ಚಂಡೀಗಢದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 111 ರನ್ಗಳಿಗೆ ಆಲೌಟ್ ಆಯಿತು. ಆದರೆ, ಯುಜವೇಂದ್ರ ಚಹಲ್ರ 4 ವಿಕೆಟ್ (28ಕ್ಕೆ4) ಮತ್ತು ಮಾರ್ಕೋ ಜಾನ್ಸನ್ರ 3 ವಿಕೆಟ್ (17ಕ್ಕೆ3) ನೇತೃತ್ವದ ಬೌಲಿಂಗ್ ದಾಳಿಯಿಂದ ಕೆಕೆಆರ್ 15.1 ಓವರ್ಗಳಲ್ಲಿ 95 ರನ್ಗೆ ಆಲೌಟ್ ಆಯಿತು. ಕೆಕೆಆರ್ 7.3 ಓವರ್ಗಳಲ್ಲಿ 62/2 ರನ್ ಗಳಿಸಿ ಸುಲಭವಾಗಿ ಗೆಲ್ಲುವ ಸ್ಥಿತಿಯಲ್ಲಿತ್ತು, ಆದರೆ ಚಹಲ್ ಮತ್ತು ಜಾನ್ಸನ್ರ ದಾಳಿಗೆ ದಿಢೀರ್ ಕುಸಿತ ಕಂಡಿತು. ಶ್ರೇಯಸ್ ಅಯ್ಯರ್ರ ನಾಯಕತ್ವದ ಪಿಬಿಕೆಎಸ್ ಈ ಗೆಲುವಿನೊಂದಿಗೆ ಐಪಿಎಲ್ನಲ್ಲಿ ಕಡಿಮೆ ಮೊತ್ತವನ್ನು ರಕ್ಷಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಪಂಜಾಬ್ ಕಿಂಗ್ಸ್! ಕೆಕೆಆರ್ ವಿರುದ್ಧ 112 ರನ್ಗಳ ಗುರಿಯನ್ನ ಡಿಫೆಂಡ್ ಮಾಡಿ ಗೆಲುವು
2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇದೇ ಇಲೆವನ್ ಪಂಜಾಬ್ ವಿರುದ್ಧ 116 ರನ್ಗಳನ್ನು ಡಿಫೆಂಡ್ ಮಾಡಿಕೊಂಡು ಗೆದ್ದು ದಾಖಲೆ ಬರೆದಿತ್ತು. ಮುತ್ತಯ್ಯ ಮುರಳೀಧರನ್ (2/8) ಮತ್ತು ಅಶ್ವಿನ್ (2/13),ರೈನಾ (17ಕ್ಕೆ2) ಬೌಲಿಂಗ್ನಿಂದ ಪಂಜಾಬ್ 92/8ಕ್ಕೆ ಸೀಮಿತವಾಗಿ 24 ರನ್ಗಳ ಹೀನಾಯ ಸೋಲು ಕಂಡಿತ್ತು. ಇದೀಗ, ಪಿಬಿಕೆಎಸ್ ಈ ದಾಖಲೆಯನ್ನು ಮೀರಿಸಿದೆ.
ಐಪಿಎಲ್ನಲ್ಲಿ ಡಿಫೆಂಡ್ ಮಾಡಿ ಗೆದ್ದ ತಂಡಗಳಳ ಪಟ್ಟಿ
1) ಪಂಜಾಬ್ ಕಿಂಗ್ಸ್
ಮೊತ್ತ: 111
ಎದುರಾಳಿ: ಕೋಲ್ಕತ್ತಾ ನೈಟ್ ರೈಡರ್ಸ್
ಫಲಿತಾಂಶ: ಪಿಬಿಕೆಎಸ್ 16 ರನ್ಗಳಿಂದ ಗೆಲುವು
ದಿನಾಂಕ: 15 ಏಪ್ರಿಲ್ 2025
2) ಚೆನ್ನೈ ಸೂಪರ್ ಕಿಂಗ್ಸ್
ಮೊತ್ತ: 116/9
ಎದುರಾಳಿ: ಕಿಂಗ್ಸ್ ಇಲೆವನ್ ಪಂಜಾಬ್
ಫಲಿತಾಂಶ: ಸಿಎಸ್ಕೆ 24 ರನ್ಗಳಿಂದ ಗೆಲುವು
ದಿನಾಂಕ: 20 ಮೇ 2009
3) ಸನ್ರೈಸರ್ಸ್ ಹೈದರಾಬಾದ್
ಮೊತ್ತ: 118
ಎದುರಾಳಿ: ಮುಂಬೈ ಇಂಡಿಯನ್ಸ್
ಫಲಿತಾಂಶ: ಎಸ್ಆರ್ಎಚ್ 31 ರನ್ಗಳಿಂದ ಗೆಲುವು
ದಿನಾಂಕ: 24 ಏಪ್ರಿಲ್ 2018
4) ಕಿಂಗ್ಸ್ ಇಲೆವನ್ ಪಂಜಾಬ್
ಮೊತ್ತ: 119/8
ಎದುರಾಳಿ: ಮುಂಬೈ ಇಂಡಿಯನ್ಸ್
ಫಲಿತಾಂಶ: ಕೆಎಕ್ಸ್ಐಪಿ 24 ರನ್ಗಳಿಂದ ಗೆಲುವು
