IPL 2025: 15 ಪಂದ್ಯಗಳಲ್ಲಿ 5ರಲ್ಲಿ ಮಾತ್ರ ಗೆಲುವು! ಇಲ್ಲಿದೆ ನೋಡಿ ಆರ್​ಸಿಬಿಯ ಎಲ್ಲಾ ಪ್ಲೇ ಆಫ್ ಪಂದ್ಯಗಳ ಫಲಿತಾಂಶ | RCB s IPL Playoff History A Look at Wins Losses and Records

IPL 2025: 15 ಪಂದ್ಯಗಳಲ್ಲಿ 5ರಲ್ಲಿ ಮಾತ್ರ ಗೆಲುವು! ಇಲ್ಲಿದೆ ನೋಡಿ ಆರ್​ಸಿಬಿಯ ಎಲ್ಲಾ ಪ್ಲೇ ಆಫ್ ಪಂದ್ಯಗಳ ಫಲಿತಾಂಶ | RCB s IPL Playoff History A Look at Wins Losses and Records

ಆರ್‌ಸಿಬಿಯ ಐಪಿಎಲ್ ಪ್ಲೇಆಫ್ ಇತಿಹಾಸ

ಆರ್‌ಸಿಬಿ ಐಪಿಎಲ್‌ನಲ್ಲಿ ಒಟ್ಟು 15 ಪ್ಲೇಆಫ್ ಪಂದ್ಯಗಳನ್ನು ಆಡಿದ್ದು, ಕೇವಲ 5 ಗೆಲುವು ಸಾಧಿಸಿದ್ದರೆ, 10 ಸೋಲುಗಳನ್ನು ಕಂಡಿದೆ. ಈ ತಂಡವನ್ನು ಪ್ಲೇಆಫ್‌ನಲ್ಲಿ ಅತ್ಯಂತ ದುರದೃಷ್ಟಕರ ತಂಡ ಎಂದು ಕರೆಯಲಾಗುತ್ತದೆ, ಏಕೆಂದರೆ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ, ನಾಕೌಟ್ ಪಂದ್ಯಗಳಲ್ಲಿ ಸೋಲುವ ಒಂದು ರೀತಿಯ ಶಾಪ ಆರ್‌ಸಿಬಿಯನ್ನು 17 ವರ್ಷಗಳಿಂದ ಕಾಡುತ್ತಿದೆ. ಆರ್‌ಸಿಬಿ ಮೂರು ಬಾರಿ (2009, 2011, 2016) ಫೈನಲ್ ತಲುಪಿದರೂ ಒಮ್ಮೆಯೂ ಟ್ರೋಫಿಯನ್ನು ಗೆಲ್ಲಲಿಲ್ಲ.

ಆರ್‌ಸಿಬಿಯ ಪ್ಲೇಆಫ್ ಇತಿಹಾಸ ಇಲ್ಲಿದೆ

2009: ಸೆಮಿಫೈನಲ್​ನಲ್ಲಿ ಸಿಎಸ್​ಕೆ ವಿರುದ್ಧ 6 ವಿಕೆಟ್​ಗಳ ಗೆಲುವು

ಫೈನಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 6 ರನ್‌ಗಳಿಂದ ಸೋಲು

2010: ಸೆಮಿಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 35 ರನ್‌ಗಳ ಸೋಲು

2011: ಕ್ವಾಲಿಫೈಯರ್ 1ರಲ್ಲಿ ಸಿಎಸ್​ಕೆ ವಿರುದ್ಧ 43 ರನ್​ಗಳ ಸೋಲು

ಕ್ವಾಲಿಫೈಯರ್ 2ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್​ಗಳಲ್ಲಿ ಗೆಲುವು

ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ 58 ರನ್‌ಗಳ ಸೋಲು.

2015: ಎಲಿಮಿನೇಟರ್​​ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 71 ರನ್​ಗಳ ಗೆಲುವು

ಕ್ವಾಲಿಫೈಯರ್-2 ರಲ್ಲಿ ಸಿಎಸ್‌ಕೆ ವಿರುದ್ಧ 3 ವಿಕೆಟ್‌ಗಳ ಸೋಲು

2016: ಕ್ವಾಲಿಫೈಯರ್-1 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 4 ವಿಕೆಟ್​ಗಳ ಗೆಲುವು

ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್‌ಗಳ ಸೋಲು.

2020: ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್ ವಿರುದ್ಧ 6 ವಿಕೆಟ್‌ಗಳ ಸೋಲು

2021: ಎಲಿಮಿನೇಟರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 4 ವಿಕೆಟ್‌ಗಳ ಸೋಲು.

2022: ಎಲಿಮಿನೇಟರ್​​ನಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 14ರನ್​ಗಳ ಗೆಲುವು

ಕ್ವಾಲಿಫೈಯರ್-2 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಸೋಲು.

2024: ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳ ಸೋಲು.

2025: ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸ್ಪರ್ಧೆ (ಮೇ 29).

ಪಾಯಿಂಟ್ ಪಟ್ಟಿ ಮತ್ತು ಪ್ಲೇಆಫ್ ವೇಳಾಪಟ್ಟಿ

ಆರ್‌ಸಿಬಿ 14 ಪಂದ್ಯಗಳಿಂದ 19 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ, ಆದರೆ ಪಂಜಾಬ್ ಕಿಂಗ್ಸ್ (19 ಅಂಕ, +0.372) ಉತ್ತಮ ನಿವ್ವಳ ರನ್ ದರದಿಂದ ಮೊದಲ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ (18 ಅಂಕ) ಮೂರನೇ ಮತ್ತು ಮುಂಬೈ ಇಂಡಿಯನ್ಸ್ (16 ಅಂಕ) ನಾಲ್ಕನೇ ಸ್ಥಾನದಲ್ಲಿದೆ.

ಕ್ವಾಲಿಫೈಯರ್-1 (ಮೇ 29, ಮುಲ್ಲನ್‌ಪುರ): ಆರ್‌ಸಿಬಿ vs ಪಂಜಾಬ್ ಕಿಂಗ್ಸ್. ಗೆದ್ದ ತಂಡ ಫೈನಲ್‌ಗೆ; ಸೋತ ತಂಡ ಕ್ವಾಲಿಫೈಯರ್-2 ಆಡಲಿದೆ.

ಎಲಿಮಿನೇಟರ್ (ಮೇ 30, ಮುಲ್ಲನ್‌ಪುರ): ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್

ಕ್ವಾಲಿಫೈಯರ್-2 (ಜೂನ್ 1, ಅಹಮದಾಬಾದ್): ಕ್ವಾಲಿಫೈಯರ್-1 ರ ಸೋತ ತಂಡ vs ಎಲಿಮಿನೇಟರ್ ವಿಜೇತ ತಂಡಗಳ ನಡುವೆ ಫೈನಲ್​ ಪ್ರವೇಶಿಸಲು ಪೈಪೋಟಿ.

ಫೈನಲ್ (ಜೂನ್ 3): ಕ್ವಾಲಿಫೈಯರ್-1 ವಿಜೇತ vs ಕ್ವಾಲಿಫೈಯರ್-2 ವಿಜೇತ