IPL 2025: ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿಯಲ್ಲೂ ಬದಲಾವಣೆ: ಕೋಲ್ಕತ್ತಾದಿಂದ ಫೈನಲ್​ ಪಂದ್ಯ ಸ್ಥಳಾಂತರ; ಇಲ್ಲಿದೆ ಮಾಹಿತಿ | IPL 2025 Final match in Ahmedabad Playoffs in Mumbai

IPL 2025: ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿಯಲ್ಲೂ ಬದಲಾವಣೆ: ಕೋಲ್ಕತ್ತಾದಿಂದ ಫೈನಲ್​ ಪಂದ್ಯ ಸ್ಥಳಾಂತರ; ಇಲ್ಲಿದೆ ಮಾಹಿತಿ | IPL 2025 Final match in Ahmedabad Playoffs in Mumbai

Last Updated:

ಭಾರತ-ಪಾಕಿಸ್ತಾನ ದೇಶಗಳ ನಡುವೆ ಕದನ ವಿರಾಮ (Ceasefire) ಘೋಷಣೆಯಾಗಿದ್ದು, ಐಪಿಎಲ್ ಮೇ 17 ರಿಂದ ಪುನರಾರಂಭವಾಗಲಿದೆ ಎಂದು ಬಿಸಿಸಿಐ (BCCI) ತಿಳಿಸಿದೆ.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತ-ಪಾಕಿಸ್ತಾನ (India Pakistan War) ನಡುವಿನ ಸಂಘರ್ಷದ ಬಳಿಕ (ಏಪ್ರಿಲ್ 9 ರಿಂದ) ದಿಢೀರ್‌ನೆ ಐಪಿಎಲ್ ಪಂದ್ಯಾವಳಿಗಳನ್ನು (IPL Matches) ಮುಂದೂಡಲಾಯಿತು. ಇದೀಗ ಉಭಯ ದೇಶಗಳ ನಡುವೆ ಕದನ ವಿರಾಮ (Ceasefire) ಘೋಷಣೆಯಾಗಿದ್ದು, ಐಪಿಎಲ್ ಮೇ 17 ರಿಂದ ಪುನರಾರಂಭವಾಗಲಿದೆ ಎಂದು ಬಿಸಿಸಿಐ (BCCI) ತಿಳಿಸಿದೆ. ಆದ್ರೆ, ಬಿಸಿಸಿಐ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳು ನಡೆಯುವ ಸ್ಥಳ ಯಾವುದು ಎಂದು ಸ್ಪಷ್ಟಪಡಿಸಿರಲಿಲ್ಲ. ಆದ್ರೀಗ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಾವಳಿ ನಡೆಯುವ ಸ್ಥಳಗಳ ಕುರಿತು ವರಿಯಾಗಿದೆ.

2025 ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯವು ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ. ಹಾಗೂ ಪ್ಲೇ ಆಫ್ ಪಂದ್ಯಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸುವ ನಿರೀಕ್ಷೆ ಇದೆ ಎಂದು ಸೋಮವಾರ ರಾತ್ರಿ ಬಿಸಿಸಿಐ ಪರಿಷ್ಕೃತ ಐಪಿಎಲ್ 2025 ವೇಳಾಪಟ್ಟಿ ಘೋಷಿಸಿದ ನಂತರ ಮಂಗಳವಾರ (ಮೇ 13) ಟೈಮ್ಸ್ ಆಫ್ ಇಂಡಿಯಾ ಈ ಬೆಳವಣಿಗೆಯನ್ನು ವರದಿ ಮಾಡಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಪ್ಲೇಆಫ್‌ಗಳ ಸ್ಥಳಗಳನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ. ಐಪಿಎಲ್ 2025 ರ ಫೈನಲ್ ಪಂದ್ಯವನ್ನು ಜೂನ್ 3 ರಂದು ನಡೆಸಲಾಗುವುದು ಮತ್ತು ಎರಡು ಅರ್ಹತಾ ಪಂದ್ಯಗಳನ್ನು ಮೇ 29 ಮತ್ತು ಜೂನ್ 1 ರಂದು ನಿಗದಿಪಡಿಸಲಾಗಿದೆ. ಹಾಗೂ ಎಲಿಮಿನೇಟರ್ ಪಂದ್ಯವು ಮೇ 30 ರಂದು ನಡೆಯಲಿದೆ.

ಈ ಮೊದಲಿನ ವೇಳಾಪಟ್ಟಿಯಲ್ಲಿ, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮೇ 23 ರಂದು ಎರಡನೇ ಕ್ವಾಲಿಫೈಯರ್ ಮತ್ತು ಮೇ 25 ರಂದು ಐಪಿಎಲ್ 2025 ರ ಫೈನಲ್ ನಡೆಯಬೇಕಿತ್ತು. ಹಾಗೂ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೇ 20 ರಂದು ಮೊದಲ ಕ್ವಾಲಿಫೈಯರ್ ಮತ್ತು ಮೇ 21 ರಂದು ಎಲಿಮಿನೇಟರ್ ಪಂದ್ಯಕ್ಕೆ ಆತಿಥ್ಯ ವಹಿಸಬೇಕಿತ್ತು.

