ರಾಯಲ್ಸ್ಗೆ ರಾಣಾ ಆಸರೆ
ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ್ ರಾಯಲ್ಸ್ ಮೊದಲ ಓವರ್ನ 2ನೇ ಎರಡನೇ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ (4) ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್ಗೆ ಸಂಜು ಸ್ಯಾಮ್ಸನ್ ಹಾಗೂ ನಿತೀಶ್ ರಾಣಾ ಕೇವಲ 42 ಎಸೆತಗಳಲ್ಲಿ 82 ರನ್ಗಳ ಜೊತೆಯಾಟ ನೀಡಿದರು. ಪವರ್ ಪ್ಲೇನಲ್ಲಿ ನಿತೀಶ್ ರಾಣಾ ಅಬ್ಬರಿಸಿದರು ಕೇವಲ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆದರೆ ಪವರ್ ಪ್ಲೇ ನಂತರ ಅದೇ ಆವೇಗವನ್ನ ಮುಂದುವರಿಸಲು ವಿಫಲರಾದರು. ಇನ್ನು ಸಂಜು ಸ್ಯಾಮ್ಸನ್ ಇಂದೂ ಕೂಡ ರನ್ಗಳಿಸಲು ವಿಫಲರಾದರು. 16 ಎಸೆತಗಳಲ್ಲಿ ಕೇವಲ 20 ರನ್ಗಳಿಸಿ ಔಟ್ ಆದರು.
ಇದನ್ನೂ ಓದಿ: ಪಂದ್ಯದ ಗತಿಯನ್ನೇ ಬದಲಿಸಿತು ಆ ಒಂದು ಕ್ಯಾಚ್! ತೆಲುಗು ನಾಡಲ್ಲೇ ಸನ್ರೈಸರ್ಸ್ ಅಹಂ ಅಡಗಿಸಿದ ಡೆಲ್ಲಿ
ಮತ್ತೆ ಕೈಕೊಟ್ಟ ಮಧ್ಯಮ ಕ್ರಮಾಂಕ
ನಿತೀಶ್ ರಾಣಾ 36 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ಗಳ ಸಹಿತ 81 ರನ್ಗಳಿಸಿದರು. ಶತಕ ಸಿಡಿಸುವ ಅವಕಾಶ ಇತ್ತಾದರೂ ಅಶ್ವಿನ್ ಬೌಲಿಂಗ್ನಲ್ಲಿ ಸ್ಟಂಪ್ ಔಟ್ ಆದರು. ರಾಣಾ ನಂತರ ಬಂದ ಮೂವರು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಧ್ರುವ್ ಜುರೆಲ್ 3, ವನಿಂದು ಹಸರಂಗ 4 ರನ್ಗಳಿಸಿ ಔಟ್ ಆದರು. ಆದರೆ ಕೊನೆಯಲ್ಲಿ ಅಬ್ಬರಿಸಿದ ರಿಯಾನ್ ಪರಾಗ್ 28 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ 37 ಹಾಗೂ ಶಿಮ್ರೋನ್ ಹೆಟ್ಮಾಯರ್ 16 ಎಸೆತಗಳಲ್ಲಿ19 ರನ್ಗಳಿಸಿ ಸವಾಲಿನ ಮೊತ್ತ ದಾಖಲಿಸಲು ನೆರವಾದರು. ಆರ್ಚರ್ 0, ಇಂಪ್ಯಾಕ್ಟ್ ಸಬ್ ಕುಮಾರ್ ಕಾರ್ತಿಕೇಯಾ 1, ತೀಕ್ಷಣ 2, ತುಷಾರ್ ದೇಶಪಾಂಡೆ 1 ರನ್ಗಳಿಸಿದರು.
ಕೊನೆಯಲ್ಲಿ ಮಿಂಚಿದ ಸಿಎಸ್ಕೆ ಬೌಲರ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸತತ 3ನೇ ಪಂದ್ಯದಲ್ಲೂ ಮಿಂಚಿದ ನೂರ್ ಅಹ್ಮದ್ 28ಕ್ಕೆ2 ಪಡೆದರೆ, ಇವರಿಗೆ ಸಾಥ್ ನೀಡಿದ ಖಲೀಲ್ ಅಹ್ಮದ್ 38ಕ್ಕೆ2, ಪತೀರಣ 28ಕ್ಕೆ2 ವಿಕೆಟ್ ಪಡೆದು ಮಿಂಚಿದರು. ರವೀಂದ್ರ ಜಡೇಜಾ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು. ಒಂದು ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ 200ರ ಗಡಿ ದಾಟಬಹುದು ಎನ್ನಲಾಗಿತ್ತು. ಆದರೆ ಕೊನೆಯ 6 ಓವರ್ಗಳಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿದ ಸಿಎಸ್ಕೆ 182ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ಪಂದ್ಯದ ಗತಿಯನ್ನೇ ಬದಲಿಸಿತು ಆ ಒಂದು ಕ್ಯಾಚ್! ತೆಲುಗು ನಾಡಲ್ಲೇ ಸನ್ರೈಸರ್ಸ್ ಅಹಂ ಅಡಗಿಸಿದ ಡೆಲ್ಲಿ
ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್
ಚೆನ್ನೈ ಸೂಪರ್ ಕಿಂಗ್ಸ್: ರಾಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ರಿತುರಾಜ್ ಗಾಯಕ್ವಾಡ್ (ನಾಯಕ), ವಿಜಯ್ ಶಂಕರ್, ರವೀಂದ್ರ ಜಡೇಜ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಜೇಮೀ ಓವರ್ಟನ್, ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಮಥಿಶಾ ಪತಿರಾನ, ಖಲೀಲ್ ಅಹ್ಮದ್.
ಇಂಪ್ಯಾಕ್ಟ್ ಸಬ್‌ಗಳು: ಶಿವಂ ದುಬೆ, ಮುಖೇಶ್ ಚೌಧರಿ, ಡೆವೊನ್ ಕಾನ್ವೇ, ಶೇಖ್ ರಶೀದ್, ಸ್ಯಾಮ್ ಕರನ್.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮಾಯೆರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷ್ಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ.
ಇಂಪ್ಯಾಕ್ಟ್ ಸಬ್: ಕುನಾಲ್ ಸಿಂಗ್ ರಾಥೋಡ್, ಶುಭಂ ದುಬೆ, ಫಜಲ್ಹಕ್ ಫಾರೂಕಿ, ಕುಮಾರ್ ಕಾರ್ತಿಕೇಯ, ಯುಧ್ವೀರ್ ಸಿಂಗ್.
March 30, 2025 9:23 PM IST
IPL 2025: ಚೆನ್ನೈ ಬೌಲರ್ಗಳನ್ನ ಬೆಂಡೆತ್ತಿದ ನಿತೀಶ್ ರಾಣಾ ! ಸಿಎಸ್ಕೆಗೆ ಗೆಲ್ಲಲು 183 ರನ್ಗಳ ಸವಾಲಿನ ಗುರಿ ನೀಡಿದ ರಾಜಸ್ಥಾನ್ ರಾಯಲ್ಸ್