ಟಾಸ್ ಗೆದ್ದು ಬ್ಯಾಟಿಂಗ್ ಇಳಿದಿ ಡೆಲ್ಲಿ ಖಾತೆ ತೆರಯುವ ಮುನ್ನವೇ ಜೇಕ್ ಪ್ರೇಸರ್ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಕೆಎಲ್ ರಾಹುಲ್ ಮತ್ತು ಅಭಿಷೇಕ್ ಪೊರೆಲ್ 2ನೇ ವಿಕೆಟ್ಗೆ ಜೊತೆಗೂಡಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಇಬ್ಬರು 35 ಎಸೆತಗಳಲ್ಲಿ 54 ರನ್ ಸೇರಿಸಿದರು. ಪೊರೆಲ್ 20 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 33 ರನ್ ಸಿಡಿಸಿ ಔಟ್ ಆದರು. ನಂತರ ಬಂದ ನಾಯಕ ಅಕ್ಷರ್ ಪಟೇಲ್(21) 3ನೇ ವಿಕೆಟ್ಗೆ 36 ರನ್ ಸೇರಿಸಿ ಔಟ್ ಆದರು.
ಇದನ್ನೂ ಓದಿ: ಅಂತೂ ಇಂತೂ ಆ ಫ್ಲಾಫ್ ಆಟಗಾರನನ್ನ ತಂಡದಿಂದ ಹೊರಗಿಟ್ಟ ಸಿಎಸ್ಕೆ! ಈ ಪಂದ್ಯದಿಂದಾದರೂ ಬದಲಾಗುತ್ತಾ ಅದೃಷ್ಟ
ಅಕ್ಚರ್ ಔಟಾದ ನಂತರ ಬಂದ ರಿಜ್ವಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಅದರೂ ರಾಹುಲ್ಗೆ ಸ್ಟ್ಯಾಂಡಿಂಗ್ ನೀಡಿ ಅರ್ಧಶತಕ ಜೊತೆಯಾಟ ನೀಡಿದರು.ಅವರು 15 ಎಸೆತಗಳಲ್ಲಿ 20 ರನ್ಗಳಿಸಿದರು. ಆರಂಭಿಕನಾಗಿ ಬಂದು ಕೊನೆಯ ಓವರ್ನಲ್ಲಿ ಔಟ್ ಆದ ರಾಹುಲ್ 51 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸೇರಿ 77 ರನ್ ಗಳಿಸಿದರು. ಸ್ಟಬ್ಸ್ 12 ಎಸೆತಗಳಲ್ಲಿ 24 ರನ್ ಗಳಿಸಿ ಅಜೇಯರಾಗಿ ಉಳಿದಿಕೊಂಡರು. ಅಶುತೋಷ್ ಶರ್ಮಾ 1, ವಿಪ್ರಜ್ ನಿಗಮ್ ಅಜೇಯ 1 ರನ್ಗಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ ಪರ ಖಲೀಲ್ ಅಹ್ಮದ್ 25ಕ್ಕೆ2, ರವೀಂದ್ರ ಜಡೇಜಾ 19ಕ್ಕೆ1, ನೂರ್ ಅಹ್ಮದ್ 36ಕ್ಕೆ1 ಹಾಗೂ ಮತೀಶ್ ಪತೀರಣ 31ಕ್ಕೆ1 ವಿಕೆಟ್ ಪಡೆದರು.
ಸಿಎಸ್ಕೆ ತಂಡದಲ್ಲಿ 2 ಬದಲಾವಣೆ
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಜೇಮೀ ಓವರ್ಟನ್ ಬದಲಿಗೆ ಡೆವೋನ್ ಕಾನ್ವೇ ರಾಹುಲ್ ತ್ರಿಪಾಠಿ ಬದಲಿಗೆ ಮುಖೇಶ್ ಕುಮಾರ್ ಚೌದರಿ ಕಣಕ್ಕಿಳಿದಿದ್ದಾರೆ. ಅದೇ ಸಮಯದಲ್ಲಿ, ಫಾಫ್ ಡು ಪ್ಲೆಸಿಸ್ ಗಾಯದ ಇಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಅಲ್ಲ, ತಿಲಕ್ ವರ್ಮಾರನ್ನ ರಿಟೈರ್ಡ್ ಔಟ್ ಮಾಡಿಸಿದ್ದು ಈತನಂತೆ!
ಪ್ಲೇಯಿಂಗ್ ಇಲೆವೆನ್
ಡೆಲ್ಲಿ ಕ್ಯಾಪಿಟಲ್ಸ್: ಜೇಕ್ ಫ್ರೇಸರ್-ಮೆಕ್‌ಗರ್ಕ್, ಕೆಎಲ್ ರಾಹುಲ್ (ವಿಕೆಟ್‌ಕೀಪರ್), ಅಭಿಷೇಕ್ ಪೊರೆಲ್, ಟ್ರಿಸ್ಟಾನ್ ಸ್ಟಬ್ಸ್, ಸಮೀರ್ ರಿಜ್ವಿ, ಅಕ್ಷರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ.
ಚೆನ್ನೈ ಸೂಪರ್ ಕಿಂಗ್ಸ್: ರಚಿನ್ ರವೀಂದ್ರ, ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್ (ನಾಯಕ), ವಿಜಯ್ ಶಂಕರ್, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್‌ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಮುಖೇಶ್ ಚೌಧರಿ, ಖಲೀಲ್ ಅಹ್ಮದ್, ಮತಿಶಾ ಪತೀರಣ.
April 05, 2025 5:18 PM IST