Last Updated:
ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು. ಪಂಜಾಬ್ ಕಿಂಗ್ಸ್ ಪರ ಆಡಿದ ಮ್ಯಾಕ್ಸ್‌ವೆಲ್, ಐಪಿಎಲ್ ಇತಿಹಾಸದಲ್ಲಿ 19ನೇ ಬಾರಿಗೆ ಶೂನ್ಯಕ್ಕೆ ಔಟಾದರು.
ಆಸ್ಟ್ರೇಲಿಯಾದ (Australia) ಸ್ಟಾರ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಐಪಿಎಲ್ 2025ರ (IPL 2025) ತಮ್ಮ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು. 2025ರ ಟೂರ್ನಿಯಲ್ಲಿ ಈ ಆಟಗಾರ ಪಂಜಾಬ್ ಕಿಂಗ್ಸ್ ತಂಡವನ್ನು (Punjab Kings) ಪ್ರತಿನಿಧಿಸುತ್ತಾರೆ. ಕ್ರಿಸ್ ಬಂದು ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿ ಹಿಂದಿರುಗಿದ್ದರು. ಇದರೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ದೇಶಕ್ಕಾಗಿ ಹೀರೋನಂತೆ ಆಡುವ ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ಶೂನ್ಯವಾಗುತ್ತಾರೆ ಎಂಬ ಕಾಮೆಂಟ್‌ಗಳು ಬರುತ್ತಿವೆ.
ಕಳೆದ ಕೆಲವು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಿಂಚಿರುವ ಆಸ್ಟ್ರೇಲಿಯಾದ ವಿಧ್ವಂಸಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್, ಐಪಿಎಲ್ 2025 ರ ಮೊದಲ ಪಂದ್ಯದಲ್ಲಿ ಕೆಟ್ಟ ಆರಂಭ ಮಾಡಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಮ್ಯಾಕ್ಸ್ ವೆಲ್, ಐಪಿಎಲ್‌ನಲ್ಲಿ ಅತ್ಯಂತ ಕೆಟ್ಟ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲಿ ತಾವು ಪ್ರತಿನಿಧಿಸಿದ ತಂಡಗಳನ್ನು ಹಲವು ಬಾರಿ ಗೆಲುವಿನತ್ತ ಕೊಂಡೊಯ್ದಿದ್ದಾರೆ. ಐಪಿಎಲ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಔಟ್ ಆದ ಆಟಗಾರ ಎಂಬ ಕೆಟ್ಟ ದಾಖಲೆಯನ್ನು ಪಡೆದುಕೊಂಡಿದ್ದಾರೆ.
ಐಪಿಎಲ್ 2025 ರ ಭಾಗವಾಗಿ ಮಂಗಳವಾರ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಮ್ಯಾಕ್ಸಿ ಗೋಲ್ಡನ್ ಡಕ್ ಗೆ ಔಟ್ ಆಗಿ ನಿರ್ಗಮಿಸಿದ್ದರು. ಅವರು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ನೀಡಿದ್ದರು. ಸಾಯಿ ಕಿಶೋರ್ ಬೌಲಿಂಗ್‌ನಲ್ಲಿ ಮೊದಲ ಎಸೆತ ಎದುರಿಸಿದ ಮ್ಯಾಕ್ಸ್ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿದರು, ಆದರೆ ಚೆಂಡು ಬ್ಯಾಟ್ ಗೆ ತಾಗದೆ ನೇರ ಅವರ ದೇಹಕ್ಕೆ ಬಡಿದಿತ್ತು. ಇದರೊಂದಿಗೆ ಶೂನ್ಯಕ್ಕೆ ಔಟಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 19ನೇ ಬಾರಿಗೆ ರನ್ ಗಳಿಸದೆ ಮ್ಯಾಕ್ಸ್ ವೆಲ್ ಹಿಂದಿರುಗಿದ್ದಾರೆ.
