IPL 2025: ಗುಜರಾತ್​ ಹ್ಯಾಟ್ರಿಕ್ ಗೆಲುವು! ಈ ಯಶಸ್ಸಿಗೆ ಆತನೇ ಕಾರಣ ಎಂದು ಗಂಗೂಲಿ ಪ್ರಶಂಸೆ | Sourav Ganguly Praises Ashish Nehra s Coaching Genius After GT s Thrilling Win

IPL 2025: ಗುಜರಾತ್​ ಹ್ಯಾಟ್ರಿಕ್ ಗೆಲುವು! ಈ ಯಶಸ್ಸಿಗೆ ಆತನೇ ಕಾರಣ ಎಂದು ಗಂಗೂಲಿ ಪ್ರಶಂಸೆ | Sourav Ganguly Praises Ashish Nehra s Coaching Genius After GT s Thrilling Win

Last Updated:

ಗುಜರಾತ್ ಟೈಟನ್ಸ್ ತಂಡದ ಯಶಸ್ಸಿನಲ್ಲಿ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಪಾತ್ರ ನಿರ್ಣಾಯಕವಾಗಿತ್ತು. ಇದೇ ವಿಷಯವನ್ನು ಉಲ್ಲೇಖಿಸಿದ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆಶಿಶ್ ನೆಹ್ರಾ ಅವರನ್ನು ಹೊಗಳಿದ್ದಾರೆ. ಅವರು ನೆಹ್ರಾ ಅವರ ತಂತ್ರಗಳನ್ನು ಅದ್ಭುತ ಎಂದು ಶ್ಲಾಘಿಸಿದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನ ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಹೊಗಳಿದ್ದಾರೆ.

ಗುಜರಾತ್ ಟೈಟನ್ಸ್ ತಂಡದ ನಾಯಕ ಗಿಲ್ ಜೊತೆ ಕೋಚ್ ಆಶಿಷ್ ನೆಹ್ರಾ ಗುಜರಾತ್ ಟೈಟನ್ಸ್ ತಂಡದ ನಾಯಕ ಗಿಲ್ ಜೊತೆ ಕೋಚ್ ಆಶಿಷ್ ನೆಹ್ರಾ
ಗುಜರಾತ್ ಟೈಟನ್ಸ್ ತಂಡದ ನಾಯಕ ಗಿಲ್ ಜೊತೆ ಕೋಚ್ ಆಶಿಷ್ ನೆಹ್ರಾ

ಐಪಿಎಲ್ 2025ರ (IPL 2025) ಋತುವಿನಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಈ ಋತುವನ್ನು ಗುಜರಾತ್ ಟೈಟನ್ಸ್ ಸೋಲಿನೊಂದಿಗೆ ಆರಂಭಿಸಿತು, ಆದರೆ ನಂತರ ಸತತ ಮೂರು ಪಂದ್ಯಗಳನ್ನು ಗೆದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಭಾನುವಾರ ಉಪ್ಪಲ್​ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 7 ವಿಕೆಟ್‌ಗಳ ಜಯ ಸಾಧಿಸಿತು. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅವರು ಪ್ರಾಬಲ್ಯ ಸಾಧಿಸಿದರು. ಈ ಗೆಲುವಿನೊಂದಿಗೆ ಅವರು ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

ನೆಹ್ರಾ ಪಾತ್ರ ನಿರ್ಣಾಯಕವಾಗಿದೆ

ಗುಜರಾತ್ ಟೈಟನ್ಸ್ ತಂಡದ ಯಶಸ್ಸಿನಲ್ಲಿ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಪಾತ್ರ ನಿರ್ಣಾಯಕವಾಗಿತ್ತು. ಇದೇ ವಿಷಯವನ್ನು ಉಲ್ಲೇಖಿಸಿದ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆಶಿಶ್ ನೆಹ್ರಾ ಅವರನ್ನು ಹೊಗಳಿದ್ದಾರೆ. ಅವರು ನೆಹ್ರಾ ಅವರ ತಂತ್ರಗಳನ್ನು ಅದ್ಭುತ ಎಂದು ಶ್ಲಾಘಿಸಿದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನ ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಹೊಗಳಿದ್ದಾರೆ.

ಇದನ್ನೂ ಓದಿ: GT vs SRH: ಗುಜರಾತ್​​ಗೆ ಹ್ಯಾಟ್ರಿಕ್ ಜಯ ತಂದುಕೊಟ್ಟ ಗಿಲ್​-ಸಿರಾಜ್​! ಸನ್​ರೈಸರ್ಸ್​ ಹೈದರಾಬಾದ್​ಗೆ​ ಸತತ 4ನೇ ಸೋಲು

