IPL 2025: ಡೆಲ್ಲಿ ಕ್ಯಾಪಿಟಲ್ಸ್​ಗೆ ಬಿಗ್​​ ಶಾಕ್! ಐಪಿಎಲ್​ಗೆ ಮರಳದಿರಲು ವಿದೇಶಿ ಸ್ಟಾರ್ ಬೌಲರ್ ನಿರ್ಧಾರ | Mitchell Starc s IPL 2025 Future in Doubt Reports Suggest DC Pacer s Unlikely Return

IPL 2025: ಡೆಲ್ಲಿ ಕ್ಯಾಪಿಟಲ್ಸ್​ಗೆ ಬಿಗ್​​ ಶಾಕ್! ಐಪಿಎಲ್​ಗೆ ಮರಳದಿರಲು ವಿದೇಶಿ ಸ್ಟಾರ್ ಬೌಲರ್ ನಿರ್ಧಾರ | Mitchell Starc s IPL 2025 Future in Doubt Reports Suggest DC Pacer s Unlikely Return

Last Updated:


ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಘ್ನತೆ ಇರುವುದರಿಂದ ಸ್ಟಾರ್ ಬೌಲರ್​ ಮತ್ತೆ ಭಾರತಕ್ಕೆ ಮರಳದಿರಲು ನಿರ್ಧರಿಸಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮವೊಂದು ವರಿ ಮಾಡಿದೆ.

ಮಿಚೆಲ್ ಸ್ಟಾರ್ಕ್​ಮಿಚೆಲ್ ಸ್ಟಾರ್ಕ್​
ಮಿಚೆಲ್ ಸ್ಟಾರ್ಕ್​

ಮೇ 8 ರಂದು ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Punjab Kings vs Delhi Capitals) ನಡುವಿನ ಐಪಿಎಲ್ ಪಂದ್ಯವನ್ನು ಬಿಸಿಸಿಐ ಸ್ಥಗಿತಗೊಳಿಸಿತ್ತು. ಭಾರತ-ಪಾಕಿಸ್ತಾನ (India vs Pakistan) ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ನಂತರ ಇಡೀ ಲೀಗ್ ಅನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ಆದರೆ, ಐಪಿಎಲ್ ಶೀಘ್ರದಲ್ಲೇ ಮತ್ತೆ ಪ್ರಾರಂಭವಾಗಲಿದೆ. ವರದಿಗಳ ಪ್ರಕಾರ, ಬಿಸಿಸಿಐ (BCCI) ಶೀಘ್ರದಲ್ಲೇ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಬಹುದು. ಆದರೆ ಹೆಚ್ಚಿನ ವಿದೇಶಿ ಆಟಗಾರರು ತಮ್ಮ ದೇಶಗಳಿಗೆ ಮರಳಿದ್ದಾರೆ. ಈ ಆಟಗಾರರಲ್ಲಿ ಒಂದಿಬ್ಬರು ಭಾರತಕ್ಕೆ ಮರಳುವುದು ಕಷ್ಟಕರವೆಂದು ಪರಿಗಣಿಸಲಾಗಿದೆ.

ಈ ವಿದೇಶಿ ಆಟಗಾರ ಭಾರತಕ್ಕೆ ಹಿಂತಿರುಗುವುದಿಲ್ಲ!

ಐಪಿಎಲ್ 2025 ಪುನರಾರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಬಹುದು. ವರದಿಗಳ ಪ್ರಕಾರ, ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಉಳಿದ ಪಂದ್ಯಗಳಿಗೆ ಭಾರತಕ್ಕೆ ಬರುವುದು ಕಷ್ಟಕರವೆಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯಾದ ಮಾಧ್ಯಮ ಚಾನೆಲ್ 9ರ ಪ್ರಕಾರ, ಸ್ಟಾರ್ಕ್ ಮತ್ತು ಅವರ ಪತ್ನಿ ಭಾನುವಾರ ಸಿಂಗಾಪುರದಿಂದ ಸಿಡ್ನಿಗೆ ಆಗಮಿಸಿದರು. ಐಪಿಎಲ್ 2025 ಪುನರಾರಂಭವಾದಾಗ ಈ ಸ್ಟಾರ್ ಬೌಲರ್ ಭಾರತಕ್ಕೆ ಹೋಗುವುದಿಲ್ಲ ಎಂದು ಸ್ಟಾರ್ಕ್ ತಮ್ಮ ಮ್ಯಾನೇಜರ್​ಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಡೆಲ್ಲಿ ತಂಡಕ್ಕೆ ಸ್ಟಾರ್ ಬೌಲರ್

ಮಿಚೆಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರು. ಈ ಋತುವಿನಲ್ಲಿ ಅವರು 12 ಪಂದ್ಯಗಳನ್ನು ಆಡಿದ್ದಾರೆ ಮತ್ತು 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಎಕಾನಮಿ 10.23 ಆಗಿದೆ. ಒಂದು ಪಂದ್ಯದಲ್ಲಿ ಅವರು 5 ವಿಕೆಟ್‌ಗಳನ್ನು ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಹಂತದಲ್ಲಿ ಇನ್ನೂ 4 ಪಂದ್ಯಗಳು ಉಳಿದಿವೆ. ಪ್ರಸ್ತುತ ತಂಡ 13 ಅಂಕಗಳೊಂದಿಗೆ ಅವರು ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಪ್ಲೇ ಆಫ್​ ಪ್ರವೇಶಿಸಲು ಎಲ್ಲಾ ಪಂದ್ಯಗಳಲ್ಲೂ ಗೆಲುವು ಅನಿವಾರ್ಯವಾಗಿದೆ. ಪ್ಲೇಆಫ್ ತಲುಪಲು ತುಂಬಾ ಹತ್ತಿರದಲ್ಲಿದ್ದಾಗ ಸ್ಟಾರ್ಕ್ ಅನುಪಸ್ಥಿತಿ ದೆಹಲಿಗೆ ದೊಡ್ಡ ಆಘಾತವಾಗಿದೆ.

ಎರಡು ಕಾರಣಗಳಿಂದ ಐಪಿಎಲ್​ನಿಂದ ದೂರ

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಘ್ನತೆ ಇರುವುದರಿಂದ ಸ್ಟಾರ್ಕ್ ಮತ್ತೆ ಭಾರತಕ್ಕೆ ಮರಳದಿರಲು ನಿರ್ಧರಿಸಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮವೊಂದು ವರಿ ಮಾಡಿದೆ. ಸ್ಟಾರ್ಕ್ ಒಬ್ಬರೆ ಮಾತ್ರವಲ್ಲ, ಇತರೆ ಕೆಲವು ಆಟಗಾರರು ಕೂಡ ಸ್ಟಾರ್ಕ್​ ನಿರ್ಧಾರವನ್ನ ಅನುಸರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ ಪಂದ್ಯ ಜೂನ್ 11 ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯವು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯವು ಮಿಚೆಲ್ ಸ್ಟಾರ್ಕ್ ಭಾರತಕ್ಕೆ ಮರಳದಿರಲು ಒಂದು ದೊಡ್ಡ ಕಾರಣವಾಗಬಹುದು. ಅವರು ಐಪಿಎಲ್‌ನ ಉಳಿದ ಪಂದ್ಯಗಳನ್ನು ಮಿಸ್ ಮಾಡಿಕೊಂಡು ರೆಡ್​​ ಬಾಲ್​ ಕ್ರಿಕೆಟ್​​ಗೆ ತಯಾರಿ ಆರಂಭಿಸಬಹುದು. ಆದರೆ ಸ್ಟಾರ್ಕ್​ ಐಪಿಎಲ್​​ನಲ್ಲಿ ಈ ಹಿಂದೆಯೂ ಹಲವು ಆವೃತ್ತಿಗಳಲ್ಲೂ ಅವರು ಮಿಸ್ ಮಾಡಿಕೊಂಡಿದ್ದರು.