು ವಿರಾಟ್ ಅವರನ್ನು ಸನ್ಮಾನಿಸಿದಂತೆ ಮನೀಶ್ ಪಾಂಡೆ ಅವರನ್ನು ಸನ್ಮಾನಿಸಿರುವುದು ಕಂಡು ಬಂದಿಲ್ಲ. ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲಿದೆ. ಮಾತ್ರವಲ್ಲ ಈ ಬಗ್ಗೆ ಐಪಿಎಲ್ ಆಯೋಜಕರು ಕೂಡ ಮೌನವಾಗಿರುವುದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ.

ಸಾಧನೆ ಒಂದೇ ಆಗಿರುವಾಗ ಗೌರವ ಯಾಕಿಲ್ಲ?

ಕ್ರಿಕೆಟ್‌ನ ನಿಯಮಗಳ ಪ್ರಕಾರ ಎಲ್ಲಾ ಆಟಗಾರರೂ ಒಂದೇ ಆಗಿರುವಾಗ ಪ್ರತಿಯೊಬ್ಬ ಆಟಗಾರನ ಸಮಾನ ಪ್ರದರ್ಶನಕ್ಕೆ ಸಮಾನ ಗೌರವ ನೀಡಬೇಕು. ಆದರೆ ಮನೀಶ್ ಪಾಂಡೆ ವಿಷಯದಲ್ಲಿ ಇದು ಕಂಡುಬರಲಿಲ್ಲ. ಧೋನಿ, ರೋಹಿತ್ ಮತ್ತು ವಿರಾಟ್‌ಗೆ ಸಿಕ್ಕ ಗೌರವ ಇವರಿಗೆ ಸಿಗಲಿಲ್ಲ.

18 ವರ್ಷಗಳಲ್ಲಿ ಮನೀಶ್ ಪಾಂಡೆ ಸಾಧನೆ

ಐಪಿಎಲ್ ನಲ್ಲಿ 18 ವರ್ಷಗಳನ್ನು ಆಡಿರುವ ಕನ್ನಡಿಗ ಮನೀಶ್ ಪಾಂಡೆ ಅವರ ಪ್ರದರ್ಶನದ ಬಗ್ಗೆ ನೋಡುವುದಾದರೆ, ಈ ಅವಧಿಯಲ್ಲಿ ಅವರು ಮುಂಬೈ ಇಂಡಿಯನ್ಸ್, ಆರ್‌ಸಿಬಿ, ಪುಣೆ ವಾರಿಯರ್ಸ್, ಕೆಕೆಆರ್, ಸನ್‌ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ 7 ತಂಡಗಳ ಪರ ಆಡಿದ್ದಾರೆ. ಅವರು ಈ 7 ತಂಡಗಳೊಂದಿಗೆ ಇಲ್ಲಿಯವರೆಗೆ 172 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 160 ಇನ್ನಿಂಗ್ಸ್‌ಗಳಲ್ಲಿ 1 ಶತಕ ಸೇರಿದಂತೆ ಬರೋಬ್ಬರಿ 3869 ರನ್‌ಗಳನ್ನು ಗಳಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IPL 2025: ಐಪಿಎಲ್‌ನಲ್ಲಿ 18 ವರ್ಷದಿಂದ ಆಡ್ತಾ ಇರುವ ಧೋನಿ, ಕೊಹ್ಲಿ, ರೋಹಿತ್‌ಗೆ ಬಿಸಿಸಿಐನಿಂದ ಗೌರವ! ಕನ್ನಡಿಗನನ್ನು ಕಡೆಗಣಿಸಿದ್ಯಾಕೆ?