IPL 2025: ರಾಜಸ್ಥಾನ್ ರಾಯಲ್ಸ್​​​ ವಿರುದ್ಧ ಡೆಲ್ಲಿ ತಂಡಕ್ಕೆ ರೋಚಕ ಸೂಪರ್ ಓವರ್​ ಜಯ! ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟ ಕ್ಯಾಪಿಟಲ್ಸ್​ | ipl 2025 Capitals Crowned in Thriller Delhi Edges Rajasthan in Super Over

IPL 2025: ರಾಜಸ್ಥಾನ್ ರಾಯಲ್ಸ್​​​ ವಿರುದ್ಧ ಡೆಲ್ಲಿ ತಂಡಕ್ಕೆ ರೋಚಕ ಸೂಪರ್ ಓವರ್​ ಜಯ! ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟ ಕ್ಯಾಪಿಟಲ್ಸ್​ | ipl 2025 Capitals Crowned in Thriller Delhi Edges Rajasthan in Super Over

189ರನ್​ಗಳ ಗುರಿಯನ್ನ ಬೆನ್ನಟ್ಟಿದ ಡೆಲ್ಲಿ ರಾಜಸ್ಥಾನ್ ರಾಯಲ್ಸ್ ಭರ್ಜರಿ ಆರಂಭ ಪಡೆದುಕೊಂಡಿತು. ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಮೊದಲ ವಿಕೆಟ್​ಗೆ 63 ರನ್​ಗಳ ಜೊತೆಯಾಟ ನೀಡಿದರು. 19 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ ಸಹಿತ 31 ರನ್​ಗಳಿಸಿದ್ದ ಸಂಜು ಸ್ಯಾಮ್ಸನ್ ರಿಟೈರ್ಟ್ ಹರ್ಟ್ ತೆಗೆದುಕೊಂಡರು. ನಂತರ ಬಂದ ರಿಯಾನ್ ಪರಾಗ್ 11 ಎಸೆತಗಳಲ್ಲಿ ಕೇವಲ 8 ರನ್​ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.

3ನೇ ವಿಕೆಟ್​ಗೆ ನಿತೀಶ್ ರಾಣಾ ಮತ್ತು ಜೈಸ್ವಾಲ್ 36 ರನ್​ಗಳಿಸಿದರು. ಜೈಸ್ವಾಲ್ 37 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್​ಗಳ ಸಹಿತ 51 ರನ್​ಗಳಿಸಿ ಔಟ್ ಆದರು. ನಿತೀಶ್ ರಾಣಾ 28 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ಗಳ ಸಹಿತ 51 ರನ್​ಗಳಿಸಿದರು. ಅವರು ಔಟ್ ಆಗುವ ಮುನ್ನ ಧ್ರುವ್ ಜುರೆಲ್ ಜೊತೆ 26 ಎಸೆತಗಳಲ್ಲಿ 49 ರನ್​ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ನಡೆಸಿದ್ದರು.

ನಂತರ ಧ್ರುವ್​ ಜುರೆಲ್ ಹಾಗೂ ಹೆಟ್ಮೆಯರ್ 14 ಎಸೆತಗಳಲ್ಲಿ 27 ರನ್​ ಜೊತೆಯಾಟ ನಡೆಸಿ ಪಂದ್ಯವನ್ನ ಟೈ ಮಾಡಿದರು. ಕೊನೆಯ ಓವರ್​ನಲ್ಲಿ ರಾಜಸ್ಥಾನ್ ಗೆಲುವಿಗೆ 9 ರನ್​ಗಳ ಅಗತ್ಯವಿತ್ತು. ಆದರೆ ಸ್ಟಾರ್ಕ್​ ಒಂದೂ ಬೌಂಡರಿ ಕೊಡದೆ ಕೇವಲ 8 ರನ್​ ಮಾತ್ರ ಬಿಟ್ಟುಕೊಟ್ಟು ಪಂದ್ಯ ಟೈ ಆಗಲು ನೆರವಾದರು. ಜುರೆಲ್ 17 ಎಸೆತಗಳಲ್ಲಿ 26, ಶಿಮ್ರಾನ್ ಹೆಟ್ಮೆಯರ್ 9 ಎಸೆತಗಳಲ್ಲಿ 15 ರನ್​ಗಳಿಸಿ ಅಜೇಯರಾಗಿ ಉಳಿದರು. ಕೊನೆಯ ಎಸೆತದಲ್ಲಿ 2 ರನ್​ಗಳ ಅಗತ್ಯವಿತ್ತು. ಜುರೆಲ್ ಕೇವಲ 1 ರನ್​ಗಳಿಸಿ ರನ್​ಔಟ್ ಆದರು.

 ಮುಂದುವರಿದ ಡೆಲ್ಲಿ ತಂಡದ ಆರಂಭಿಕ ವೈಫಲ್ಯ

ಟಾಸ್​ ಗೆದ್ದ ರಾಜಸ್ಥಾನ್ ರಾಯಲ್ಸ್ ಅತಿಥೇಯ ತಂಡಕ್ಕೆ ಬ್ಯಾಟಿಂಗ್ ನೀಡಿತು. ಬ್ಯಾಟಿಂಗ್​​ಗೆ ಇಳಿದ ಡೆಲ್ಲಿಗೆ ಇಂದೂ ಕೂಡ ಉತ್ತಮ ಆರಂಭ ಸಿಗಲಿಲ್ಲ. ಆಸೀಸ್ ಯುವ ಬ್ಯಾಟರ್ ಜೇಕ್ ಪ್ರೇಸರ್ ಮೆಕ್​ಗರ್ಕ್ ಕೇವಲ 9 ರನ್​ಗಳಿಸಿ ಜೋಫ್ರಾ ಆರ್ಚರ್​ ಬೌಲಿಂಗ್​​ನಲ್ಲಿ ಜೈಸ್ವಾಲ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕಳೆದ ಪಂದ್ಯದಲ್ಲಿ 89 ರನ್​ಗಳಿಸಿದ್ದ ಕನ್ನಡಿಗ ಕರುಣ್ ನಾಯರ್ ರನ್​ ಕದಿಯುವ ಆತುರದಲ್ಲಿ ಒಂದೂ ರನ್​ಗಳಿಸದೇ ರನ್​ಔಟ್ ಆಗಿ ಪೆವಿಲಿಯನ್​​ ಸೇರಿಕೊಂಡರು.

