Last Updated:
ಲಖನೌ ನೀಡಿದ್ದ 236 ರನ್ಗಳ ಗುರಿಯನ್ನ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಗೆಲುವಿಗಾಗಿ ಪ್ರತಿ ಹೋರಾಟ ನಡೆಸಿತಾದರೂ ಬೃಹತ್ ಮೊತ್ತವನ್ನ ಚೇಸ್ ಮಾಡುವಲ್ಲಿ ವಿಫಲವಾಯಿತು. 20 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 202 ರನ್ಗಳಿಸಿ 33 ರನ್ಗಳ ಸೋಲೊಪ್ಪಿಕೊಂಡಿತು. ಶಾರುಣ್ ಖಾನ್ 29 ಎಸೆತಗಳಲ್ಲಿ 57 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಮಿಚೆಲ್ ಮಾರ್ಷ್ ಹಾಗೂ ನಿಕೋಲಸ್ ಪೂರನ್ ಅಬ್ಬರದ ಬ್ಯಾಟಿಂಗ್, ವಿಲಿಯಂ ಒ ರೂರ್ಕ್ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ವಿರುದ್ಧ ರನ್ಗಳ ಭರ್ಜರಿ ಜಯ ಸಾಧಿಸಿತು. ಲಖನೌ ನೀಡಿದ್ದ 236 ರನ್ಗಳ ಗುರಿಯನ್ನ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಗೆಲುವಿಗಾಗಿ ಪ್ರತಿ ಹೋರಾಟ ನಡೆಸಿತಾದರೂ ಬೃಹತ್ ಮೊತ್ತವನ್ನ ಚೇಸ್ ಮಾಡುವಲ್ಲಿ ವಿಫಲವಾಯಿತು. 20 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 202 ರನ್ಗಳಿಸಿ 33 ರನ್ಗಳ ಸೋಲೊಪ್ಪಿಕೊಂಡಿತು. ಶಾರುಣ್ ಖಾನ್ 29 ಎಸೆತಗಳಲ್ಲಿ 57 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದ ಯಾವ ಬ್ಯಾಟರ್ಗಳು 40ರ ಗಡಿ ದಾಟಲಿಲ್ಲ.
ಲಖನೌ ನೀಡಿದ 236 ರನ್ಗಳ ಬೃಹತ್ ಗುರಿಯನ್ನ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಮೊದಲ ವಿಕೆಟ್ಗೆ 46 ರನ್ಗಳ ಜೊತೆಯಾಟ ನಡೆಸಿತು. ಗೋಲ್ಡನ್ ಫಾರ್ಮ್ನಲ್ಲಿದ್ದ ಸಾಯಿ ಸುದರ್ಶನ್ ಇಂದು ದೊಡ್ಡ ಮೊತ್ತಗಳಿಸುವಲ್ಲಿ ವಿಪಲರಾದರು. ಓ ರೂರ್ಕ್ ಬೌಲಿಂಗ್ನಲ್ಲಿ ಐಡೆನ್ ಮಾರ್ಕ್ರಮ್ಗೆ ಕ್ಯಾಚ್ ನೀಡಿ ಔಟ್ ಆದರು. 2ನೇ ವಿಕೆಟ್ಗೆ ಒಂದಾದ ಶುಭ್ಮನ್ ಗಿಲ್- ಬಟ್ಲರ್ 39 ರನ್ಗಳ ಜೊತೆಯಾಟ ನೀಡಿದರು. ಆದರೆ ಇಬ್ಬರು ಕೇವಲ 11 ರನ್ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು. ಗಿಲ್ 20 ಎಸೆತಗಳಲ್ಲಿ 7 ಬೌಂಡರಿಗಲ ಸಹಿತ 35 ರನ್ಗಳಿಸಿದರೆ, ಬಟ್ಲರ್ 18 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 33 ರನ್ಗಳಿಸಿದರು.
96 ರನ್ಗಳಿಗೆ ತನ್ನ ಇನ್ಫಾರ್ಮ್ ಬ್ಯಾಟರ್ಗಳ ವಿಕೆಟ್ ಕಳೆದುಕೊಂಡ ಗುಜರಾತ್ ಟೈಟನ್ಸ್ ಸೋಲಿನತ್ತ ಮುಖ ಮಾಡಿತ್ತು. ಆದರೆ 4ನೇ ವಿಕೆಟ್ಗೆ ಒಂದಾದ ಶಾರುಖ್ ಖಾನ್ ಹಾಗೂ ಶೆರ್ಫೇನ್ ರುದರ್ಫೋರ್ಡ್ 40 ಎಸೆತಗಳಲ್ಲಿ 86 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ 17 ನೇ ಓವರ್ನಲ್ಲಿ ಓ ರೂರ್ಕ್ ಗುಜರಾತ್ಗೆ ಡಬಲ್ ಶಾಕ್ ನೀಡಿದರು. 22 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ಗಳ ಸಹಿತ 33 ರನ್ಗಳಿಸಿದ್ದ ಶೆಫರ್ಡ್ರನ್ನ ಪೆವಿಲಿಯನ್ಗಟ್ಟಿದರೆ, ಕೊನೆಯ ಎಸೆತದಲ್ಲಿ ರಾಹುಲ್ ತೆವಾಟಿಯಾ ವಿಕೆಟ್ ಪಡೆದರು. ತೆವಾಟಿಯಾ 3 ಎಸೆತಗಳಲ್ಲಿ 2 ರನ್ಗಳಿದರು.
