Last Updated:
ಅಭಿಷೇಕ್ ಶರ್ಮಾ ಫಾರ್ಮ್ಗೆ ಮರಳಿ, ಪಂಜಾಬ್ ನೀಡಿದ್ದ 246 ರನ್ಗಳ ಗುರಿಯನ್ನು 18.3 ಓವರ್ಗಳಲ್ಲಿ ಹೈದರಾಬಾದ್ ತಂಡ ಚೇಸ್ ಮಾಡಿ ಗೆಲ್ಲಲು ನೆರವಾದರು.
ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಫಾರ್ಮ್ಗೆ ಮರಳಿದಿದ್ದಾರೆ. 2025ರ ಆವೃತ್ತಿಯಲ್ಲಿ ಸಂಪೂರ್ಣ ವಿಫಲರಾಗಿದ್ದ ಎಡಗೈ ಆಟಗಾರ ಸರಿಯಾದ ಪಂದ್ಯದಲ್ಲಿ ಫಾರ್ಮ್ಗೆ ಮರಳಿ ಪಂಜಾಬ್ ನೀಡಿದ್ದ 246 ರನ್ಗಳ ಬೃಹತ್ ಗುರಿಯನ್ನ ಇನ್ನು ಎಸೆತಗಳಿರುವಂತೆಯೇ ಚೇಸ್ ಮಾಡಿ ಗೆಲ್ಲಲು ನೆರವಾದರು. ಪಂಜಾಬ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 245 ರನ್ಗಳಿಸಿತ್ತು. ಈ ಮೊತ್ತವನ್ನ ಹೈದರಾಬಾದ್ ತಂಡ 18.3 ಓವರ್ನಲ್ಲಿ ಗುರಿ ತಲುಪಿತು. ಅಭಿಷೇಕ್ ಶರ್ಮಾ 55 ಎಸೆತಗಳಲ್ಲಿ 14 ಬೌಂಡರಿ, 10 ಸಿಕ್ಸರ್ಗಳ ನೆರವಿನಿಂದ 141 ರನ್ಗಳಿಸಿ ಹೈದರಾಬಾದ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
First Published :
April 12, 2025 11:21 PM IST