ನೆಹ್ರಾ ಕೋಚಿಂಗ್ ಅದ್ಭುತ ಎಂದ ದಾದಾ

​​’ಗುಜರಾತ್ ಟೈಟನ್ಸ್ ತಮ್ಮ ಮೊದಲ ಐಪಿಎಲ್ ಸೀಸನ್‌ನಿಂದಲೂ ಅದ್ಭುತ ಪ್ರದರ್ಶನ ನೀಡುತ್ತಿದೆ. ಅವರ ವಿಧಾನವು ಅದ್ಭುತವಾಗಿದೆ. ಗುಜರಾತ್ ತಂಡದಲ್ಲಿ ಅನೇಕ ಕ್ರಿಕೆಟ್ ತಜ್ಞರಿದ್ದಾರೆ. “ಆಶಿಶ್ ನೆಹ್ರಾ ಮುಖ್ಯ ಕೋಚ್ ಆಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ” ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ. ಐಪಿಎಲ್ 2022 ರ ಸೀಸನ್‌ಗೆ ಪ್ರವೇಶಿಸಿದ ಗುಜರಾತ್ ಟೈಟನ್ಸ್, ತನ್ನ ಮೊದಲ ಸೀಸನ್‌ನಲ್ಲಿ ವಿಜೇತರಾಗಿ ಹೊರಹೊಮ್ಮಿತು. ಐಪಿಎಲ್ 2023 ರ ಋತುವಿನಲ್ಲೂ ಫೈನಲ್‌ನಲ್ಲಿ ಕೊನೆಯ ಎಸೆತದಲ್ಲಿ ಸೋಲು ಕಂಡು ಪ್ರಶಸ್ತಿಯನ್ನು ಸ್ವಲ್ಪದರಲ್ಲೇ ಕಳೆದುಕೊಂಡರು.

2024ರಲ್ಲಿ ನೀರಸ ಪ್ರದರ್ಶನ

ಆಶಿಶ್ ನೆಹ್ರಾ ಐಪಿಎಲ್ 2022 ರ ಸೀಸನ್‌ನಿಂದ ಮುಖ್ಯ ಕೋಚ್ ಆಗಿದ್ದಾರೆ. ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ತೆರಳಿದ ನಂತರ ಶುಭ್​ಮನ್ ಗಿಲ್‌ಗೆ ನಾಯಕತ್ವ ನೀಡಲಾಯಿತು. ಐಪಿಎಲ್ 2024 ರ ಋತುವಿನಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಭಾರಿ ನಿರಾಶೆ ಕಾದಿತ್ತು. ಅದು 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇದನ್ನೂ ಓದಿ: 15 ವರ್ಷ ಅಂದ್ರೆ ಸುಮ್ಮನೆ ಅಲ್ಲ! ರೋಹಿತ್ ಜೊತೆಗಿನ ಸಂಬಂಧದ ಹೃದಯಸ್ಪರ್ಶಿ ಹೇಳಿಕೆ ನೀಡಿದ ಕೊಹ್ಲಿ!

ಗಂಗೂಲಿಯಿಂದ ನಾಯಕತ್ವ ಗುಣ ಕಲಿತೆ

ಆಶಿಶ್ ನೆಹ್ರಾ, ಸೌರವ್ ಗಂಗೂಲಿ ನಾಯಕತ್ವದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರು ಸ್ವಿಂಗ್ ಬೌಲರ್ ಆಗಿ ಪ್ರಸಿದ್ಧರಾಗಿದ್ದರು. ಗಂಗೂಲಿಯಿಂದ ನಾಯಕತ್ವ ಕೌಶಲ್ಯಗಳನ್ನು ಕಲಿತಿದ್ದೇನೆ ಎಂದು ಆಶಿಶ್ ನೆಹ್ರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಪರಿಸ್ಥಿತಿ ಏನೇ ಇರಲಿ ಶಾಂತವಾಗಿರುವುದು ಮುಖ್ಯ ಎಂದು ನಾನು ಸೌರವ್ ಗಂಗೂಲಿಯಿಂದ ಕಲಿತಿದ್ದೇನೆ. ಮೈದಾನದಲ್ಲಿ ಆಟಗಾರನಾಗಿ ಅವರಿಗೆ ತೊಂದರೆ ನೀಡಿದ ಆಟಗಾರರಲ್ಲಿ ನಾನೂ ಒಬ್ಬ. ಆದರೆ ದಾದಾ ಮೈದಾನದಲ್ಲಿ ಒಂದೇ ಒಂದು ಮಾತನ್ನೂ ಹೇಳುತ್ತಿರಲಿಲ್ಲ. ಆದರೆ ಸಂಜೆ, ಅವನು ಕರೆ ಮಾಡಿ, ತಮ್ಮ ರೂಮಿಗೆ ಕರೆಸಿಕೊಂಡು ಮಾತನಾಡುತ್ತಿದ್ದರು. ಮೈದಾನದಲ್ಲಿ ಏನೇ ನಡೆದರೂ ಅದನ್ನು ಅಲ್ಲಿಯೇ ಬಿಡಬೇಕು ಎಂದು ಗಂಗೂಲಿ ನಂಬಿದ್ದರು. ತಂಡವನ್ನು ಹೇಗೆ ಮುನ್ನಡೆಸುವುದು? ಪ್ರತಿಯೊಬ್ಬ ಆಟಗಾರನಿಂದ ತಾನು ಏನು ಬಯಸುತ್ತೇನೆಂದು ಅವರಿಗೆ ಸ್ಪಷ್ಟವಾಗಿ ತಿಳಿದಿರುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಯಾವುದೇ ಆಟಗಾರ ಅವರ ಮೇಲೆ ಕೋಪಗೊಂಡರೂ, ಅವರು ಅದನ್ನು ಲೆಕ್ಕಿಸುತ್ತರಿಲಿಲ್ಲ” ಎಂದು ನೆಹ್ರಾ ಹೇಳಿಕೊಂಡಿದ್ದರು.