IPL 2025: ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಸಿಎಸ್​ಕೆ! ಅಗ್ರಸ್ಥಾನ ಉಳಿಸಿಕೊಳ್ಳಲು ಗುಜರಾತ್​​ಗೆ ಕೊನೆಯ ಅವಕಾಶ | ipl 2025 Chennai Super Kings wins toss elects to bat against Gujarat Titans

IPL 2025: ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಸಿಎಸ್​ಕೆ! ಅಗ್ರಸ್ಥಾನ ಉಳಿಸಿಕೊಳ್ಳಲು ಗುಜರಾತ್​​ಗೆ ಕೊನೆಯ ಅವಕಾಶ | ipl 2025 Chennai Super Kings wins toss elects to bat against Gujarat Titans

ಈ ಋತುವಿನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಆರು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ.  ಇದೇ ಕಾರಣದಿಂದ ಟಾಸ್ ಗೆದ್ದ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ಗೆ ಇದು ಮರೆಯಲಾಗದ ಸೀಸನ್ ಆಗಲಿದೆ. ಮೊದಲ ಪಂದ್ಯದಲ್ಲಿ ತಂಡ ಗೆಲುವಿನೊಂದಿಗೆ ಆರಂಭ ಮಾಡಿತು. ಆದರೆ ನಂತರ, ಅವರ ಕಾರು ಹಳಿ ತಪ್ಪಿತು, 13 ಪಂದ್ಯಗಳಲ್ಲಿ ಕೇವಲ  3ರಲ್ಲಿ ಮಾತ್ರ ಜಯ ಸಾಧಿಸಿದೆ.   ನಾಯಕ ರುತುರಾಜ್ ಗಾಯಕ್ವಾಡ್ ಕೂಡ ಗಾಯಗೊಂಡರು. ಆದಾಗ್ಯೂ, ಕೆಲವು ಹೊಸ ಮುಖಗಳ ಸೇರ್ಪಡೆಯ ನಂತರ, ತಂಡದಲ್ಲಿ ಚೇತರಿಕೆ ಕಂಡಿತಾದೂ ಅದು ತಂಡವನ್ನ ಕೊನೆಯ ಸ್ಥಾನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇತ್ತ ಗುಜರಾತ್ ಟೈಟನ್ಸ್ 13 ಪಂದ್ಯಗಳಲ್ಲಿ 9ರಲ್ಲಿ ಜಯ ಸಾಧಿಸಿ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದ ಅಗ್ರಸ್ಥಾನವನ್ನ ಉಳಿಸಿಕೊಳ್ಳಲಿದೆ.  ಆಗ ಉಳಿದ ಮೂರು ತಂಡಗಳು ಕೇವಲ 2ನೇ ಸ್ಥಾನಕ್ಕೆ ಮಾತ್ರ ಪೈಪೋಟಿ ನಡೆಸಲಿವೆ.

ಹೆಡ್​ ಟು ಹೆಡ್​ ದಾಖಲೆ

ಎರಡು ತಂಡಗಳು ಇಲ್ಲಿಯವರೆಗೆ 7 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಗುಜರಾತ್ ಟೈಟನ್ಸ್ 4ರಲ್ಲಿ ಸಿಎಸ್​ಕೆ 3ರಲ್ಲಿ ಜಯ ಸಾಧಿಸಿದೆ. ಅಹ್ಮದಾಬಾದ್​​ನಲ್ಲಿ ನಡೆದಿರುವ 3 ಪಂದ್ಯಗಳಲ್ಲಿ ಗುಜರಾತ್ 2ರಲ್ಲಿ, ಸಿಎಸ್​ಕೆ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ಪ್ಲೇಯಿಂಗ್ ಇಲೆವೆನ್

ಚೆನ್ನೈ ಸೂಪರ್ ಕಿಂಗ್ಸ್: ಆಯುಷ್ ಮ್ಹಾತ್ರೆ, ಡೆವೊನ್ ಕಾನ್ವೇ, ಉರ್ವಿಲ್ ಪಟೇಲ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಎಂಎಸ್ ಧೋನಿ (ವಿಕೀ/ಸಿ), ದೀಪಕ್ ಹೂಡಾ, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಖಲೀಲ್ ಅಹ್ಮದ್.

ಇಂಪ್ಯಾಕ್ಟ್ ಸಬ್‌ಗಳು: ಮತಿಶ ಪತಿರಣ, ವಿಜಯ್ ಶಂಕರ್, ಕಮಲೇಶ್ ನಾಗರಕೋಟಿ, ರಾಮಕೃಷ್ಣ ಘೋಷ್, ಆರ್ ಅಶ್ವಿನ್

ಗುಜರಾತ್ ಟೈಟಾನ್ಸ್ : ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೀ), ಶೆರ್ಫೇನ್ ರುದರ್‌ಫೋರ್ಡ್, ಶಾರುಖ್ ಖಾನ್, ರಶೀದ್ ಖಾನ್, ಜೆರಾಲ್ಡ್ ಕೋಟ್ಜಿ, ರಾಹುಲ್ ತೆವಾಟಿಯಾ, ಮೊಹಮ್ಮದ್ ಸಿರಾಜ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅರ್ಷದ್ ಖಾನ್, ಪ್ರಸಿದ್ಧ್ ಕೃಷ್ಣ

ಇಂಪ್ಯಾಕ್ಟ್ ಸಬ್‌ಗಳು: ಸಾಯಿ ಸುದರ್ಶನ್, ಅನುಜ್ ರಾವತ್, ವಾಷಿಂಗ್ಟನ್ ಸುಂದರ್, ಮಹಿಪಾಲ್ ಲೊಮ್ರೋರ್ ಮತ್ತು ಇಶಾಂತ್ ಶರ್ಮಾ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IPL 2025: ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಸಿಎಸ್​ಕೆ! ಅಗ್ರಸ್ಥಾನ ಉಳಿಸಿಕೊಳ್ಳಲು ಗುಜರಾತ್​​ಗೆ ಕೊನೆಯ ಅವಕಾಶ