IPL 2025: ‘ಐಪಿಎಲ್‌ನಿಂದ ರಿಯಾನ್ ಪರಾಗ್‌ರನ್ನು ಬ್ಯಾನ್ ಮಾಡಿ’! ಸ್ಟಾರ್ ಬ್ಯಾಟರ್‌ ಕುರಿತು ಹೀಗ್ಯಾಕಂತಿದ್ದಾರೆ ಫ್ಯಾನ್ಸ್? | Riyan Parag Behavior Fans Outrage IPL Ban Demand

IPL 2025: ‘ಐಪಿಎಲ್‌ನಿಂದ ರಿಯಾನ್ ಪರಾಗ್‌ರನ್ನು ಬ್ಯಾನ್ ಮಾಡಿ’! ಸ್ಟಾರ್ ಬ್ಯಾಟರ್‌ ಕುರಿತು ಹೀಗ್ಯಾಕಂತಿದ್ದಾರೆ ಫ್ಯಾನ್ಸ್? | Riyan Parag Behavior Fans Outrage IPL Ban Demand

Last Updated:

ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್‌ಗಳಿಂದ ಗೆದ್ದು ಮೊದಲ ಗೆಲುವು ದಾಖಲಿಸಿತು. ಇದೇ ಪಂದ್ಯದ ಬಳಿಕ ರಿಯಾನ್ ಪರಾಗ್ ತೋರಿದ ವರ್ತನೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.

ರಿಯಾನ್ ಪರಾಗ್ರಿಯಾನ್ ಪರಾಗ್
ರಿಯಾನ್ ಪರಾಗ್

ನಿನ್ನೆ (ಮಾರ್ಚ್30) ಗುವಾಹಟಿಯಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ (CSK ) ವಿರುದ್ಧದ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ (Rajasthan Royals) ತಂಡ 6 ರನ್‌ಗಳ ಅಂತರದಲ್ಲಿ ಗೆದ್ದುಕೊಂಡಿತು. ಆ ಮೂಲಕ ರಾಜಸ್ಥಾನ ತಂಡ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಸತತ ಎರಡು ಸೋಲು ಕಂಡಿತು. ಪಂದ್ಯದ ಬಳಿ ರಿಯಾನ್ ಪರಾಗ್ (Riyan Parag) ತೋರಿದ ವರ್ತನೆ ಅವರನ್ನು ಐಪಿಎಲ್‌ನಿಂದ ಬ್ಯಾನ್ ಮಾಡಿ ಎಂದು ಅಭಿಮಾನಿಗಳು ಆಗ್ರಹಿಸುವಂತೆ ಮಾಡಿದೆ.

ಮೂರು ಪಂದ್ಯಗಳಿಗೆ ನಾಯಕನಾಗಿದ್ದ ರಿಯಾನ್

2025 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೊದಲ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ, ಗುವಾಹಟಿಯಲ್ಲಿ ನಡೆದ ತಮ್ಮ ಕೊನೆಯ ತವರಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ರೋಚಕ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ಗಾಯಾಳು ಸಂಜು ಸ್ಯಾಮ್ಸನ್ ಬದಲಿಗೆ ಮೂರು ಪಂದ್ಯಗಳನ್ನು ಮುನ್ನಡೆಸಿದ ಯುವ ಆಟಗಾರ ರಿಯಾನ್ ಪರಾಗ್ ಅವರಿಗೆ ಇದು ನಾಯಕನಾಗಿ ಮೊದಲ ಗೆಲುವಾಯಿತು.

ಏನಿದು ಘಟನೆ?

ಗುವಾಹಟಿಯಲ್ಲಿ ರಾಜಸ್ಥಾನದ ಕೊನೆಯ ಪಂದ್ಯವಾದ್ದರಿಂದ, ಮೈದಾನದ ಸಿಬ್ಬಂದಿ ಸದಸ್ಯರು ಸ್ಥಳೀಯ ಆಟಗಾರ ಹಾಗೂ ನಾಯಕನಾಗಿರುವ ಪರಾಗ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ಇದಕ್ಕೆ ಸಮ್ಮತಿಸಿ ಸೆಲ್ಫಿ ನೀಡಿದರು. ಫೋಟೋ ತೆಗೆದುಕೊಂಡ ಬಳಿ ಅವರು ಸಿಬ್ಬಂದಿಗೆ ಮೊಬೈಲ್ ವಾಪಾಸ್ ನೀಡದೆ ಎಸೆದಿದ್ದಾರೆ. ಇವರು ತೋರಿದ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ನೆಟ್ಟಿಗರು ರಿಯಾನ್ ಪರಾಗ್ ಅವರನ್ನು ಐಪಿಎಲ್‌ನಿಂದಲೇ ಬ್ಯಾನ್ ಮಾಡಿ ಎಂದು ಪೋಸ್ಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: IPL 2025: ಪಂದ್ಯದ ಸೋಲು ಖಚಿತವಾದಾಗ ಮಾತ್ರ ಬ್ಯಾಟಿಂಗ್‌ಗೆ ಬರ್ತಾರಾ ಮಹಿ? ಏನ್ ಹೇಳುತ್ತೆ ಧೋನಿ ಟ್ರ್ಯಾಕ್ ರೆಕಾರ್ಡ್

ಮೊದಲ  ಗೆಲುವು ಕಂಡ ರಾಜಸ್ಥಾನ

2023 ರಲ್ಲಿ ರಾಜಸ್ಥಾನ್ ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದ ಜೊತೆಗೆ ಗುವಾಹಟಿಯ ಬರ್ಸಪರ ಕ್ರೀಡಾಂಗಣವನ್ನು ಕೂಡ ತಮ್ಮ ಎರಡನೇ ತವರು ಮೈದಾನವಾಗಿ ಅಳವಡಿಸಿಕೊಂಡಿತು. ಅಸ್ಸಾಂ ಮೂಲದ ಪರಾಗ್ ಅವರಿಗೆ ಮೊದಲ 3 ಪಂದ್ಯಗಳಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಗಿತ್ತು.

ರಾಜಸ್ಥಾನ ತಂಡವು ಈ ಋತುವಿನಲ್ಲಿ ಕೆಕೆಆರ್ ವಿರುದ್ಧ ಮೊದಲ ಪಂದ್ಯದಲ್ಲಿ ಹೈದರಾಬಾದ್ ಹಾಗೂ ಎರಡನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋತ ಬಳಿಕ ಮೂರನೇ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ರೋಚಕವಾಗಿ ಗೆದ್ದು ಬೀಗಿತು.