2ನೇ ಬಾರಿಗೆ ಮೊದಲ ತಂಡವಾಗಿ ಹೊರಬಿದ್ದ ಸಿಎಸ್ಕೆ
ಚೆನ್ನೈ ಸೂಪರ್ ಕಿಂಗ್ಸ್ 2025 ಕ್ಕಿಂತ ಮೊದಲು 2020ರ ಟೂರ್ನಮೆಂಟ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡವಾಗಿತ್ತು. CSK ಪ್ಲೇಆಫ್ ರೇಸ್‌ನಿಂದ ಮೊದಲ ತಂಡವಾಗಿ ಹೊರಬಿದ್ದಿರುವುದು ಈ ಎರಡು ಬಾರಿ ಮಾತ್ರ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡಗಳು ಅತಿ ಹೆಚ್ಚು ಬಾರಿ, ತಲಾ 3 ಬಾರಿ ಪ್ಲೇಆಫ್ ರೇಸ್‌ನಿಂದ ನಿರ್ಗಮಿಸಿವೆ. ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸತತ ಎರಡು ಬಾರಿ ಮೊದಲ ತಂಡವಾಗಿ ಪ್ಲೇಆಫ್ ರೇಸ್ ನಿಂದ ನಿರ್ಗಮಿಸಿವೆ. ಇವುಗಳ ಜೊತೆಗೆ, ಕೋಲ್ಕತ್ತಾ ನೈಟ್ ರೈಡರ್ಸ್, ಪುಣೆ ವಾರಿಯರ್ಸ್ ಇಂಡಿಯಾ, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸಹ ತಲಾ ಒಮ್ಮೊಮ್ಮೆ ಮೊದಲ ತಂಡವಾಗಿ ಪ್ಲೇ ಆಫ್ ರೇಸ್‌ನಿಂದ ಮೊದಲ ತಂಡವಾಗಿ ಹೊರಬಿದ್ದಿವೆ.]
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಮೊದಲು ನಿರ್ಗಮಿಸಿದ ತಂಡಗಳ ಬಗ್ಗೆ ತಿಳಿದುಕೊಳ್ಳೋಣ.
2008 – ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್
2009- ಕೋಲ್ಕತ್ತಾ ನೈಟ್ ರೈಡರ್ಸ್
2010 – ಪಂಜಾಬ್ ಕಿಂಗ್ಸ್
2011 – ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್
2012- ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್
2013 – ಪುಣೆ ವಾರಿಯರ್ಸ್ ಇಂಡಿಯಾ
2014 – ಡೆಲ್ಲಿ ಕ್ಯಾಪಿಟಲ್ಸ್
2015- ಪಂಜಾಬ್ ಕಿಂಗ್ಸ್
2016 – ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
2017- ರಾಯಲ್ ಚಾಲೆಂಜರ್ಸ್ ಬೆಂಗಳೂರು
2018 – ಡೆಲ್ಲಿ ಕ್ಯಾಪಿಟಲ್ಸ್
2019 – ರಾಯಲ್ ಚಾಲೆಂಜರ್ಸ್ ಬೆಂಗಳೂರು
2020 – ಚೆನ್ನೈ ಸೂಪರ್ ಕಿಂಗ್ಸ್
2021 – ಸನ್‌ರೈಸರ್ಸ್ ಹೈದರಾಬಾದ್
2022 – ಮುಂಬೈ ಇಂಡಿಯನ್ಸ್
2023 – ಡೆಲ್ಲಿ ಕ್ಯಾಪಿಟಲ್ಸ್
2024 – ಮುಂಬೈ ಇಂಡಿಯನ್ಸ್
2025 – ಚೆನ್ನೈ ಸೂಪರ್ ಕಿಂಗ್ಸ್
ಸಿಎಸ್ಕೆ ತಂಡದ ಐಪಿಎಲ್ ಸಾಧನೆ
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನಲ್ಲಿ 16 ಸೀಸನ್ ಆಡಿದ್ದು, 5 ಬಾರಿ ಚಾಂಪಿಯನ್ ಆಗಿದೆ. 2010 ಮತ್ತು 11ರ ಆವೃತ್ತಿಗಳಲ್ಲಿ ಸಿಎಸ್ಕೆ ಚಾಂಪಿಯನ್ ಆಗಿತ್ತು. ಆ ನಂತರ 2018, 2021, 2023ರಲ್ಲಿ ಚಾಂಪಿಯನ್ ಆಗಿದೆ. 5 ಬಾರಿ ರನ್ನರ್ ಅಪ್ ಆಗಿದೆ. 2008, 2012, 2013, 2015, 2019ರಲ್ಲಿ ರನ್ನರ್ ಅಪ್ ಆಗಿದೆ. 16 ಐಪಿಎಲ್ ಆಡಿರುವ ಸಿಎಸ್ಕೆ 12 ಸೀಸನ್ಗಳಲ್ಲಿ ಪ್ಲೇ ಆಫ್ ತಲುಪಿದೆ. ಇದು ಎಲ್ಲಾ ತಂಡಗಳಿಂತ ಹೆಚ್ಚಾಗಿದೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 10 ಬಾರಿ ಪ್ಲೇ ಆಫ್ ಪ್ರವೇಶಿಸಿದ್ದು 6 ಫೈನಲ್ ಆಡಿ 5ರಲ್ಲಿ ಪ್ರಶಸ್ತಿ ಗೆದ್ದಿದೆ.
ಕೇವಲ 4 ಬಾರಿ ಪ್ಲೇ ಆಫ್ ಪ್ರವೇಶ ವಿಫಲ
ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 16 ಆವೃತ್ತಿಗಳಲ್ಲಿ ನಾಲ್ಕು ಆವೃತ್ತಿಗಳಲ್ಲಿ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದೆ. 2020ರಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿತ್ತು. ನಂತರ 2022, 2024 ಹಾಗೂ 2025ರಲ್ಲಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಸತತ 2ನೇ ಬಾರಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವುದು ಇದೇ ಮೊದಲಾಗಿದೆ.
IPL 2025: 2025ರ ಆವೃತ್ತಿಯಲ್ಲಿ ಮೊದಲ ತಂಡವಾಗಿ ಹೊರಬಿದ್ದ ಸಿಎಸ್ಕೆ! 18 ಆವೃತ್ತಿಗಳಲ್ಲಿ ಎಲಿಮಿನೇಟ್ ಆದ ಮೊದಲ ತಂಡಗಳು ಇಲ್ಲಿವೆ ನೋಡಿ