IPL 2025: ಮತ್ತೆ ಸಿಎಸ್​ಕೆ ನಾಯಕನಾಗುತ್ತಿದ್ದಾರೆ ಎಂಎಸ್ ಧೋನಿ! ಐಪಿಎಲ್ ಮಧ್ಯೆಯೇ ನಾಯಕತ್ವ ಬದಲಾವಣೆ ಏಕೆ? | MS Dhoni Set to Captain CSK Against DC as Ruturaj Gaikwad Suffers Injury

IPL 2025: ಮತ್ತೆ ಸಿಎಸ್​ಕೆ ನಾಯಕನಾಗುತ್ತಿದ್ದಾರೆ ಎಂಎಸ್ ಧೋನಿ! ಐಪಿಎಲ್ ಮಧ್ಯೆಯೇ ನಾಯಕತ್ವ ಬದಲಾವಣೆ ಏಕೆ? | MS Dhoni Set to Captain CSK Against DC as Ruturaj Gaikwad Suffers Injury

Last Updated:

ಚೆನ್ನೈ ಸೂಪರ್ ಕಿಂಗ್ಸ್ 2025ರ ಆವೃತ್ತಿಯಲ್ಲಿ ಮಿಶ್ರ ಪ್ರದರ್ಶನ ತೋರಿದೆ. ಮೊದಲ ಪಂದ್ಯ ಗೆದ್ದರೂ, ನಂತರ 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಮಧ್ಯೆ 43 ವರ್ಷದ ಮಹೇಂದ್ರ ಸಿಂಗ್ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಲಿದ್ದಾರೆ.

ಗಾಯಕ್ವಾಡ್ -ಧೋನಿಗಾಯಕ್ವಾಡ್ -ಧೋನಿ
ಗಾಯಕ್ವಾಡ್ -ಧೋನಿ

ಐಪಿಎಲ್ 2025ರ (IPL 2025) ಮಧ್ಯದಲ್ಲಿ ಒಂದು ದೊಡ್ಡ ಸುದ್ದಿ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದೆ. 43 ವರ್ಷದ ಮಹೇಂದ್ರ ಸಿಂಗ್ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಲಿದ್ದಾರೆ ಎನ್ನಲಾಗುತ್ತಿದೆ. ಹಾಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಪ್ರಸ್ತುತ ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad) ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧದ ಪಂದ್ಯವನ್ನು ಆಡುವುದು ಅನುಮಾನವಾಗಿದೆ. ಈ ಸಂದರ್ಭದಲ್ಲಿ ತಂಡದ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡಿದ್ದು, ಎಂಎಸ್ ಧೋನಿ ಮತ್ತೆ ನಾಯಕತ್ವಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ.

ರುತುರಾಜ್ ಗಾಯಕ್ವಾಡ್‌ಗೆ ಗಾಯದ ಆತಂಕ

ಶನಿವಾರದ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಮುಖ್ಯ ಕೋಚ್ ಮೈಕೆಲ್ ಹಸ್ಸಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ತುಷಾರ್ ದೇಶಪಾಂಡೆ ಎಸೆದ ಚೆಂಡಿನಿಂದ ಋತುರಾಜ್ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದರು. “ಋತುರಾಜ್ ಇನ್ನೂ ನೋವಿನಿಂದ ಬಳಲುತ್ತಿದ್ದಾರೆ. ಫಿಟ್‌ನೆಸ್ ಪರೀಕ್ಷೆಯ ನಂತರವೇ ಅವರು ಆಡಬಹುದೇ ಎಂಬುದು ತಿಳಿಯಲಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅವರು ಆಡುವುದು ಕಷ್ಟವೆನಿಸುತ್ತದೆ,” ಎಂದು ಹಸ್ಸಿ ಹೇಳಿದ್ದಾರೆ.

