IPL 2025: 8ನೇ ತರಗತಿ ವಿದ್ಯಾರ್ಥಿ ಆಟ ನೋಡಲೆಂದೆ ನಿದ್ದೆಯಿಂದ ಎದ್ದೆ! ವೈಭವ್ ಆಟದ ಬಗ್ಗೆ ಗೂಗಲ್ ಸಿಎಒ ಪ್ರಶಂಸೆ | Sundar Pichai Blows Away by 14-Year-Old Vaibhav Suryavanshi s Debut Woke Up to Watch an 8th Grader

IPL 2025: 8ನೇ ತರಗತಿ ವಿದ್ಯಾರ್ಥಿ ಆಟ ನೋಡಲೆಂದೆ ನಿದ್ದೆಯಿಂದ ಎದ್ದೆ! ವೈಭವ್ ಆಟದ ಬಗ್ಗೆ ಗೂಗಲ್ ಸಿಎಒ ಪ್ರಶಂಸೆ | Sundar Pichai Blows Away by 14-Year-Old Vaibhav Suryavanshi s Debut Woke Up to Watch an 8th Grader

Last Updated:

14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅದ್ಭುತ ಪ್ರದರ್ಶನ ನೀಡಿದರು. 34 ರನ್‌ಗಳಿಸಿ, ಐಪಿಎಲ್‌ನ ಅತ್ಯಂತ ಕಿರಿಯ ಆಟಗಾರರಾದರು. ಸುಂದರ್ ಪಿಚೈ ಅವರ ಆಟವನ್ನು ಮೆಚ್ಚಿದರು.

ಸುಂದರ್ ಪಿಚೈಸುಂದರ್ ಪಿಚೈ
ಸುಂದರ್ ಪಿಚೈ

ಲಖನೌ ಸೂಪರ್​ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals vs Lucknow Super Giants) ಸೋಲು ಕಂಡರೂ, 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಜೈಪುರ ಮೈದಾನದಲ್ಲಿ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಎಲ್ಲರ ಹೃದಯ ಗೆದ್ದರು. ವೈಭವ್ ಸೂರ್ಯವಂಶಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಬಿಗ್​ ಸಿಕ್ಸರ್ ಬಾರಿಸುವ ಮೂಲಕ ಪ್ರಾರಂಭಿಸಿದರು. ಅದನ್ನು ನೋಡಿದ ಅಭಿಮಾನಿಗಳು, ಮಾಜಿ ಕ್ರಿಕೆಟಿಗರೂ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವೈಭವ್ ಸೂರ್ಯವಂಶಿ ಅದ್ಭುತ ಇನ್ನಿಂಗ್ಸ್ ಆಡಿದರು. ಕೇವಲ 20 ಎಸೆತಗಳಲ್ಲಿ 170 ಸ್ಟ್ರೈಕ್ ರೇಟ್‌ನೊಂದಿಗೆ 34 ರನ್​​ಗಳಿಸಿದ ವೈಭವ್ ಸೂರ್ಯವಂಶಿ 2 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಅವರ ಆಟವನ್ನ ಗೂಗಲ್ ಸಿಇಒ ಸುಂದರ್ ಪಿಚೈ (Sundar Pichai) ಕೂಡ ಅವರ ಅಭಿಮಾನಿಯಾಗಿದ್ದಾರೆ. ಸುಂದರ್ ಪಿಚೈ ತಮ್ಮ ಟ್ವೀಟ್‌ನಲ್ಲಿ ವೈಭವ್ ಸೂರ್ಯವಂಶಿಯನ್ನು ಪ್ರಶಂಸಿಸಿದ್ದಾರೆ.

ದಾಖಲೆ ಬರೆದ ವೈಭವ್

ವೈಭವ್ ಸೂರ್ಯವಂಶಿ, 14 ವರ್ಷ ಮತ್ತು 23 ದಿನಗಳ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿ, ಈ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಈ ಮೊದಲು ಈ ದಾಖಲೆ 2019ರಲ್ಲಿ 16 ವರ್ಷ 157 ದಿನಗಳಲ್ಲಿ ಚೊಚ್ಚಲ ಪಂದ್ಯ ಆಡಿದ ಪ್ರಯಾಸ್ ರೇ ಬರ್ಮನ್ ಹೆಸರಿನಲ್ಲಿತ್ತು. ಯಶಸ್ವಿ ಜೈಸ್ವಾಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ವೈಭವ್, ಮೊದಲ ವಿಕೆಟ್‌ಗೆ 85 ರನ್‌ಗಳ ಜೊತೆಯಾಟವನ್ನು ಒದಗಿಸಿದರು. ಆದರೆ, ರಾಜಸ್ಥಾನ ರಾಯಲ್ಸ್ ಈ ಪಂದ್ಯವನ್ನು 2 ರನ್‌ಗಳಿಂದ ಸೋತಿತಾದರೂ, ವೈಭವ್‌ರ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: ಲಖನೌಗೆ ರೋಚಕ ಗೆಲುವು ತಂದುಕೊಟ್ಟ ಆವೇಶ್ ಖಾನ್! ಕೊನೆಯ ಓವರ್​​ನಲ್ಲಿ 9 ರನ್​ ಗಳಿಸಲಾಗದೇ ಸೋತ ರಾಯಲ್ಸ್

