Last Updated:
KKR vs RCB: ಐಪಿಎಲ್ 2025 ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆರಂಭವಾಗಲಿದೆ. ಡಿಫೆಂಡಿಂಗ್ ಚಾಂಪಿಯನ್ KKR ಮತ್ತು RCB ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಐಪಿಎಲ್ 2025 (IPL 2025) ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ (Eden Gardens) ಆರಂಭವಾಗಲಿದೆ. ಡಿಫೆಂಡಿಂಗ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ರಣರೋಚಕ ಪಂದ್ಯವನ್ನು ನೋಡೋದಕ್ಕೆ ಇಡೀ ಭಾರತೀಯರೇ ಕಾದು ಕುಳಿತಿದ್ದಾರೆ. ಬರೋಬ್ಬರಿ 17 ಸೀಸನ್‌ಗಳಿಂದ ಆರ್‌ಸಿಬಿ ಕಪ್ ಗೆದ್ದಿಲ್ಲ, ಆದ್ರೂ ಮಾತ್ರ ಆರ್‌ಸಿಬಿ ಫ್ಯಾನ್ ಬೇಸ್ ಕಡಿಮೆಯಾಗಲ್ಲ. ಈ ಸಲ ಪಕ್ಕಾ ಕಪ್ ನಮ್ಮದೇ ಅನ್ನೋ ಜೋಶ್‌ನಲ್ಲೇ ಆರ್‌ಸಿಬಿ ಅಭಿಮಾನಿಗಳು ಐಪಿಎಲ್ ನೋಡ್ತಾರೆ.
ಐಪಿಎಲ್ ಇತಿಹಾಸದಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡಗಳು:
ಜಾನಿ ಬೈರ್‌ಸ್ಟೋವ್ ಅವರ 108*(48) ಮತ್ತು ಶಶಾಂಕ್ ಸಿಂಗ್ ಅವರ 68*(28) ರನ್‌ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು 2024 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್‌ನ 261 ರನ್‌ಗಳನ್ನು ಬೆನ್ನಟ್ಟಿತು. ಇದು ಇಲ್ಲಿಯವರೆಗೂ ಈಡನ್ ಗಾರ್ಡನ್‌ನಲ್ಲಿ ಮಾಡಿದ ಹೈಎಸ್ಟ್ ರನ್‌ಚೇಸ್.
ತಂಡ | ಎದುರಾಳಿ | ಸ್ಕೋರ್ | ದಿನಾಂಕ |
ರಾಜಸ್ಥಾನ ರಾಯಲ್ಸ್ | ಕೋಲ್ಕತ್ತಾ ನೈಟ್ ರೈಡರ್ಸ್ | 224/8 | ಏಪ್ರಿಲ್ 16, 2024 |
ಕಿಂಗ್ಸ್ ಇಲೆವೆನ್ ಪಂಜಾಬ್ | ಕೋಲ್ಕತ್ತಾ ನೈಟ್ ರೈಡರ್ಸ್ | 204/2 | ಏಪ್ರಿಲ್ 4, 2010 |
ಗುಜರಾತ್ ಟೈಟಾನ್ಸ್ | ರಾಜಸ್ಥಾನ ರಾಯಲ್ಸ್ | 191/3 | ಮೇ 24, 2022 |
ಮುಂಬೈ ಇಂಡಿಯನ್ಸ್ | ಕೋಲ್ಕತ್ತಾ ನೈಟ್ ರೈಡರ್ಸ್ | 188/4 | ಏಪ್ರಿಲ್ 13, 2016 |
ಗುಜರಾತ್ ಲಯನ್ಸ್ | ಕೋಲ್ಕತ್ತಾ ನೈಟ್ ರೈಡರ್ಸ್ | 188/6 | ಏಪ್ರಿಲ್ 21, 2017 |
ರಾಯಲ್ ಚಾಲೆಂಜರ್ಸ್ ಬೆಂಗಳೂರು | ಕೋಲ್ಕತ್ತಾ ನೈಟ್ ರೈಡರ್ಸ್ | 186/1 | ಮೇ 16, 2015 |
ಕೋಲ್ಕತ್ತಾ ನೈಟ್ ರೈಡರ್ಸ್ | ಕಿಂಗ್ಸ್ ಇಲೆವೆನ್ ಪಂಜಾಬ್ | 184/9 | ಮೇ 9, 2015 |
ಕೋಲ್ಕತ್ತಾ ನೈಟ್ ರೈಡರ್ಸ್ | ಸನ್‌ರೈಸರ್ಸ್ ಹೈದರಾಬಾದ್ | 183/4 | ಮಾರ್ಚ್ 24, 2019 |