ಇದನ್ನೂ ಓದಿ: ಬಟಾ ಬಯಲಾಯ್ತು ಹರಾಜು ವೇಳೆ SRH ಮಾಡಿದ ಮಹಾ ಪ್ರಮಾದ! ಆ ದೇವರೇ ಬಂದ್ರು ಆ ಸಮಸ್ಯೆ ಸರಿಪಡಿಸಲು ಅಸಾಧ್ಯ

ಧೋನಿ ಅಥವಾ ಜಡೇಜಾ ಇಬ್ಬರಲ್ಲಿ ಒಬ್ಬರು

ಋತುರಾಜ್ ಗೈರಾಗಿದ್ದರೆ ನಾಯಕತ್ವದ ಜವಾಬ್ದಾರಿ ಯಾರಿಗೆ ಎಂಬ ಪ್ರಶ್ನೆಗೆ ಹಸ್ಸಿ ಸ್ಪಷ್ಟ ಉತ್ತರ ನೀಡಲಿಲ್ಲ. ಆದರೆ, ” ತಂಡದಲ್ಲಿ ಧೋನಿ ಇದ್ದಾರೆ. ಅನ್​ಕ್ಯಾಪ್ಡ್ ವಿಕೆಟ್‌ಕೀಪರ್ ಒಬ್ಬರು ಜವಾಬ್ದಾರಿ ತೆಗೆದುಕೊಳ್ಳಬಹುದು,” ಎಂದು ಸುಳಿವು ನೀಡಿದರು. ಇದು ಧೋನಿಯತ್ತ ಬೊಟ್ಟು ಮಾಡುವಂತಿದೆ. ರವೀಂದ್ರ ಜಡೇಜಾ ಕೂಡ ಆಯ್ಕೆಯಾಗಬಹುದಾದರೂ, ಅವರು 2022ರಲ್ಲಿ ನಾಯಕತ್ವ ವಹಿಸಿ ಕಳಪೆ ಪ್ರದರ್ಶನದ ನಂತರ ಧೋನಿಗೆ ಹಸ್ತಾಂತರಿಸಿದ್ದರು. ಹೀಗಾಗಿ, ಜಡೇಜಾ ಮತ್ತೆ ನಾಯಕರಾಗುವ ಸಾಧ್ಯತೆ ಕಡಿಮೆ ಎನಿಸುತ್ತದೆ.

ಧೋನಿಯ ಯಶಸ್ವೀ ಇತಿಹಾಸ

ಎಂಎಸ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಕೊನೆಯದಾಗಿ 2023ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಜಯ ಗಳಿಸಿದಾಗ ಧೋನಿಯೇ ನಾಯಕರಾಗಿದ್ದರು. 2024ರಲ್ಲಿ ಋತುರಾಜ್‌ಗೆ ನಾಯಕತ್ವ ವಹಿಸಲಾಯಿತಾದರೂ, ತಂಡ ಕೊನೆಯ ನಾಲ್ಕರಲ್ಲಿ ಸ್ಥಾನ ಪಡೆಯಲು ವಿಫಲವಾಯಿತು. ಈಗ 2025ರಲ್ಲಿ ಮೂರು ಪಂದ್ಯಗಳಲ್ಲಿ ಒಂದು ಗೆಲುವು, ಎರಡು ಸೋಲು ದಾಖಲಿಸಿ ತಂಡ ಎಂಟನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಜೈಸ್ವಾಲ್​ ಬೆನ್ನಲ್ಲೇ ಮತ್ತಿಬ್ಬರು ಆಟಗಾರರಿಂದ ಡೊಮೆಸ್ಟಿಕ್ ತಂಡ ಬದಲಾವಣೆ ವದಂತಿ! ಸತ್ಯಾಸತ್ಯತೆ ಇಲ್ಲಿದೆ

ತಂಡದ ಮೇಲೆ ಒತ್ತಡ

ಋತುರಾಜ್ ಗೈರಾಗಿದ್ದರೆ ಧೋನಿ ನಾಯಕತ್ವ ವಹಿಸುವುದು ಆಶ್ಚರ್ಯವಲ್ಲ. ಅವರ ಅನುಭವ ಮತ್ತು ತಂತ್ರಗಾರಿಕೆ ತಂಡಕ್ಕೆ ಶಕ್ತಿ ತುಂಬಬಹುದು. ಆದರೆ, 43 ವರ್ಷದ ಧೋನಿ ಪೂರ್ಣ ಋತುವಿಗೆ ನಾಯಕತ್ವ ವಹಿಸುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ. ಶನಿವಾರದ ಪಂದ್ಯ ತಂಡದ ಭವಿಷ್ಯವನ್ನು ನಿರ್ಧರಿಸಲಿದೆ.