ದಿನಾಂಕ: 20 ಏಪ್ರಿಲ್ 2009
5) ಸನ್ರೈಸರ್ಸ್ ಹೈದರಾಬಾದ್
ಮೊತ್ತ: 119/8
ಎದುರಾಳಿ: ಪುಣೆ ವಾರಿಯರ್ಸ್
ಫಲಿತಾಂಶ: ಎಸ್ಆರ್ಎಚ್ 11 ರನ್ಗಳಿಂದ ಗೆಲುವು
ದಿನಾಂಕ: 17 ಏಪ್ರಿಲ್ 2013
6) ಮುಂಬೈ ಇಂಡಿಯನ್ಸ್
ಮೊತ್ತ: 120/9
ಎದುರಾಳಿ: ಪುಣೆ ವಾರಿಯರ್ಸ್
ಫಲಿತಾಂಶ: ಎಂಐ 1 ರನ್ನಿಂದ ಗೆಲುವು
ದಿನಾಂಕ: 3 ಮೇ 2012
7) ಪಂಜಾಬ್ ಕಿಂಗ್ಸ್
ಮೊತ್ತ: 125/7
ಎದುರಾಳಿ: ಸನ್ರೈಸರ್ಸ್ ಹೈದರಾಬಾದ್
ಫಲಿತಾಂಶ: ಪಿಬಿಕೆಎಸ್ 5 ರನ್ಗಳಿಂದ ಗೆಲುವು
ದಿನಾಂಕ: 25 ಸೆಪ್ಟೆಂಬರ್ 2021
8) ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮೊತ್ತ: 126/8
ಎದುರಾಳಿ: ಚೆನ್ನೈ ಸೂಪರ್ ಕಿಂಗ್ಸ್
ಫಲಿತಾಂಶ: ಆರ್ಸಿಬಿ 14 ರನ್ಗಳಿಂದ ಗೆಲುವು
ದಿನಾಂಕ: 21 ಮೇ 2008
9)ಸನ್ರೈಸರ್ಸ್ ಹೈದರಾಬಾದ್
ಮೊತ್ತ: 126/6
ಎದುರಾಳಿ: ಪುಣೆ ವಾರಿಯರ್ಸ್
ಫಲಿತಾಂಶ: ಎಸ್ಆರ್ಎಚ್ 22 ರನ್ಗಳಿಂದ ಗೆಲುವು
ದಿನಾಂಕ: 5 ಏಪ್ರಿಲ್ 2013
10) ಕಿಂಗ್ಸ್ ಇಲೆವನ್ ಪಂಜಾಬ್
ಮೊತ್ತ: 126/7
ಎದುರಾಳಿ: ಸನ್ರೈಸರ್ಸ್ ಹೈದರಾಬಾದ್
ಫಲಿತಾಂಶ: ಕೆಎಕ್ಸ್ಐಪಿ 12 ರನ್ಗಳಿಂದ ಗೆಲುವು
ದಿನಾಂಕ: 24 ಅಕ್ಟೋಬರ್ 2020
10) ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮೊತ್ತ: 126/9
ಎದುರಾಳಿ: ಲಕ್ನೋ ಸೂಪರ್ಜೈಂಟ್ಸ್
ಫಲಿತಾಂಶ: ಆರ್ಸಿಬಿ 18 ರನ್ಗಳಿಂದ ಗೆಲುವು
ದಿನಾಂಕ: 1 ಮೇ 2023
11) ಕೋಲ್ಕತ್ತಾ ನೈಟ್ ರೈಡರ್ಸ್
ಮೊತ್ತ: 129/7
ಎದುರಾಳಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಫಲಿತಾಂಶ: ಕೆಕೆಆರ್ 5 ರನ್ಗಳಿಂದ ಗೆಲುವು
ದಿನಾಂಕ: 8 ಮೇ 2008
13) ಡೆಕ್ಕನ್ ಚಾರ್ಜರ್ಸ್
ಮೊತ್ತ: 129/7
ಎದುರಾಳಿ: ಕೊಚ್ಚಿ ಟಸ್ಕರ್ಸ್ ಕೇರಳ
ಫಲಿತಾಂಶ: ಡಿಇಸಿ 55 ರನ್ಗಳಿಂದ ಗೆಲುವು
ದಿನಾಂಕ: 27 ಏಪ್ರಿಲ್ 2011
14) ಪುಣೆ ವಾರಿಯರ್ಸ್
ಮೊತ್ತ: 129/9
ಎದುರಾಳಿ: ಮುಂಬೈ ಇಂಡಿಯನ್ಸ್
ಫಲಿತಾಂಶ: ಪುಣೆ ತಂಡಕ್ಕೆ 28 ರನ್ಗಳಿಂದ ಗೆಲುವು
ದಿನಾಂಕ: 6 ಏಪ್ರಿಲ್ 2012
April 16, 2025 7:59 AM IST