ಕೋಲ್ಕತ್ತಾ ನೈಟ್ ರೈಡರ್ಸ್ | ಪಂಜಾಬ್ ಕಿಂಗ್ಸ್ | 182/5 | ಮೇ 8, 2023 |
ಇದನ್ನೂ ಓದಿ: ಮೊದಲ ಪಂದ್ಯದಲ್ಲಿ ಕೆಕೆಆರ್ ಬಗ್ಗುಬಡಿಯಲು ಆರ್‌ಸಿಬಿ ಸಜ್ಜು! ಹೆಡ್ ಟು ಹೆಡ್, ತಂಡದ ಬಲಾಬಲದ ಬಗ್ಗೆ ಇಲ್ಲಿದೆ ಮಾಹಿತಿ
ಎರಡು ತಂಡಗಳ ಹೆಡ್-ಟು-ಹೆಡ್ ದಾಖಲೆ
RCB ಮತ್ತು KKR ತಂಡಗಳು ಇದುವರೆಗೆ ಐಪಿಎಲ್‌ನಲ್ಲಿ 35 ಬಾರಿ ಎದುರಾಗಿವೆ. KKR 21 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, RCB 14 ಪಂದ್ಯಗಳಲ್ಲಿ ಗೆದ್ದಿದೆ. ಕಳೆದ ಐದು ಪಂದ್ಯಗಳಲ್ಲಿ KKR 4-1 ರಿಂದ ಗೆದ್ದಿದ್ದು, 2024ರಲ್ಲಿ ಎರಡೂ ಪಂದ್ಯಗಳನ್ನು ಗೆದ್ದಿತ್ತು. ಬೆಂಗಳೂರಿನಲ್ಲಿ 7 ವಿಕೆಟ್‌ಗಳಿಂದ ಮತ್ತು ಈಡನ್‌ನಲ್ಲಿ 1 ರನ್‌ನಿಂದ ರೋಚಕ ಜಯ ಗಳಿಸಿತ್ತು. RCBಗೆ ಈಡನ್‌ನಲ್ಲಿ KKR ವಿರುದ್ಧ ಕಠಿಣ ಇತಿಹಾಸವಿದೆ. 2017ರಲ್ಲಿ 49 ರನ್‌ಗೆ ಆಲೌಟ್ ಆಗಿದ್ದು, ಅವರ ಕನಿಷ್ಠ ಸ್ಕೋರ್. ಇದೇ ಮೈದಾನದಲ್ಲಿ KKR 2019ರಲ್ಲಿ 232/2 ಸ್ಕೋರ್ ಮಾಡಿ ಗರಿಷ್ಠ ಸಾಧನೆ ಮಾಡಿತ್ತು. ಈ ದಾಖಲೆಗಳು KKRಗೆ ಮಾನಸಿಕ ಲಾಭವನ್ನು ನೀಡಬಹುದು.
ಈಡನ್ ಗಾರ್ಡನ್ಸ್ ದಾಖಲೆ ಮತ್ತು ಪಿಚ್ ವಿಶ್ಲೇಷಣೆ
ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ 11 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೋಲ್ಕತ್ತಾ 7-4 ಅಂತರದಿಂದ ಮುನ್ನಡೆಯಿದೆ. ಒಟ್ಟಾರೆ, ಈ ಮೈದಾನದಲ್ಲಿ 93 ಐಪಿಎಲ್ ಪಂದ್ಯಗಳಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ತಂಡಗಳು 38 ಗೆಲುವು ಗಳಿಸಿದರೆ, ಚೇಸಿಂಗ್ ತಂಡಗಳು 55 ಬಾರಿ ಜಯಿಸಿದ್ದವು.
ಈ ಮೈದಾನದಲ್ಲಿ ಎರಡನೇ ಇನಿಂಗ್ಸ್‌ಗೆ ಸ್ವಲ್ಪ ಅನುಕೂಲವಿದೆ.
ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಸರಾಸರಿ ಮೊದಲ ಇನಿಂಗ್ಸ್ ಸ್ಕೋರ್ 165-175 ರನ್‌ಗಳ ಮಧ್ಯದಲ್ಲಿರುತ್ತದೆ. ಆದರೆ, ಎರಡನೇ ಇನಿಂಗ್ಸ್‌ನಲ್ಲಿ ಪಿಚ್ ನಿಧಾನವಾಗಿ ಸ್ಪಿನ್ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಕೆಕೆಆರ್‌ನ ಸ್ಪಿನ್ಧ್ವಯರಾದ ಸುನಿಲ್ ನರೈನ್, ವರುಣ್ ಚಕ್ರವರ್ತಿ ಇಲ್ಲಿ ಪ್ರಭಾವ ಬೀರುತ್ತಾರೆ. ಟಾಸ್ ಗೆದ್ದ ತಂಡ ಚೇಸ್ ಮಾಡಲು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
Kolkata,West Bengal
March 22, 2025 12:57 PM IST