IPL 2025: ಡೆಲ್ಲಿ, ಗುಜರಾತ್, ಮುಂಬೈ ಅಲ್ಲ, ಆ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುತ್ತೇ! ಯುವಿ ಭವಿಷ್ಯ | Yuvraj Singh Picks His Favorite team to win IPL 2025

IPL 2025: ಡೆಲ್ಲಿ, ಗುಜರಾತ್, ಮುಂಬೈ ಅಲ್ಲ, ಆ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುತ್ತೇ! ಯುವಿ ಭವಿಷ್ಯ | Yuvraj Singh Picks His Favorite team to win IPL 2025

Last Updated:

ಐಪಿಎಲ್ 2025 ರೋಚಕ ತಿರುವುಗಳೊಂದಿಗೆ ಮುಂದುವರಿಯುತ್ತಿದ್ದು, ಯುವರಾಜ್ ಸಿಂಗ್ ಪಂಜಾಬ್ ಕಿಂಗ್ಸ್ ಟ್ರೋಫಿ ಗೆಲ್ಲಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. SRH 8ನೇ ಸ್ಥಾನದಲ್ಲಿದೆ, PBKS 5ನೇ ಸ್ಥಾನದಲ್ಲಿದೆ.

ಯುವರಾಜ್ ಸಿಂಗ್ಯುವರಾಜ್ ಸಿಂಗ್
ಯುವರಾಜ್ ಸಿಂಗ್

ಐಪಿಎಲ್ 2025 (IPL 2025) ಋತುವು ರೋಚಕ ತಿರುವುಗಳೊಂದಿಗೆ ಮುಂದುವರಿಯುತ್ತಿದೆ. ಈ ಮಧ್ಯೆ, ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ತಮ್ಮ ನೆಚ್ಚಿನ ತಂಡ ಮತ್ತು ಟ್ರೋಫಿ ಗೆಲ್ಲುವ ತಂಡದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕರ್ಲಿ ಟೇಲ್ಸ್‌ನ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ಮಾತನಾಡಿದ ಯುವರಾಜ್, “ನನ್ನ ನೆಚ್ಚಿನ ತಂಡ ಸನ್‌ರೈಸರ್ಸ್ ಹೈದರಾಬಾದ್ (SRH), ಆದರೆ ಈ ವರ್ಷ ಪಂಜಾಬ್ ಕಿಂಗ್ಸ್ (PBKS) ಟ್ರೋಫಿ ಗೆಲ್ಲಬಹುದು ಎಂಬ ಭಾವನೆ ಇದೆ,” ಎಂದು ಬಹಿರಂಗಪಡಿಸಿದ್ದಾರೆ. ಈ ಭವಿಷ್ಯವಾಣಿಯು ಐಪಿಎಲ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ, ಏಕೆಂದರೆ PBKS ಇದುವರೆಗೆ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ.

ಪಾಯಿಂಟ್ ಪಟ್ಟಿಯ ಸ್ಥಿತಿ

ಪ್ರಸ್ತುತ ಐಪಿಎಲ್ 2025 ಪಾಯಿಂಟ್ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಲಾ 12 ಅಂಕಗಳೊಂದಿಗೆ ಮೊದಲ ಮೂರು ಸ್ಥಾನಗಳಲ್ಲಿವೆ. ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನದಲ್ಲಿದೆ. PBKS ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಲಾ ದು ಪಂದ್ಯಗಳನ್ನು ಗೆದ್ದಿದ್ದು, 10 ಅಂಕಗಳೊಂದಿಗೆ5 ಮತ್ತು6ನೇ ಸ್ಥಾನದಲ್ಲಿವೆ. ಒಟ್ಟು 10 ತಂಡಗಳಲ್ಲಿ 6 ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿವೆ, ಆದರೆ ಕೇವಲ 4 ತಂಡಗಳು ಪ್ಲೇಆಫ್‌ಗೆ ತಲುಪಲಿವೆ. SRH ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಆತನ ಆಟ ನೋಡ್ತಿದ್ರೆ ಕ್ರಿಸ್ ಗೇಲ್ ನೆನಪಾದ್ರು! 22 ವರ್ಷದ ಆಟಗಾರ ಸೂಪರ್ ಸ್ಟಾರ್ ಆಗ್ತಾರೆ ಎಂದ ಕುಂಬ್ಳೆ

SRH ಯಾಕೆ ಫೇವರಿಟ್?

