IPL 2025 ರಿಂದ ಇಂಗ್ಲೆಂಡ್‌ನ ಈ ಮೂವರು ಸ್ಟಾರ್ ಪ್ಲೇಯರ್ಸ್ ಔಟ್! ಈ ಲಿಸ್ಟ್‌ನಲ್ಲಿದ್ದಾರಾ RCB ಆಟಗಾರರು? | IPL 2025 England 3 Players Not Returning Only Buttler salt and bethel Available

IPL 2025 ರಿಂದ ಇಂಗ್ಲೆಂಡ್‌ನ ಈ ಮೂವರು ಸ್ಟಾರ್ ಪ್ಲೇಯರ್ಸ್ ಔಟ್! ಈ ಲಿಸ್ಟ್‌ನಲ್ಲಿದ್ದಾರಾ RCB ಆಟಗಾರರು? | IPL 2025 England 3 Players Not Returning Only Buttler salt and bethel Available

Last Updated:

ಐಪಿಎಲ್ ಮೇ 17 ರಿಂದ ಪುನರ್ ಆರಂಭವಾಗಲಿದ್ದು, ಈ ನಡುವೆ ತವರಿಗೆ ತೆರಳಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರರು ಮತ್ತೆ ಭಾರತಕ್ಕೆ ವಾಪಸ್ ಬರ್ತಾ ಇಲ್ಲ ಎಂದು ವರದಿಯಾಗಿದೆ.

ಐಪಿಎಲ್ ಟ್ರೋಫಿಐಪಿಎಲ್ ಟ್ರೋಫಿ
ಐಪಿಎಲ್ ಟ್ರೋಫಿ

ಭಾರತ-ಪಾಕಿಸ್ತಾನ (India Pakistan) ನಡುವಿನ ಸಂಘರ್ಷದ ಬಳಿಕ ಸದ್ಯ ಮೇ 17 ರಿಂದ ಐಪಿಎಲ್ ಪುನರ್ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಲ್ಲಿ. ಈ ನಡುವೆ ತವರಿಗೆ ತೆರಳಿದ್ದ ಇಂಗ್ಲೆಂಡ್ ತಂಡದ ಸ್ಟಾರ್ (England Players) ಆಟಗಾರರು ಮತ್ತೆ ಭಾರತಕ್ಕೆ ವಾಪಸ್ ಬರ್ತಾ ಇಲ್ಲ ಎಂದು ವರದಿಯಾಗಿದೆ.

ಜೋಫ್ರಾ, ಸ್ಯಾಮ್, ಓವರ್ಟನ್ ಔಟ್

ಹೌದು, ಇಂಗ್ಲೆಂಡ್ ತಂಡ ಬೌಲರ್ ಜೋಫ್ರಾ ಆರ್ಚರ್, ಆಲ್ರೌಂಡರಗಳಾದ ಸ್ಯಾಮ್ ಕರನ್ ಮತ್ತು ಜೇಮೀ ಓವರ್ಟನ್ ಈ ವಾರದ ಕೊನೆಯಲ್ಲಿ ಪುನರ್ ಆರಂಭವಾಗಲಿರುವ ಐಪಿಎಲ್ 2025 ರ ಉಳಿದ ಪಂದ್ಯಗಳಲ್ಲಿ ಭಾಗವಹಿಸಲು ಭಾರತಕ್ಕೆ ಮರಳುತ್ತಿಲ್ಲ ಎಂದು ವರದಿಯಾಗಿದೆ.

ಜೋಸ್ ಬಟ್ಲರ್ ಕೂಡ ಲಭ್ಯ

ಆದ್ರೆ, ಈ ಖುಷಿಯ ಸಂಗತಿ ಏನಂದ್ರೆ ರಾಯಲ್ ಚಾಲೆಂಜರ್ಸ್ ತಂಡದ ಭಾಗವಾಗಿದ್ದ ಜಾಕೋಬ್ ಬೆಥೆಲ್, ವಿಲ್ ಜ್ಯಾಕ್ಸ್, ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಗುಜರಾತ್ ಟೈಟನ್ಸ್‌ನ ಆಧಾರಸ್ತಂಭವಾಗಿರುವ ಜೋಸ್ ಬಟ್ಲರ್ ಐಪಿಎಲ್ ಉಳಿದ ಪಂದ್ಯಗಳಿಗಾಗಿ ಭಾರತಕ್ಕೆ ವಾಪಾಸ್ ಮರಳಲಿದ್ದಾರೆ ಎಂದು ವರದಿಯಾಗಿದೆ.

ಕೋಟಿ ಕೋಟಿ ಕೊಟ್ಟು ಖರೀದಿಸಿದ್ದ ಆರ್ಚರ್

ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಆರ್ಚರ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 12.50 ಕೋಟಿ ರೂಪಾಯಿ ಕೊಟ್ಟು ಖರೀದಿಸಲಾಗಿತ್ತು. ಇಲ್ಲಿಯವರೆಗೆ ಆರ್‌ಆರ್‌ಗಾಗಿ 12 ಪಂದ್ಯಗಳನ್ನು ಆಡಿದ್ದಾರೆ. ಮತ್ತೊಂದೆಡೆ, ಕರನ್ ಮತ್ತು ಓವರ್ಟನ್ ಸಿಎಸ್‌ಕೆಯ ಭಾಗವಾಗಿದ್ದಾರೆ. ಉಭಯ ಆಟಗಾರರು ಎಂಎಸ್ ಧೋನಿ ನಾಯಕತ್ವದ ತಂಡದಲ್ಲಿ ಕ್ರಮವಾಗಿ 5 ಮತ್ತು 3 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಈ ಎರಡೂ ತಂಡಗಳು ಕೂಡ ಐಪಿಎಲ್ 2025ರ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿರುವುದರಿಂದ ಈ ಆಟಗಾರರು ವಾಪಾಸ್ಸಾಗದೆ ಇರವುದು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಆರ್‌ಸಿಬಿಯ ಎಲ್ಲಾ ಪ್ಲೇಯರ್ಸ್ ವಾಪಸ್

ಕ್ರಿಕ್‌ಬಜ್ ವರದಿ ಪ್ರಕಾರ,’ಇಸಿಬಿ ಮತ್ತು ಫ್ರಾಂಚೈಸಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಇಂಗ್ಲೆಂಡ್‌ನ ಮಾಜಿ ವೈಟ್-ಬಾಲ್ ನಾಯಕ ಬಟ್ಲರ್ ಬುಧವಾರ ರಾತ್ರಿ ಅಹಮದಾಬಾದ್ ತಲುಪಿಸ್ದಾರೆ. ಮತ್ತು ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಕೂಡ ಗುರುವಾರ ತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಬೆಥೆಲ್ ತಂಡ ಸೇರಿಕೊಂಡಿದ್ದಾರೆ ಹಾಗೂ ಫಿಲ್ ಸಾಲ್ಟ್ ಈಗಾಗಲೇ ತಂಡ ಸೇರಿಕೊಂಡಿದ್ದಾರೆ.