ಐಪಿಎಲ್ ಪರಿಷ್ಕೃತ ವೇಳಾಪಟ್ಟಿ

ದಿನಾಂಕ ದಿನ ತಂಡ 1 ತಂಡ 2 ಸ್ಥಳ ಸಮಯ (IST)
ಮೇ 17 ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತ್ತಾ ನೈಟ್ ರೈಡರ್ಸ್ ಬೆಂಗಳೂರು ಸಂಜೆ 7:30
ಮೇ 18 ಭಾನುವಾರ ರಾಜಸ್ಥಾನ ರಾಯಲ್ಸ್ ಪಂಜಾಬ್ ಕಿಂಗ್ಸ್ ಜೈಪುರ ಮಧ್ಯಾಹ್ನ 3:30
ಮೇ 18 ಭಾನುವಾರ ದೆಹಲಿ ಕ್ಯಾಪಿಟಲ್ಸ್ ಗುಜರಾತ್ ಟೈಟಾನ್ಸ್ ದೆಹಲಿ ಸಂಜೆ 7:30
ಮೇ 19 ಸೋಮವಾರ ಲಕ್ನೋ ಸೂಪರ್ ಜೈಂಟ್ಸ್ ಸನ್‌ರೈಸರ್ಸ್ ಹೈದರಾಬಾದ್ ಲಕ್ನೋ ಸಂಜೆ 7:30
ಮೇ 20 ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ ರಾಯಲ್ಸ್ ದೆಹಲಿ ಸಂಜೆ 7:30
ಮೇ 21 ಬುಧವಾರ ಮುಂಬೈ ಇಂಡಿಯನ್ಸ್ ದೆಹಲಿ ಕ್ಯಾಪಿಟಲ್ಸ್ ದೆಹಲಿ ಸಂಜೆ 7:30
ಮೇ 22 ಗುರುವಾರ ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ ಜೈಂಟ್ಸ್ ಅಹಮದಾಬಾದ್ ಸಂಜೆ 7:30
ಮೇ 23 ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್‌ರೈಸರ್ಸ್ ಹೈದರಾಬಾದ್ ಬೆಂಗಳೂರು ಸಂಜೆ 7:30
ಮೇ 24 ಶನಿವಾರ ಪಂಜಾಬ್ ಕಿಂಗ್ಸ್ ದೆಹಲಿ ಕ್ಯಾಪಿಟಲ್ಸ್ ಜೈಪುರ ಸಂಜೆ 7:30
ಮೇ 25 ಭಾನುವಾರ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಅಹಮದಾಬಾದ್ ಮಧ್ಯಾಹ್ನ 3:30
ಮೇ 25 ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ಕೋಲ್ಕತ್ತಾ ನೈಟ್ ರೈಡರ್ಸ್ ದೆಹಲಿ ಸಂಜೆ 7:30
ಮೇ 26 ಸೋಮವಾರ ಪಂಜಾಬ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ಜೈಪುರ ಸಂಜೆ 7:30
ಮೇ 27 ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸಂಜೆ 7:30
ಮೇ 29 ಗುರುವಾರ ಕ್ವಾಲಿಫೈಯರ್ 1 ಸಂಜೆ 7:30
ಮೇ 30 ಶುಕ್ರವಾರ ಎಲಿಮಿನೇಟರ್ ಸಂಜೆ 7:30
ಜೂನ್ 1 ಭಾನುವಾರ ಕ್ವಾಲಿಫೈಯರ್ 2 ಸಂಜೆ 7:30
ಜೂನ್ 3 ಮಂಗಳವಾರ ಅಂತಿಮ ಸಂಜೆ 7:30

ಐಪಿಎಲ್ 2025 ಮೇ 17 ರಿಂದ ಪುನರಾರಂಭ

ಮೇ 9 ರಂದು ಒಂದು ವಾರದವರೆಗೆ ಸ್ಥಗಿತಗೊಳಿಸಲಾದ ಐಪಿಎಲ್ 2025 ಆವೃತ್ತಿಯು ಮೇ 17 ರಂದು ಪುನರಾರಂಭಗೊಳ್ಳಲಿದೆ. ಪರಿಷ್ಕೃತ ವೇಳಾಪಟ್ಟಿಯಲ್ಲಿ, ಒಟ್ಟು 6 ನಗರಗಳಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. ಅಹಮದಾಬಾದ್, ಬೆಂಗಳೂರು, ದೆಹಲಿ, ಮುಂಬೈ, ಜೈಪುರ ಮತ್ತು ಲಕ್ನೋದಲ್ಲಿ ಉಳಿದ 13 ಲೀಗ್ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮೇ 17 ರ ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 58 ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.