IPL 2025: ಮುಂಬೈ ಬಗ್ಗುಬಡಿದ ಪಂಜಾಬ್ ಕಿಂಗ್ಸ್​! 11 ವರ್ಷಗಳ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಶ್ರೇಯಸ್ ಪಡೆ | PBKS vs MI Josh Inglis and Priyansh Arya s Fifties Power Punjab to Victory

IPL 2025: ಮುಂಬೈ ಬಗ್ಗುಬಡಿದ ಪಂಜಾಬ್ ಕಿಂಗ್ಸ್​! 11 ವರ್ಷಗಳ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಶ್ರೇಯಸ್ ಪಡೆ | PBKS vs MI Josh Inglis and Priyansh Arya s Fifties Power Punjab to Victory

Last Updated:

ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್​ಗಳಿಸಿತ್ತು. 185 ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡ 18.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಮುಂಬೈ ಮಣಿಸಿದ ಪಂಜಾಬ್ ಕಿಂಗ್ಸ್ಮುಂಬೈ ಮಣಿಸಿದ ಪಂಜಾಬ್ ಕಿಂಗ್ಸ್
ಮುಂಬೈ ಮಣಿಸಿದ ಪಂಜಾಬ್ ಕಿಂಗ್ಸ್

2025ರ ಐಪಿಎಲ್​​ನಲ್ಲಿ ಮೊದಲ 2 ಸ್ಥಾನವನ್ನು ನಿರ್ಧರಿಸುವ ಪ್ರಮುಖ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಸುಲಭ ಜಯ ಸಾಧಿಸಿದ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ. ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್​ಗಳಿಸಿತ್ತು. 185 ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡ 18.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಜೋಶ್ ಇಂಗ್ಲಿಸ್ (73) ಹಾಗೂ ಪ್ರಿಯಾಂಶ್ ಆರ್ಯ (62) ಅರ್ಧಶತಕ ಸಿಡಿಸಿ ತಂಡ ಗೆಲುವು ತಂದುಕೊಟ್ಟರು.

185ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಕೇವಲ 34 ರನ್​ಗಳಾಗುಷ್ಟರಲ್ಲಿ ಇನ್​ಫಾರ್ಮ್​ ಬ್ಯಾಟರ್ ಪ್ರಭಸಿಮ್ರನ್ ಸಿಂಗ್ ವಿಕೆಟ್ ಕಳೆದುಕೊಂಡಿತು. ಸಿಂಗ್ 16 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 13 ರನ್​ಗಳಿಸಿ ಔಟ್ ಆದರು. ಆದರೆ 2ನೇ ವಿಕೆಟ್​ಗೆ ಒಂದಾದ ಪ್ರಿಯಾಂಶ್ ಆರ್ಯ ಹಾಗೂ ಜೋಶ್ ಇಂಗ್ಲಿಸ್ 59 ಎಸೆತಗಳಲ್ಲಿ 109 ರನ್​ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ನಡೆಸಿದರು. ಪ್ರಿಯಾಂಶ್​ ಆರ್ಯ 35 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ ಸಹಿತ 62 ರನ್​ಗಳಿಸಿ ಔಟ್ ಆದರು.

ಸ್ಫೋಟಕ ಬ್ಯಾಟಿಂಗ್ ಮಾಡಿದ ಜೋಸ್ ಇಂಗ್ಲಿಸ್ 42 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್​ಗಳ ಸಹಿತ 73 ರನ್​ಗಳಿಸಿ ಗೆಲುವಿಗೆ 14 ರನ್​ಗಳ ಅಗತ್ಯವಿದ್ದಾಗ ವಿಕೆಟ್ ಒಪ್ಪಿಸಿದರು. ನಾಯಕ ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್​ಗಳ ಸಹಿತ 26 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.

ಮುಂಬೈ ಪರ ಮಿಚೆಲ್ ಸ್ಯಾಂಟ್ನರ್ 41ಕ್ಕೆ2 ವಿಕೆಟ್ ಪಡೆದರೆ, ಬುಮ್ರಾ 23ಕ್ಕೆ1 ವಿಕೆಟ್ ಪಡೆದರು. ಪಂಜಾಬ್ ಕಿಂಗ್ಸ್ ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ 9 ಗೆಲುವುಗಳ ಸಹಿತ 19 ಅಂಕ ಪಡೆದು ಅಗ್ರಸ್ಥಾನಕ್ಕೇರಿತು. 2014ರ ಬಳಿಕ ತಂಡ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದಂತಾಗಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭ ಪಡೆಯಲು ವಿಫಲವಾಯಿತು. ಮೊದಲ ವಿಕೆಟ್​ಗೆ ರೋಹಿತ್​-ರಯಾನ್ ರಿಕಲ್ಟನ್ ಜೋಡಿ 45 ರನ್​ಗಳ ಜೊತೆಯಾಟ ನಡೆಸಿತು. ರಿಕಲ್ಟನ್ 20 ಎಸೆತಗಳಲ್ಲಿ​ 5 ಬೌಂಡರಿಗಳ ಸಹಿತ 27 ರನ್​ಗಳಿಸಿ ಔಟ್ ಆದರು. ರೋಹಿತ್ ಶರ್ಮಾ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಮತ್ತೊಮ್ಮೆ ವಿಫಲರಾದರು. ಶರ್ಮಾ 22 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 24 ರನ್​ಗಳಿಸಿ ಔಟ್ ಆದರು. ನಂತರ ಬಂದ ತಿಲಕ್ ವರ್ಮಾ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ವಿಲ್ ಜಾಕ್ಸ್ ಕೂಡ 8 ಎಸೆತಗಳಲ್ಲಿ 17 ರನ್​ಗಳಿಸಿ ಔಟ್ ಆದರು.

ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ್ದ ಮುಂಬೈಗೆ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಚೇತರಿಕೆ ನೀಡಿದರು. ಇವರಿಬ್ಬರು 5ನೇ ವಿಕೆಟ್ ಜೊತೆಯಾಟದಲ್ಲಿ 23 ಎಸೆತಗಳಲ್ಲಿ 44 ರನ್​ಗಳಿಸಿದರು. ಪಾಂಡ್ಯ 15 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸೇರಿ 26 ರನ್​ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಹಾಗೂ ನಮನ್ ಧೀರ್ ಜೋಡಿ 6ನೇ ವಿಕೆಟ್ ಜೊತೆಯಾಟದಲ್ಲಿ 17 ಎಸೆತಗಳಲ್ಲಿ 31 ರನ್​ ಸೇರಿಸಿದರು. ನಮನ್ 12 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 20 ರನ್​ಗಳಿಸಿದರು. ಸೂರ್ಯಕುಮಾರ್ ಯಾದವ್ 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ಗಳ ಸಹಿತ 57 ರನ್​ಗಳಿಸಿ ಕೊನೆಯ ಎಸೆತದಲ್ಲಿ ಅರ್ಶದೀಪ್​ ಸಿಂಗ್​ಗೆ ವಿಕೆಟ್ ಒಪ್ಪಿಸಿದರು.