7ನೇ ಕ್ರಮಾಂಕದಲ್ಲಿ ಬಂದ ಅರ್ಷದ್ ಖಾನ್ 3 ಎಸೆತಗಳಲ್ಲಿ 1 ರನ್ಗಳಿಸಿ ಶೆಹಬಾಜ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದರೆ, 29 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 57 ರನ್ಗಳಿಸಿದ್ದ ಶಾರುಖ್ ಖಾನ್ ಆವೇಶ್ ಖಾನ್ ಬೌಲಿಂಗ್ನಲ್ಲಿ ರವಿ ಬಿಷ್ಣೋಯ್ಗೆ ಕ್ಯಾಚ್ ನೀಡಿ ಔಟ್ ಆದರು. ಇವರ ವಿಕೆಟ್ನೊಂದಿಗೆ ಗುಜರಾತ್ಗೆ ಸೋಲು ಖಚಿತವಾಯಿತು. ನಂತರ ಬಂದ ರಬಾಡ 2, ಸಾಯಿ ಕಿಶೋರ್ 1 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ 20 ಓವರ್ಗಳಲ್ಲಿ 202ಕ್ಕೆ ಗುಜರಾತ್ ಆಲೌಟ್ ಆಗಿ 33 ರನ್ಗಳ ಸೋಲು ಕಂಡಿತು. ಈ ಸೋಲಿನೊಂದಿಗೆ ತಂಡ ಅಗ್ರಸ್ಥಾನ ಪಡೆಯುವ ಅವಕಾಶಕ್ಕೆ ಹಿನ್ನಡೆಯಾಗಿದೆ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಲಖನೌ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾದ ಮಿಚೆಲ್ ಮಾರ್ಷ್ ಹಾಗೂ ಐಡೆನ್ ಮಾರ್ಕ್ರಮ್ ಪವರ್ ಪ್ಲೇ ನಲ್ಲಿ 53 ರನ್ ಕಲೆಯಾಕಿದ ಮೊದಲ ವಿಕೆಟ್ಗೆ 91 ರನ್ ಸೇರಿಸಿದರು. ಮಾರ್ಕ್ರಮ್ 24 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 36 ರನ್ಗಳಿಸಿ ಸಾಯಿ ಕಿಶೋರ್ಗೆ ವಿಕೆಟ್ ನೀಡಿದರು.
ಆದರೆ 2ನೇ ವಿಕೆಟ್ಗೆ ಒಂದಾದ ಮಿಚೆಲ್ ಮಾರ್ಷ್ ಹಾಗೂ ನಿಕೋಲಸ್ ಪೂರನ್ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಇಬ್ಬರು 2ನೇ ವಿಕೆಟ್ 52 ಎಸೆತಗಳಲ್ಲಿ 121 ರನ್ಗಳಿಸಿದರು. ಮಾರ್ಷ್ 64 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್ಗಳ ಸಹಿತ 117 ರನ್ಗಳಿಸಿದರು. ನಿಕೋಲಸ್ ಪೂರನ್ 27 ಎಸೆತಗಳಲ್ಲಿ 4 ಬೌಂಡರಿ 5 ಸಿಕ್ಸರ್ಗಳ ಸಹಿತ ಅಜೇಯ 56 ರನ್ಗಳಿಸಿದರು. ಪಂತ್ 6 ಎಸೆತಗಳಲ್ಲಿ ಅಜೇಯ 16 ರನ್ಗಳಿಸಿದರು.
ಗುಜರಾತ್ ಟೈಟನ್ಸ್ ಪರ ಅರ್ಷದ್ ಖಾನ್ 36ಕ್ಕೆ1, ಸಾಯಿ ಕಿಶೋರ್ 34ಕ್ಕೆ1 ವಿಕೆಟ್ ಪಡೆದರು. ಟೂರ್ನಿಯುದ್ದಕ್ಕೂ ಮಿಂಚಿದ್ದ ಪ್ರಸಿಧ್ ಕೃಷ್ಣ 44 ರನ್ ನೀಡಿದ ಈ ಪಂದ್ಯದಲ್ಲಿ ಮೊದಲ ಬಾರಿಗೆ ವಿಕೆಟ್ ಪಡೆಯುವಲ್ಲಿ ವಿಫಲರಾದರು. ರಶೀದ್ ಖಾನ್ ಕೂಡ 2 ಓವರ್ಗಳಲ್ಲಿ 36 ರನ್ ಹಾಗೂ ರಬಾಡ 4 ಓವರ್ಗಳಲ್ಲಿ 45 ನೀಡಿ ವಿಕೆಟ್ ಪಡೆಯದೇ ದುಬಾರಿಯಾದರು.
May 22, 2025 11:47 PM IST