IPL 2025: ಚೊಚ್ಚಲ ಟ್ರೋಫಿ ಕನಸಿನಲ್ಲಿರುವ ಪಂಜಾಬ್‌ಗೆ ಬಿಗ್​ ಶಾಕ್! ಪ್ಲೇ ಆಫ್‌​ಗೂ ಮುನ್ನ 18 ಕೋಟಿ ಪ್ಲೇಯರ್ ಔಟ್? | Punjab Kings crucial match againsy mumbai indians Chahal likely to miss due to injury

IPL 2025: ಚೊಚ್ಚಲ ಟ್ರೋಫಿ ಕನಸಿನಲ್ಲಿರುವ ಪಂಜಾಬ್‌ಗೆ ಬಿಗ್​ ಶಾಕ್! ಪ್ಲೇ ಆಫ್‌​ಗೂ ಮುನ್ನ 18 ಕೋಟಿ ಪ್ಲೇಯರ್ ಔಟ್? | Punjab Kings crucial match againsy mumbai indians Chahal likely to miss due to injury

Last Updated:

ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ ಯಾವುದೇ ತಂಡ ಗೆದ್ದರೂ ಕೂಡ ಅಗ್ರ 2ರಲ್ಲಿ ಫಿನಿಷ್ ಮಾಡಲಿದೆ. ಆದ್ರೆ, ಈ ಪಂದ್ಯಕ್ಕೂ ಮೊದಲು ಪಂಜಾಬ್‌ನ ಸ್ಟಾರ್ ಬೌಲರ್ ಇಂದಿನ ಪಂದ್ಯ ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಪಂಜಾಬ್ ಕಿಂಗ್ಸ್ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಪ್ಲೇ ಆಫ್ ಅಗ್ರಸ್ಥಾನದ ದೃಷ್ಠಿಯಿಂದ ಇಂದು (ಮೇ 26) ನಡೆಯುವ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದೆನಿಸಿಕೊಂಡಿದೆ. ಇಂದು ಯಾವುದೇ ತಂಡ ಗೆದ್ದರೂ ಕೂಡ ಅಗ್ರ 2ರಲ್ಲಿ ಫಿನಿಷ್ ಮಾಡಲಿದೆ. ಆದ್ರೆ, ಈ ಪಂದ್ಯಕ್ಕೂ ಮೊದಲು ಪಂಜಾಬ್‌ನ ಸ್ಟಾರ್ ಬೌಲರ್ ಇಂದಿನ ಪಂದ್ಯ ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಪಂಜಾಬ್ ಕಿಂಗ್ಸ್(ಪಿಬಿಕೆಎಸ್) ಈ ಭಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಬರೋಬ್ಬರಿ 11 ವರ್ಷಗಳ ನಂತರ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶ ಪಡೆದುಕೊಂಡಿದೆ. ಸದ್ಯ, ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಈ ನಡುವೆ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಕೊನೆಯ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದು ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿತ್ತು.

ಈಗ, ಫ್ರಾಚೈಸ್‌ನ ಸಹಾಯಕ ಕೋಚ್ ಸುನಿಲ್ ಜೋಶಿ ಚಹಾಲ್ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರಿಗೆ ಕೆಲವು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿಯ ಪ್ರಕಾರ, ಚಹಾಲ್ ಮಣಿಕಟ್ಟಿನ ಗಾಯದಿಂದ ಬಳಲುತ್ತಿದ್ದಾರೆ. ಸಣ್ಣ ಪುಟ್ಟ ತೊಂದರೆ ಇದೆ, ಆದ್ದರಿಂದ ನಾವು ಅವರಿಗೆ ವಿಶ್ರಾಂತಿ ನೀಡುತ್ತಿದ್ದೇವೆ. ಅವರು ಬೇಗ ಚೇತರಿಸಿಕೊಂಡರೆ ತಂಡಕ್ಕೆ ಅನುಕೂಲ ಎಂದು ಜೋಶಿ ಹೇಳಿದರು. ಇದರರ್ಥ ಮುಂಬೈ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಚಾಹಲ್ ಭಾಗವಹಿಸುವುದು ಡೌಟ್ ಎನ್ನಲಾಗಿದೆ.

ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಟಾಪ್-2 ಸ್ಥಾನ ಪಡೆಯುವುದು ಹೇಗೆ?

ಪಂಜಾಬ್ ಕಿಂಗ್ಸ್ ತಂಡವು ಪ್ರಸ್ತುತ 13 ಪಂದ್ಯಗಳಿಂದ 17 ಅಂಕಗಳನ್ನು ಗಳಿಸಿದೆ. ಮುಂಬೈ ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿ ಅವರು ಗೆದ್ದರೆ, ಅವರು 19 ಅಂಕಗಳನ್ನು ತಲುಪುತ್ತಾರೆ. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ. ವಾಸ್ತವವಾಗಿ, ಆರ್‌ಸಿಬಿ ಎಲ್‌ಎಸ್‌ಜಿ ವಿರುದ್ಧದ ಋತುವಿನ ಕೊನೆಯ ಪಂದ್ಯದಲ್ಲಿ ಸೋತರೆ ಪಿಬಿಕೆಎಸ್ ಲೀಗ್ ಹಂತದ ಕೊನೆಯಲ್ಲಿ ಅಗ್ರ ತಂಡವಾಗಿ ಲೀಗ್ ಹಂತವನ್ನು ಮುಗಿಸುತ್ತದೆ.

ಒಂದುವೇಳೆ ಆರ್‌ಸಿಬಿ ಅಂದಿನ ಪಂದ್ಯ ಗೆದ್ದರು ಕೂಡ ಪಂಜಾಬ್ ಮೊದಲ ಎರಡರಲ್ಲಿ ಒಂದು ಸ್ಥಾನ ಪಡೆಯಲಿದೆ. ಇನ್ನೂ ಟಾಪ್‌-2ರಲ್ಲಿ ಫಿನಿಷ್ ಮಾಡಿದ್ರೆ ಜೂನ್ 3 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಅನ್ನು ಆಡುತ್ತಾರೆ. ಒಂದುವೇಳೆ ಅ ಪಂದ್ಯ ಅವರು ಸೋತರೆ ಕ್ವಾಲಿಫರ್-2 ರಲ್ಲಿ ಎಲಿಮಿನೇಟರ್ ವಿಜೇತರೊಂದಿಗೆ ಆಡುವಾಗ ಅವರಿಗೆ ಮತ್ತೊಂದು ಅವಕಾಶವಿರುತ್ತದೆ.