ಆಡಂ ಜಂಪಾ ಬದಲು ಸ್ಥಾನ ಪಡೆದಿದ್ದ ಸ್ಮರಣ್
ಹೌದು, ಹೈದರಾಬಾದ್ ತಂಡಕ್ಕೆ ಆಯ್ಕೆಯಾಗಿದ್ದ ಆಡಂ ಜಂಪಾ ಬದಲು ತಂಡದಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ 22 ವರ್ಷದ ಬ್ಯಾಟ್ಸ್‌ಮನ್ ಆರ್. ಸ್ಮರನ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದಿದ್ದಾರೆ. ಹಾಗಾಗಿ ಅವರ ಬದಲಿಗೆ ಫ್ರಾಂಚೈಸಿ ಹರ್ಷ್ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
22ರ ಹರ್ಷ್ ದುಬೆಗೆ ಸ್ಥಾನ
22 ವರ್ಷದ ದುಬೆ, ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ಪರ ಆಡುವ ಎಡಗೈ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಆಗಿದ್ದು, ವಿದರ್ಭ ತಂಡವು 2024-25ರಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು 69 ವಿಕೆಟ್‌ಗಳನ್ನು ಕಬಳಿಸುವ ಮೂಲಕ ರಣಜಿ ಟ್ರೋಫಿ ಸೀಸನ್ ಒಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಸಾಧನೆ ಮಾಡಿದರು.
ರಣಜಿಯಲ್ಲಿ ದಾಖಲೆ ಬರೆದಿದ್ದ ದುಬೆ
ಇದಕ್ಕೂ ಮೊದಲು 2018-19ರ ರಣಜಿ ಸೀಸನ್‌ನಲ್ಲಿ ಅಶುತೋಷ್ ಅಮಾನ್ ಅವರು 68 ವಿಕೆಟ್ ಪಡೆಯುವ ಮೂಲಕ ದಾಖಲೆ ಮಾಡಿದ್ದರು. ಕಳೆದ ಐಪಿಎಲ್ ಹರಾಜಿನಲ್ಲಿ ಅವರ ಮೂಲ ಬೆಲೆ 30 ಲಕ್ಷ ರೂಪಾಯಿಗಳಿಗೆ ಅವರು SRH ತಂಡವನ್ನು ಸೇರಿಕೊಂಡಿದ್ದಾರೆ.
ರಣಜಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿರುವ ಅವರು, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಕೂಡ ಉತ್ತಮ ಪ್ರದರ್ಶನವನ್ನೇ ತೋರಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 20 ಇನ್ನಿಂಗ್ಸ್‌ಗಳಲ್ಲಿ 21 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಅವರು 34.66 ಸರಾಸರಿಯಲ್ಲಿ ಮತ್ತು ಟಿ-20ಯಲ್ಲಿ 6.78ರ ಉತ್ತಮ ಎಕಾನಮಿ ರೇಟ್ ಹೊಂದಿದ್ದಾರೆ.
ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನ
ಐಪಿಎಲ್ 2024 ರಲ್ಲಿ ಫೈನಲ್ ತಲುಪಿದ್ದ ಎಸ್‌ಆರ್‌ಹೆಚ್ ಈ ಬಾರಿ ಕೆಟ್ಟ ಪ್ರದರ್ಶನ ತೋರುವ ಮೂಲಕ ನಿರಾಸೆ ಅನುಭವಿಸಿದೆ. ಎಸ್‌ಆರ್‌ಹೆಚ್ ಇದುವರೆಗೆ ಆಡಿದ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ . ಅವರು ತಮ್ಮ ಉಳಿದ ನಾಲ್ಕು ಪಂದ್ಯಗಳನ್ನು ಗೆದ್ದರೂ ಸಹ ಕೇವಲ 14 ಅಂಕಗಳನ್ನು ಪಡೆಯಬಹುದು ಹಾಗಾಗಿ ಅವರು ಪ್ಲೇ ಆಫ್ ತಲುಪುವುದು ಬಹುತೇಕ ಕಠಿಣ ಎನ್ನಲಾಗಿದೆ. SRH ತನ್ನ ಮುಂದಿನ ಪಂದ್ಯವನ್ನು ಇಂದು (ಮೇ5) ಹೈದರಾಬಾದ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಆಡಲಿದೆ.
ಸನ್‌ರೈಸರ್ಸ್ ಹೈದರಾಬಾದ್ ಪೂರ್ಣ ತಂಡ : ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್, ಕಮಿಂದು ಮೆಂಡಿಸ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಹರ್ಷ್ ದುಬೆ, ಅಭಿನವ್ ಮನೋಹರ್, ಅನಿಕೇತ್ ಬಾಬಿ ಸಿಂಮಾರ್, ಅನಿಕೇತ್ ಬಾಬಿ ಸಿಂಮಾರ್, ಅನಿಕೇತ್ ಬಾಬಿ ಸಿಂಮಾರ್, ಅನಿಕೇತ್ ಬಾಬಿ ಸಿಂಘರ್, ವಿವಿತ್ ರಾಹುಲ್ ವರ್ಮಾ, ವಿಶ್ರಾಂತ ಎಂ. ಸಿಂಗ್, ಜೀಶನ್ ಅನ್ಸಾರಿ, ಅಥರ್ವ ತಾಯ್ಡೆ ಮತ್ತು ಇಶಾನ್ ಮಾಲಿಂಗ.