ನಿದ್ರೆಯಿಂದ ಎದ್ದು ಕ್ರಿಕೆಟ್ ನೋಡಿದ ಸುಂದರ್

ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ವೈಭವ್‌ರ ಆಟಕ್ಕೆ ಮಾರುಹೋಗಿ, ತಮ್ಮ ಎಕ್ಸ್ ಖಾತೆಯಲ್ಲಿ, “ ಐಪಿಎಲ್‌ನಲ್ಲಿ 8ನೇ ತರಗತಿಯ ವಿದ್ಯಾರ್ಥಿಯ ಆಟವನ್ನು ನೋಡಲು ನಿದ್ರೆಯಿಂದ ಎದ್ದೆ! ಎಂತಹ ಅದ್ಭುತ ಚೊಚ್ಚಲ ಪಂದ್ಯ!” ಎಂದು ಟ್ವೀಟ್ ಮಾಡಿದ್ದಾರೆ. ವೈಭವ್‌ರ ಈ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಪ್ರಶಂಸೆಯ ಸುರಿಮಳೆಗೈಯ್ಯುತ್ತಿದ್ದಾರೆ. ಆದರೆ, ಕೆಲವರು ವೈಭವ್‌ ವಯಸ್ಸಿನ ಬಗ್ಗೆ ಟ್ರೋಲ್ ಮಾಡಿದರೂ, ಶಾಲೆಯಲ್ಲಿರುವಾಗಲೇ ಟಾಪ್​ ಟಿ20 ಲೀಗ್​​ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಭಾರತೀಯ ಕ್ರಿಕೆಟ್​​ನ ಭವಿಷ್ಯ

ವೈಭವ್‌ರ ಈ ಆರಂಭವು ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆಯೊಬ್ಬರ ಆಗಮನವನ್ನು ಸೂಚಿಸುತ್ತದೆ. ರಾಜಸ್ಥಾನ ರಾಯಲ್ಸ್‌ನ ಈ ಯುವ ಪ್ರತಿಭೆ, ತನ್ನ ಆತ್ಮವಿಶ್ವಾಸದ ಬ್ಯಾಟಿಂಗ್ ಮತ್ತು ಭಯವಿಲ್ಲದ ಆಟದಿಂದ ಎಲ್ಲರನ್ನೂ ಆಕರ್ಷಿಸಿದ್ದಾನೆ. ಮುಂದಿನ ಪಂದ್ಯಗಳಲ್ಲಿ ಈ 14 ವರ್ಷದ ಬಾಲಕ ತನ್ನ ಪ್ರದರ್ಶನವನ್ನು ಮತ್ತಷ್ಟು ಸುಧಾರಿಸಿ, ತಂಡಕ್ಕೆ ಗೆಲುವಿನ ಕೊಡುಗೆ ನೀಡುವ ನಿರೀಕ್ಷೆಯಿದೆ.

1.1 ಕೋಟಿಗೆ ಖರೀದಿಸಿದ್ದ ರಾಯಲ್ಸ್

ವೈಭವ್ ಸೂರ್ಯವಂಶಿ ಹೆಸರು ಮೆಗಾ ಹರಾಜಿನಲ್ಲಿ ಬರುತ್ತಿದ್ದಂತೆ ಎಲ್ಲಾ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್​ ತಂಡಗಳು ಸಖತ್ ಪೈಪೋಟಿ ನಡೆಸಿದರು. 20 ಲಕ್ಷ ಮೂಲಬೆಲೆಯ ಆಟಗಾರರನನ್ನ ಕೊನೆಗೆ ರಾಯಲ್ಸ್ 1.1 ಕೋಟಿ ನೀಡಿ ಖರೀದಿಸಿತ್ತು. ಇದೀಗ ಪಂದ್ಯದಲ್ಲಿ ಅವಕಾಶ ನೀಡುವ ಮೂಲಕ ಗಮನ ಸೆಳೆದಿದೆ. ಆದರೆ ಈ ಪಂದ್ಯದಲ್ಲಿ ರಾಯಲ್ಸ್ ಸೋಲು ಕಂಡಿತ್ತು ಬೇಸರದ ಸಂಗತಿಯಾಗಿದೆ.