ಪಾರ್ಲೆ ಮಾರಿ ಜಾಹೀರಾತು
ಐಪಿಎಲ್ ಪಂದ್ಯಾಟದ ವೇಳೆಯಲ್ಲಿ ಪಾರ್ಲೆ ಮಾರಿ ಜಾಹೀರಾತು ಪ್ರಸಾರವಾಗುತ್ತಿತ್ತು ಹಾಗೂ ಆಟದ ನಡುವಿನ ಮನರಂಜನೆಗಿಂತ ಈ ಜಾಹೀರಾತು ಕಿರಿಕಿರಿಗೆ ಕಾರಣವಾಗಿತ್ತು. ಪಂದ್ಯಾಟದ ನಡು ನಡುವೆ ಈ ಜಾಹೀರಾತು ಹೆಚ್ಚು ಪ್ರಸಾರವಾಗುತ್ತಿದ್ದು, ವೀಕ್ಷಕರು ಇದರಿಂದ ಕಿರಿಕಿರಿಗೆ ಒಳಗಾಗಿದ್ದಾರೆ ಎಂಬುದಂತೂ ನಿಜ. ಈ ಜಾಹೀರಾತಿನ ಸ್ಕ್ರಿಪ್ಟ್ ವಿಭಿನ್ನವಾಗಿದ್ದು ಪಾತ್ರವರ್ಗ ಹಾಗೂ ಸ್ಟೋರಿಲೈನ್ನಲ್ಲಿ ಕೂಡ ಬದಲಾವಣೆ ಕಂಡುಬಂದಿದ್ದರೂ ಈ ಹಿಂದಿನಂತೆಯೇ ಜಾಹೀರಾತಿನಲ್ಲಿರುವ ಸಂದೇಶ ಸ್ಪಷ್ಟವಾಗಿದೆ.
ಐಕಾನಿಕ್ ಪಾರ್ಲೆ-ಜಿ ಅನ್ನು ನೀಡಿರುವ ಭಾರತೀಯ ಆಹಾರ ನಿಗಮವಾದ ಪಾರ್ಲೆ ಪ್ರಾಡಕ್ಟ್ಸ್, ತನ್ನ ಮಾರಿ ಬಿಸ್ಕೆಟ್ ತನ್ನ ಉತ್ಪನ್ನಗಳ ಸೀರೀಸ್ಗಳನ್ನೇ ಆರಂಭಿಸಿದ್ದು ಮಾರ್ಕೆಟ್ನಲ್ಲಿ ಇದೊಂದು ಕ್ರ್ಯಾಶ್ ಕೋರ್ಸ್ನಂತಿದೆ.
ಪಾರ್ಲೆ ಮಾರಿ ಎಂಬ ಹೆಸರು
ಈ ವೈರಲ್ ಜಾಹೀರಾತಿನ ಉದ್ದೇಶ ಒಂದೇ ಆಗಿದ್ದು ಪಾರ್ಲೆ ಎಂಬ ಮ್ಯಾಜಿಕ್ ಪದದ ಮೂಲಕ ಗ್ರಾಹಕರನ್ನು ಸೆಳೆಯುವುದಾಗಿದೆ. ಪಾರ್ಲೆ ಎಲ್ಲರಿಗೂ ಪರಿಚಿತವಾಗಿರುವ ಬ್ರ್ಯಾಂಡ್ ಆಗಿರುವುದರಿಂದ ಕಂಪನಿ ತನ್ನ ಮಾರಿ ಬಿಸ್ಕತ್ತುಗಳನ್ನು ಇದೇ ಬ್ರ್ಯಾಂಡ್ ಮೂಲಕ ಕಮರ್ಷಿಯಲ್ಗೊಳಿಸಲು ಬಯಸಿದೆ. ಇದನ್ನು ಮಾರಿ ಎಂದು ಕರೆಯುವುದರಿಂದ ಪಾರ್ಲೆಗಿರುವ ಗುರುತು ಮರೆಯಾಗುವುದಿಲ್ಲ.
ಐಪಿಎಲ್ ನೋಡಲು ಆಸಕ್ತಿಯುಳ್ಳವರು ಪಾರ್ಲೆ ಮಾರಿ ಜಾಹೀರಾತಿನ ಈ ಹೊಸ ಬಗೆಯನ್ನು ಗುರುತಿಸದೇ ಇರಲು ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಜಾಹೀರಾತಿನ ಬಗೆಗೆ ಸಾಕಷ್ಟು ಕಾಮೆಂಟ್ಗಳು ಸುಳಿದಾಡುತ್ತಿದ್ದು, ಅನೇಕರು ಈ ಜಾಹೀರಾತು ಆಟದ ನಡುವೆ ಒಂದು ಟಾರ್ಚರ್ ಎಂದು ಕರೆದಿದ್ದಾರೆ.
