IPL 2025: ಶತಕವೀರ ಪ್ರಿಯಾಂಶ್ ಐಪಿಎಲ್​ನಲ್ಲಿ ಅವಕಾಶ ಪಡೆಯಲು ಆ 8 ಎಸೆತಗಳೇ ಕಾರಣ! | PBKS Coach Brad Haddin Reveals Surprising Fact About Priyansh Arya’s Preparation Before IPL 2025

IPL 2025: ಶತಕವೀರ ಪ್ರಿಯಾಂಶ್ ಐಪಿಎಲ್​ನಲ್ಲಿ ಅವಕಾಶ ಪಡೆಯಲು ಆ 8 ಎಸೆತಗಳೇ ಕಾರಣ! | PBKS Coach Brad Haddin Reveals Surprising Fact About Priyansh Arya’s Preparation Before IPL 2025

Last Updated:

ಪಂದ್ಯದ ನಂತರ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಆಟಗಾರರು ಪ್ರಿಯಾಂಶ್‌ರ ಆಟವನ್ನು ಶ್ಲಾಘಿಸಿದ್ದಾರೆ. ಪಂಜಾಬ್ ಕಿಂಗ್ಸ್‌ನ ಸಹಾಯಕ ಕೋಚ್ ಬ್ರಾಡ್ ಹ್ಯಾಡಿನ್, ಪ್ರಿಯಾಂಶ್‌ರ ಆಯ್ಕೆಗೆ ಕಾರಣವಾದ ಒಂದು ರೋಚಕ ಕ್ಷಣವನ್ನು ಮೆಲುಕು ಹಾಕಿದರು.

ಪ್ರಿಯಾಂಶ್ ಆರ್ಯ ತಂಡಕ್ಕೆ ಆಯ್ಕೆಯಾದ ರೋಚಕ ಕಥೆಪ್ರಿಯಾಂಶ್ ಆರ್ಯ ತಂಡಕ್ಕೆ ಆಯ್ಕೆಯಾದ ರೋಚಕ ಕಥೆ
ಪ್ರಿಯಾಂಶ್ ಆರ್ಯ ತಂಡಕ್ಕೆ ಆಯ್ಕೆಯಾದ ರೋಚಕ ಕಥೆ

ಐಪಿಎಲ್ 2025 (IPL 2025) 22ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ನ (Punjab Kings) ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ (Priyansh Arya) ತಮ್ಮ ವೇಗದ ಶತಕದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಮುಲ್ಲನ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಅವರು ಕೇವಲ 39 ಎಸೆತಗಳಲ್ಲಿ 103 ರನ್ ಗಳಿಸಿ ಐಪಿಎಲ್‌ನ ಇತಿಹಾಸದಲ್ಲಿ ಎರಡನೇ ವೇಗದ ಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್‌ಗಳು ಮತ್ತು 7 ಬೌಂಡರಿಗಳು ಸೇರಿದ್ದವು. ತಂಡದ ಇತರ ಆಟಗಾರರ ವಿಕೆಟ್‌ಗಳು ಸತತವಾಗಿ ಬೀಳುತ್ತಿದ್ದರೂ, ಪ್ರಿಯಾಂಶ್ ಆತ್ಮವಿಶ್ವಾಸದಿಂದ ಆಡಿ ಪಂಜಾಬ್‌ಗೆ 219 ರನ್‌ಗಳ ಬೃಹತ್ ಮೊತ್ತ ತಂದುಕೊಟ್ಟರು. ಈ ಪಂದ್ಯವನ್ನ ಪಂಜಾಬ್ ಕಿಂಗ್ಸ್ 18 ರನ್​ಗಳಿಂದ ಗೆದ್ದು ಬೀಗಿತು.

ಆ 8 ಎಸೆತಗಳೇ ಆತನ ಆಯ್ಕೆಗೆ ಕಾರಣ

ಪಂದ್ಯದ ನಂತರ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಆಟಗಾರರು ಪ್ರಿಯಾಂಶ್‌ರ ಆಟವನ್ನು ಶ್ಲಾಘಿಸಿದ್ದಾರೆ. ಪಂಜಾಬ್ ಕಿಂಗ್ಸ್‌ನ ಸಹಾಯಕ ಕೋಚ್ ಬ್ರಾಡ್ ಹ್ಯಾಡಿನ್, ಪ್ರಿಯಾಂಶ್‌ರ ಆಯ್ಕೆಗೆ ಕಾರಣವಾದ ಒಂದು ರೋಚಕ ಕ್ಷಣವನ್ನು ಮೆಲುಕು ಹಾಕಿದರು. “ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಪ್ರಿಯಾಂಶ್ ಕೇವಲ 8 ಎಸೆತಗಳನ್ನು ಆಡಿದ್ದರು. ಆ 8 ಎಸೆತಗಳಲ್ಲಿ ಅವರು 4-5 ಸಿಕ್ಸರ್‌ಗಳನ್ನು ಬಾರಿಸಿದರು. ಅದನ್ನು ನೋಡಿದ ನಾವು ತಕ್ಷಣ ಅವರಿಗೆ ಮೊದಲ ಪಂದ್ಯದಲ್ಲಿ ಅವಕಾಶ ನೀಡಲು ನಿರ್ಧರಿಸಿದೆವು. ಅವರ ಆಟ ನೋಡಿ ‘ವಾವ್, ಇದು ವಿಭಿನ್ನ’ ಎಂದು ಭಾವಿಸಿದೆವು” ಎಂದು ಹ್ಯಾಡಿನ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಆರ್​ಸಿಬಿ ಖರೀದಿಸದೇ ಬಿಟ್ಟ ಆಟಗಾರನಿಂದ ಸಿಡಿಲಬ್ಬರದ ಶತಕ! ಪಂಜಾಬ್​​ 10 ಪಟ್ಟು ಹಣಕೊಟ್ಟಿದ್ದಕ್ಕೂ ಸಾರ್ಥಕ

