Last Updated:
ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಆರ್‌ಸಿಬಿಯ ಬೌಲಿಂಗ್ ದಾಳಿಗೆ ತತ್ತರಿಸಿ 14.1 ಓವರ್‌ಗಳಲ್ಲಿ 101 ರನ್‌ಗೆ ಆಲೌಟ್ ಆಗಿತ್ತು. ಈ ಗುರಿಯನ್ನ 10 ಓವರ್ಗಳಲ್ಲೇ ತಲುಪಿ ಇತಿಹಾಸ ಸೃಷ್ಟಿಸಿತು.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) 2025ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದೆ. ಪಂಜಾಬ್ ಕಿಂಗ್ಸ್ ನೀಡಿದ್ದ 102 ರನ್‌ಗಳ ಗುರಿಯನ್ನು ಕೇವಲ 10 ಓವರ್‌ಗಳಲ್ಲಿ ಚೇಸ್ ಮಾಡಿ, ಐಪಿಎಲ್ ಪ್ಲೇಆಫ್‌ನ ಇತಿಹಾಸದಲ್ಲಿ ಅತಿ ವೇಗದ ರನ್ ಚೇಸ್ ದಾಖಲೆಯನ್ನು (60 ಎಸೆತಗಳು ಬಾಕಿ ಇರುವಾಗ) ಬರೆಯಿತು. ಈ ಗೆಲುವಿನೊಂದಿಗೆ ಆರ್‌ಸಿಬಿಯು 9 ವರ್ಷಗಳ ನಂತರ (2016ರಿಂದ) ಐಪಿಎಲ್ ಫೈನಲ್‌ಗೆ ಪ್ರವೇಶಿಸಿದೆ. ಫೈನಲ್ ಪಂದ್ಯ ಜೂನ್ 3, 2025 ರಂದು (ಮಂಗಳವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕೆಕೆಆರ್ ದಾಖಲೆಯನ್ನು ಮುರಿದ ಆರ್‌ಸಿಬಿ
ಈ ಪಂದ್ಯಕ್ಕೂ ಮುಂಚೆ, ಐಪಿಎಲ್ ಪ್ಲೇಆಫ್‌ನ ಅತಿ ವೇಗದ ರನ್ ಚೇಸ್ ದಾಖಲೆಯು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಹೆಸರಿನಲ್ಲಿತ್ತು. 2024ರ ಐಪಿಎಲ್ ಫೈನಲ್‌ನಲ್ಲಿ ಕೆಕೆಆರ್, ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ವಿರುದ್ಧ 114 ರನ್‌ಗಳ ಗುರಿಯನ್ನು 57 ಎಸೆತಗಳು ಬಾಕಿ ಇರುವಾಗ ಚೇಸ್ ಮಾಡಿತ್ತು. ಆದರೆ, ಆರ್‌ಸಿಬಿಯು ಈಗ 102 ರನ್‌ಗಳ ಗುರಿಯನ್ನು 60 ಎಸೆತಗಳು ಬಾಕಿ ಇರುವಾಗ ಗೆದ್ದು, ಹೊಸ ದಾಖಲೆ ಸೃಷ್ಟಿಸಿದೆ. 2024ರಲ್ಲೇ ಕ್ವಾಲಿಫೈಯರ್ 2ರಲ್ಲಿ 38 ಎಸೆತಗಳಿರುವಂತೆ ಕೆಕೆಆರ್ ಗೆಲುವು ಸಾಧಿಸಿತ್ತು.