ಅಭಿಷೇಕ್-ರಾಹುಲ್​ರಿಂದ ಚೇತರಿಕೆಯ ಆಟ

3ನೇ ವಿಕೆಟ್​ಗೆ ಅಭಿಷೇಕ್ ಪೊರೆಲ್ ಹಾಗೂ ಕೆಎಲ್ ರಾಹುಲ್ 63 ರನ್​ಗಳಿಸಿದರು. ಆದರೆ ಇವರಿಬ್ಬರು ವೇಗವಾಗಿ ರನ್​ಗಳಿಸುವಲ್ಲಿ ವಿಫಲರಾದರು. 63 ರನ್​ಗಳಿಗಾಗಿ 57 ಎಸೆತಗಳನ್ನೆದುರಿಸಿದರು. 7 ಎಸೆತಗಳಲ್ಲಿ 24 ರನ್​ಗಳಿಸಿದ್ದ ಪೊರೆಲ್ ಒಟ್ಟಾರೆ 37 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 49 ರನ್​ಗಳಿಸಿ ಔಟ್ ಆದರು. ಪವರ್​ ಪ್ಲೇನ 2ನೇ ಓವರ್​ನಲ್ಲೆ 4 ಬೌಂಡರಿ, 1 ಸಿಕ್ಸರ್ ಸಿಡಿಸಿದ್ದ ಪೊರೆಲ್ ನಂತರ 30 ಎಸೆತಗಳಲ್ಲಿ ಕೇವಲ 1 ಬೌಂಡರಿ ಮಾತ್ರ ಸಿಡಿಸಿದರು. ಇನ್ನೂ ರಾಹುಲ್ ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಅವರು 32 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ 38 ರನ್​ಗಳಿಸಿ ಆರ್ಚರ್​ಗೆ ವಿಕೆಟ್ ನೀಡಿದರು.

ಪಟೇಲ್​-ಸ್ಟಬ್ಸ್​ ಅಬ್ಬರ

ನಾಯಕ ಅಕ್ಷರ್ ಪಟೇಲ್ 14 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 32, ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಹಿತ ಅಜೇಯ 32, ಅಶುತೋಷ್ ಶರ್ಮಾ 11 ಎಸೆತಗಳಲ್ಲಿ ಅಜೇಯ 15 ರನ್​ಗಳಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು.

ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್​ 32ಕ್ಕೆ2, ವನಿಂದು ಹಸರಂಗ 38ಕ್ಕೆ1, ಮಹೀಶ್ ತೀಕ್ಷಣ 40ಕ್ಕೆ1 ವಿಕೆಟ್ ಪಡೆದು ಮಿಂಚಿದರು.

ಹೆಡ್​ ಟು ಹೆಡ್ ದಾಖಲೆ

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಇಲ್ಲಿಯವರೆಗೆ 29 ಬಾರಿ ಮುಖಾಮುಖಿಯಾಗಿದ್ದು, ಡೆಲ್ಲಿ 14 ಹಾಗೂ ರಾಜಸ್ಥಾನ್ 15ರಲ್ಲಿ ಗೆಲುವು ಸಾಧಿಸಿವೆ. ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದಿರುವ 9 ಪಂದ್ಯಗಳಲ್ಲಿ ಡೆಲ್ಲಿ 6ರಲ್ಲಿ ಗೆದ್ದಿದ್ದರೆ, ರಾಯಲ್ಸ್ 3ರಲ್ಲಿ ಮಾತ್ರ ಗೆಲುವು ಸಾಧಿಸಿದೆ.

ರಾಜಸ್ಥಾನ್ ವಿರುದ್ಧ ಡೆಲ್ಲಿ ತಂಡ ಈ ಮೈದಾನದಲ್ಲಿ ಪ್ರಾಬಲ್ಯ ಸಾಧಿಸಿದರೂ ಒಟ್ಟಾರೆ ಇಲ್ಲಿ ನಡೆದಿರುವ 86 ಪಂದ್ಯಗಳಲ್ಲಿ 38ರಲ್ಲಿ ಗೆಲುವು ಸಾಧಿಸಿದ್ದರೆ, 46 ಸೋಲು ಕಂಡಿದೆ. ಒಂದು ಪಂದ್ಯ ರದ್ದು, ಒಂದು ಟೈ ಆಗಿದೆ.

ಪ್ಲೇಯಿಂಗ್ ಇಲೆವೆನ್

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಜೇಕ್ ಫ್ರೇಸರ್-ಮೆಕ್‌ಗರ್ಕ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ಮೋಹಿತ್ ಶರ್ಮಾ

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೀ), ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IPL 2025: ರಾಜಸ್ಥಾನ್ ರಾಯಲ್ಸ್​​​ ವಿರುದ್ಧ ಡೆಲ್ಲಿ ತಂಡಕ್ಕೆ ರೋಚಕ ‘ಸೂಪರ್ ಓವರ್’​ ಜಯ! ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟ ಕ್ಯಾಪಿಟಲ್ಸ್​