ಈ ವಿಡಿಯೋದಿಂದಾಗಿ ನಾನು ಎಂದಿಗೂ ನನ್ನ ಜೀವನದಲ್ಲಿ ಪಾರ್ಲೆ ಮಾರಿ ಬಿಸ್ಕೆಟ್ ಅನ್ನು ಕೊಳ್ಳುವುದಿಲ್ಲ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಐಪಿಎಲ್ ಪಂದ್ಯಾಟದ ನಡುವೆ ಪಾರ್ಲೆ ಮಾರಿಯ ಈ ಜಾಹೀರಾತು ತುಂಬಾ ಕಿರಿಕಿರಿಯರದ್ದು ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಯಾರೂ ಪಾರ್ಲೆ ಮಾರಿಯನ್ನು ಖರೀದಿಸಬಾರದು ಎಂಬುದು ಕಂಪನಿಯ ಗುರಿಯಾಗಿದ್ದರೆ, ಅದು ಈ ಜಾಹೀರಾತಿನಿಂದ ಖಂಡಿತ ಸಾಧ್ಯವಾಗುತ್ತದೆ.
ಇದು ಎಷ್ಟೊಂದು ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂದರೆ ಯಾರೂ ಇದನ್ನು ಖರೀದಿಸಲಾರರು ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪಾರ್ಲೆ ಮಾರಿಯ ಈ ಪುನರಾವರ್ತಿತ ಜಾಹೀರಾತುಗಳು ನೆಟ್ಟಿಗರಿಗೆ ಇತಿಹಾಸದಲ್ಲಿ ಒಂದು ವಿಶಿಷ್ಟ ಪಾಠವನ್ನು ಕಲಿಸುವಲ್ಲಿ ಕೊಡುಗೆ ನೀಡಿವೆ.
ಮಾರಿಯಾ ಹೆಸರು ಮಾರಿಯಾಗಿದ್ದು ಹೇಗೆ?
ಪಾರ್ಲೆಯ ಸ್ವಂತ ಆವಿಷ್ಕಾರಕ್ಕಿಂತ ಮಾರಿ ಒಂದು ಬಿಸ್ಕೆಟ್ ಆಗಿ ಗುರುತಿಸಿಕೊಂಡಿದೆ. ಗೋಧಿ ಹಿಟ್ಟು, ಸಕ್ಕರೆ, ಪಾಮ್ ಆಯಿಲ್ನಿಂದ ತಯಾರಿಸಲಾದ ಈ ದುಂಡಗಿನ ವೃತ್ತಾಕಾರದ ಬಿಸ್ಕೆಟ್ 1874 ರ ಹಿಂದಿನಿಂದಲೇ ಸದ್ದುಮಾಡಿವೆ.
ರಷ್ಯಾದ ಗ್ರ್ಯಾಂಡ್ ಡಚೆಸ್ ಮಾರಿಯಾ ಅಲೆಕ್ಸಾಂಡ್ರೊವ್ನಾ ಹಾಗೂ ಎಡಿನ್ಬರ್ಗ್ ಡ್ಯೂಕ್ ಅವರ ವಿವಾಹವನ್ನು ಪೀಕ್ ಫ್ರೀನ್ಸ್ ಬೇಕರಿಯು ಲಂಡನ್ನಲ್ಲಿ ಇದೇ ಬಿಸ್ಕೆಟ್ಗಳೊಂದಿಗೆ ಸ್ಮರಣೀಯಗೊಳಿಸಿತು. ಆರಂಭದಲ್ಲಿ ಈ ಬಿಸ್ಕೆಟ್ ಅನ್ನು ಮಾರಿಯಾ ಹೆಸರಿನಿಂದ ಕರೆಯಲಾಗಿತ್ತು, ಯುರೋಪ್ ಮೊದಲಾದ ಭಾಗಗಳಲ್ಲಿ ಇದು ಲಭ್ಯವಾಗತೊಡಗುತ್ತಿದ್ದಂತೆ ಇದರ ಹೆಸರು ಮಾರಿಯಾದಿಂದ ಮಾರಿಯಾಯಿತು.
May 17, 2025 11:01 PM IST
IPL 2025: ಐಪಿಎಲ್ ರೀಸ್ಟಾರ್ಟ್ ಆದ್ರೂ ಆ ಒಂದು ಜಾಹಿರಾತಿನಿಂದ ಕಿರಿಕಿರಿಗೊಳಗಾಗಿದ್ದಾರೆ ಕ್ರಿಕೆಟ್ ಫ್ಯಾನ್ಸ್! ಆ ಆ್ಯಡ್ ಯಾವುದು ಗೊತ್ತಾ?