ಆರ್‌ಸಿಬಿ ದೊಡ್ಡ ಅಂತರದ ಜಯ
ಇನ್ನು ಆರ್‌ಸಿಬಿ ಕೂಡ ವೇಗವಾಗಿ ಚೇಸ್ ಮಾಡಿದ 2ನೇ ಗೆಲುವಾಗಿದೆ. 2018ರಲ್ಲಿ ಇದೇ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ 71 ಎಸೆತಗಳಿರುವಂತೆ ಗೆಲುವು ಸಾಧಿಸಿತ್ತು. 2015ರಲ್ಲಿ ಡೆಲ್ಲಿ ವಿರುದ್ಧ 57 ಎಸೆತಗಳಿರುವಂತೆ, 2010ರಲ್ಲಿ ರಾಜಸ್ಥಾನ್ ವಿರುದ್ಧ 56 ಎಸೆತಗಳಿರುವಂತೆ ಗೆಲುವು ಸಾಧಿಸಿತ್ತು.
ಪಂದ್ಯದ ವಿವರ
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು ಆರ್‌ಸಿಬಿಯ ಬೌಲಿಂಗ್ ದಾಳಿಗೆ ತತ್ತರಿಸಿ 14.1 ಓವರ್‌ಗಳಲ್ಲಿ 101 ರನ್‌ಗೆ ಆಲೌಟ್ ಆಗಿತ್ತು. ಆರ್‌ಸಿಬಿಯ ಜೋಶ್ ಹ್ಯಾಜಲ್‌ವುಡ್ ಮತ್ತು ಸುಯಶ್ ಶರ್ಮಾ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿ ಪಿಬಿಕೆಎಸ್ ಅಲ್ಪಮೊತ್ತಕ್ಕೆ ಕಟ್ಟಿಹಾಕಲು ನೆರವಾದರು.
ಎರಡನೇ ಇನಿಂಗ್ಸ್‌ನಲ್ಲಿ ಆರ್‌ಸಿಬಿಯ ಓಪನರ್ ಫಿಲ್ ಸಾಲ್ಟ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವು ತಂದುಕೊಟ್ಟರು. ಸಾಲ್ಟ್ 27 ಎಸೆತಗಳಲ್ಲಿ 56* ರನ್ (6 ಬೌಂಡರಿ, 3 ಸಿಕ್ಸರ್) ಗಳಿಸಿದರು. ವಿರಾಟ್ ಕೊಹ್ಲಿಯವರು 12 ಎಸೆತಗಳಲ್ಲಿ 12 ರನ್, ಮಯಾಂಕ್ ಅಗರವಾಲ್ 13 ಎಸೆತಗಳಲ್ಲಿ 19 ರನ್, ಮತ್ತು ರಜತ್ ಪಾಟಿದಾರ್ 8 ಎಸೆತಗಳಲ್ಲಿ 15* ರನ್ ಗಳಿಸಿ ತಂಡಕ್ಕೆ ವೇಗದ ಗೆಲುವನ್ನು ತಂದುಕೊಟ್ಟರು. ಕೇವಲ 10 ಓವರ್‌ಗಳಲ್ಲಿ 102 ರನ್‌ಗಳನ್ನು ಚೇಸ್ ಮಾಡಿ, ಆರ್‌ಸಿಬಿಯು ಐತಿಹಾಸಿಕ ಗೆಲುವು ಸಾಧಿಸಿತು.
8 ವರ್ಷಗಳ ನಂತರ ಫೈನಲ್
ಈ ಗೆಲುವಿನೊಂದಿಗೆ ಆರ್‌ಸಿಬಿಯು 2016ರ ನಂತರ ಮೊದಲ ಬಾರಿಗೆ ಐಪಿಎಲ್ ಫೈನಲ್ ತಲುಪಿದೆ, ಇದು ಜೂನ್ 3, 2025 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಪಂಜಾಬ್ ಕಿಂಗ್ಸ್ ಈಗ ಜೂನ್ 1, 2025 ರಂದು ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರನ್ನು ಎದುರಿಸಲಿದೆ. ಈ ಎಲಿಮಿನೇಟರ್ ಪಂದ್ಯವು ಮೇ 30, 2025 ರಂದು ನಡೆಯಲಿದೆ.
May 29, 2025 11:00 PM IST