ಈ ಪಟ್ಟಿಯಲ್ಲಿ ಭಾರತದ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಮೊದಲ ಸ್ಥಾನದಲ್ಲಿದ್ದರು. ಲೀಗ್‌ನಲ್ಲಿ ಇಬ್ಬರೂ 18 ಬಾರಿ ಯಾವುದೇ ರನ್ ಗಳಿಸದೆ ಪೆವಿಲಿಯನ್ ತಲುಪಿದ್ದಾರೆ. ಆದರೆ ನಿನ್ನೆಯ ಪಂದ್ಯದೊಂದಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಬ್ಬರನ್ನೂ ಹಿಂದಿಕ್ಕಿದ್ದಾರೆ. ಹೆಚ್ಚಿನ ನಿರೀಕ್ಷೆಗಳೊಂದಿಗೆ ಮೈದಾನಕ್ಕೆ ಇಳಿದ ಮ್ಯಾಕ್ಸಿ ಯಾವುದೇ ರನ್ ಗಳಿಸದಿರುವುದು ಪಂಜಾಬ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿತು. ಆರ್‌ಸಿಬಿ ಪರ ಆಡಿದಂತೆಯೇ ಆಡಲು ಅವರು ಬಯಸಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IPL 2025, Glenn Maxwell: ಆರ್‌ಸಿಬಿ ಈತನನ್ನು ಕೈ ಬಿಟ್ಟಿದ್ದೆ ಒಳ್ಳೆದಾಯ್ತು ಎಂದ ಫ್ಯಾನ್ಸ್
ಇತ್ತ ಮುಂಬೈ ಇಂಡಿಯನ್ಸ್ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳು ಖುಷಿ ಪಡಿತ್ತಿದ್ದಾರೆ. ಏಕೆಂದರೆ ತಮ್ಮ ನೆಚ್ಚಿನ ಆಟಗಾರನ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಈಗ ಇಲ್ಲ ಎಂದು ಸಂತಸಗೊಂಡಿದ್ದಾರೆ. ಕೆಲವು ನೆಟಿಜನ್‌ಗಳು ಮ್ಯಾಕ್ಸ್‌ವೆಲ್ ದೇಶಕ್ಕಾಗಿ ಮಾತ್ರ ಆಡ್ತಾರೆ, ಫ್ರಾಂಚೈಸಿ ಪರ ಆಡೋದಿಲ್ಲ ಅಂತ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆದರೆ, ಈ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ರಿವ್ಯೂ ತೆಗೆದುಕೊಂಡಿದ್ದರೆ, ಅವರು ನಾಟ್ ಔಟ್ ಆಗುತ್ತಿದ್ದರು. ಆದರೆ ಅವರು ಅದನ್ನು ತೆಗೆದುಕೊಳ್ಳಲಿಲ್ಲ, ಆದ್ದರಿಂದ ಅವರು ಹಿಂತಿರುಗಬೇಕಾಯಿತು.
ಐಪಿಎಲ್ ನಲ್ಲಿ ಹೆಚ್ಚು ಡಕ್ ಔಟ್
- ಗ್ಲೆನ್ ಮ್ಯಾಕ್ಸ್‌ವೆಲ್ – 19 ಬಾರಿ
- ರೋಹಿತ್ ಶರ್ಮಾ – 18 ಬಾರಿ
- ದಿನೇಶ್ ಕಾರ್ತಿ – 18 ಬಾರಿ
- ಪಿಯೂಷ್ ಚಾವ್ಲಾ – 16 ಬಾರಿ
- ಸುನಿಲ್ ನರೈನ್ – 16 ಬಾರಿ
ಇನ್ನು, ಪಂದ್ಯದ ಫಲಿತಾಂಶ ನೋಡುವುದಾದರೆ, ಪಂಜಾಬ್ ಕಿಂಗ್ಸ್ ಗೆಲ್ಲುವು ಪಡೆದುಕೊಂಡಿದೆ. 11 ರನ್‌ಗಳಿಂದ ಗುಜರಾತ್ ತಂಡವನ್ನು ಮಣಿಸಿದೆ. 244 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ನಿಗದಿತ ಓವರ್ ಗಳ ಅಂತ್ಯದ ವೇಳೆಗೆ ಐದು ವಿಕೆಟ್ ಕಳೆದುಕೊಮಡು 232 ರನ್ ಗಳಿಗೆ ಸೀಮಿತವಾಯಿತು.
Ahmedabad (Ahmedabad) [Ahmedabad],Ahmedabad,Gujarat
March 26, 2025 9:05 AM IST