ಯುವರಾಜ್ ಸಿಂಗ್‌ಗೆ SRH ನೆಚ್ಚಿನ ತಂಡವಾಗಿರಲು ಪ್ರಮುಖ ಕಾರಣವೆಂದರೆ ಯುವ ಆಟಗಾರ ಅಭಿಷೇಕ್ ಶರ್ಮಾ. ಯುವರಾಜ್ ಅಭಿಷೇಕ್‌ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಅಭಿಷೇಕ್ ಶತಕವನ್ನೂ ಸಿಡಿಸಿದ್ದರು. ಹಾಗಾಗಿ ಯುವಿ ಹೈದರಾಬಾದ್​ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ. ಅಲ್ಲದೆ 2016ರಲ್ಲಿ ಯುವರಾಜ್ ಇದೇ ತಂಡದ ಪರ ಆಡಿ ಚಾಂಪಿಯನ್ ತಂಡದ ಭಾಗವಾಗಿದ್ದರು. ಆದರೆ, SRHನ ಸ್ಥಿರತೆಯ ಕೊರತೆಯಿಂದಾಗಿ ಅವರು ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

PBKS ಟ್ರೋಫಿ ಗೆಲ್ಲುವ ಆತ್ಮವಿಶ್ವಾಸ

ಯುವರಾಜ್‌ರ ಭವಿಷ್ಯವಾಣಿಯಂತೆ PBKS ಈ ವರ್ಷ ಟ್ರೋಫಿ ಗೆಲ್ಲುವ ಸಾಧ್ಯತೆ ಇದೆಯಂತೆ. ಶ್ರೇಯಸ್ ಅಯ್ಯರ್ ನಾಯಕತ್ವದ ಈ ತಂಡವು 8 ಪಂದ್ಯಗಳಲ್ಲಿ 5 ಗೆಲುವುಗಳೊಂದಿಗೆ 5ನೇ ಸ್ಥಾನದಲ್ಲಿದೆ. 2025ರ ಮೆಗಾ ಆಕ್ಷನ್‌ನಲ್ಲಿ PBKS ಶ್ರೇಯಸ್ ಅಯ್ಯರ್‌ಗೆ 26.75 ಕೋಟಿ ರೂಪಾಯಿ, ಯುಜವೇಂದ್ರ ಚಹಾಲ್‌ಗೆ 18 ಕೋಟಿ, ಮತ್ತು ಅರ್ಶದೀಪ್ ಸಿಂಗ್‌ಗೆ 18 ಕೋಟಿ ರೂಪಾಯಿ ಖರ್ಚು ಮಾಡಿತು. ಚಹಾಲ್‌ 12 ವಿಕೆಟ್‌ಗಳು (ಎಕಾನಮಿ 7.45) ಮತ್ತು ಅರ್ಶದೀಪ್‌ 10 ವಿಕೆಟ್‌ಗಳು ಪಡೆದು ಪಂಜಾಬ್ ಬೌಲಿಂಗ್ ಪಡೆಯ ಆಧಾರ ಸ್ಥಂಭವಾಗಿದ್ದಾರೆ. ಶ್ರೇಯಸ್ ಅಯ್ಯರ್ 9 ಪಂದ್ಯಗಳಲ್ಲಿ 288 ರನ್​ಗಳಿಸಿದೆ.

ಇದನ್ನೂ ಓದಿ: ಮೊದಲು ಆರ್​ಸಿಬಿ, ಡೆಲ್ಲಿ, ಈಗ SRHಗೆ ಮೊದಲ ಜಯ! ಚೆಪಾಕ್​​ನಲ್ಲಿ ಸಿಎಸ್​ಕೆ ಪ್ರಾಬಲ್ಯ ಅಂತ್ಯ!

ಯುವರಾಜ್‌ರ ಪಂಜಾಬ್ ಸಂಪರ್ಕ

ಯುವರಾಜ್ ಸಿಂಗ್‌ಗೆ PBKSನೊಂದಿಗೆ ಭಾವನಾತ್ಮಕ ಸಂಬಂಧವಿದೆ. ಪಂಜಾಬ್‌ನ ಚಂಡೀಗಢದವರಾದ ಯುವರಾಜ್ 2008ರಲ್ಲಿ PBKSಗಾಗಿ ಐಪಿಎಲ್ ಚೊಚ್ಚಲ ಪಂದ್ಯವಾಡಿದ್ದರು. 132 ಐಪಿಎಲ್ ಪಂದ್ಯಗಳಲ್ಲಿ 2,750 ರನ್ (13 ಅರ್ಧಶತಕ, ಸ್ಟ್ರೈಕ್ ರೇಟ್ 129.72) ಮತ್ತು 36 ವಿಕೆಟ್‌ಗಳನ್ನು ಪಡೆದಿದ್ದಾರೆ. 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಎರಡು ಹ್ಯಾಟ್ರಿಕ್‌ಗಳನ್ನು ತೆಗೆದುಕೊಂಡಿದ್ದರು. ಈ ಸಾಧನೆಗಳಿಂದ PBKSಗೆ ಯುವರಾಜ್‌ರ ಒಲವು ಸಹಜವಾಗಿದೆ. ಅವರ ಭವಿಷ್ಯವಾಣಿಯು PBKS ಅಭಿಮಾನಿಗಳಿಗೆ ಭರವಸೆಯನ್ನು ತುಂಬಿದೆ.