ಡಿಪಿಎಲ್​ನಲ್ಲಿ ಆರು ಬಾಲಿಗೆ ಆರು ಸಿಕ್ಸರ್

24 ವರ್ಷದ ಪ್ರಿಯಾಂಶ್ ಆರ್ಯ ದೆಹಲಿಯವರು. ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಓವರ್​ನಲ್ಲಿ 6 ಸಿಕ್ಸರ್‌ ಬಾರಿಸಿ ಸುದ್ದಿಯಾಗಿದ್ದರು. 2024ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದೆಹಲಿಗಾಗಿ 325 ರನ್ ಗಳಿಸಿ ಗಮನ ಸೆಳೆದಿದ್ದ ಅವರು, ಐಪಿಎಲ್ 2025ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್‌ಗೆ 3.8 ಕೋಟಿ ರೂಪಾಯಿಗೆ ಸೇರಿದರು. ತಮ್ಮ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಈಗಾಗಲೇ 4 ಪಂದ್ಯಗಳಲ್ಲಿ 158 ರನ್ ಗಳಿಸಿ, 210.66ರ ಸ್ಟ್ರೈಕ್ ರೇಟ್‌ನೊಂದಿಗೆ ಮಿಂಚಿದ್ದಾರೆ.

ಪ್ರಿಯಾಂಶ್‌ರ ಈ ಪ್ರದರ್ಶನ ಐಪಿಎಲ್‌ನಲ್ಲಿ ಹೊಸ ಪ್ರತಿಭೆಗಳನ್ನು ಒಡಮೂಡಿಸುವ ಸಾಮರ್ಥ್ಯವನ್ನು ತೋರಿಸುತ್ತದೆ. ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನಂತಹ ತಂಡಗಳು ಹರಾಜಿನಲ್ಲಿ ಅವರನ್ನು ಕೈತಪ್ಪಿಸಿಕೊಂಡಿದ್ದರಿಂದ, ಪಂಜಾಬ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡದ್ದು ಈಗ ಫಲ ನೀಡಿದೆ. ಭಾರತೀಯ ಕ್ರಿಕೆಟ್‌ಗೆ ಉದಯಿಸುತ್ತಿರುವ ಈ ತಾರೆ ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡುವ ಲಕ್ಷಣಗಳನ್ನು ತೋರುತ್ತಿದ್ದಾನೆ.

ಇದನ್ನೂ ಓದಿ: ಆತನೊಬ್ಬನಿಂದ ನಾವು ಲಕ್ನೋ ವಿರುದ್ಧ ಗೆಲ್ಲೋ ಪಂದ್ಯದಲ್ಲಿ ಸೋತೆವು! ರಹಾನೆ ಹೇಳಿದ್ದು ಯಾರ ಬಗ್ಗೆ?

ಪಂದ್ಯದ ಬಗ್ಗೆ ವಿವರ

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿ ಪಂಜಾಬ್ ಕಿಂಗ್ಸ್ ಪವರ್​ ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಇನ್ನು ಇಡೀ ತಂಡದಲ್ಲಿ ಕೇವಲ ಮೂವರು ಬ್ಯಾಟರ್ ಮಾತ್ರ ಎರಡಂಕಿ ಮೊತ್ತ ದಾಖಲಿಸಿದರಾದರೂ 220 ರನ್​ಗಳ ಬೃಹತ್ ಟಾರ್ಗೆಟ್ ನೀಡುವಲ್ಲಿ ಸಫಲವಾಯಿತು. 24 ವರ್ಷದ ಪ್ರಿಯಾಂಶ್ ಆರ್ಯ 42 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್​ಗಳ ಸಹಿತ 103 ರನ್​ಗಳಿಸಿದರೆ, 7ನೇ ಕ್ರಮಾಂಕದಲ್ಲಿ ಬಂದ ಶಶಾಂಕ್ ಸಿಂಗ್ 36 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ಗಳ ಸಹಿತ ಅಜೇಯ 52, ಮಾರ್ಕೊ ಜಾನ್ಸನ್​ 19 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 34 ರನ್​ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.

ಗುರಿ ಬೆನ್ನಟ್ಟಿದ ತಂಡ ಸಿಎಸ್​ಕೆ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್​ಗಳಿಸಲಷ್ಟೇ ಶಕ್ತವಾಯಿತು. ರಚಿನ್ ರವೀಂದ್ರ (36), ಡಿವೋನ್ ಕಾನ್ವೆ (69), ಶಿವಂ ದುಬೆ (42) ಹಾಗೂ ಧೋನಿ (27) ಗೆಲುವಿಗಾಗಿ ತೋರಿದ ಹೋರಾಟ ವ್ಯರ್ಥವಾಯಿತು.