ಟಾಸ್ ಸೋತು ತವರಿನಲ್ಲಿ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ಗೆ 2ನೇ ಓವರ್ನಲ್ಲೇ ಆಘಾತ ಎದುರಾಯಿತು. 7 ರನ್ಗಳಿಸಿದ್ದ ಕಳೆದ ಪಂದ್ಯದ ಹೀರೋ ಪ್ರಿಯಾಂಶ್ ಆರ್ಯ ವಿಕೆಟ್ ಒಪ್ಪಿಸಿದರು. 3ನೇ ಓವರ್ನಲ್ಲಿ ಮತ್ತೊಬ್ಬ ಆರಂಭಿಕ ಬ್ಯಾಟರ್ ಪ್ರಭಸಿಮ್ರನ್ ಸಿಂಗ್ 10 ಎಸೆತಗಳಲ್ಲಿ ತಲಾ ಒಂದು ಬೌಂಡರಿ, ಸಿಕ್ಸರ್ ಸಹಿತ 18 ರನ್ಗಳಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆದರು.
ಗಾಯದಿಂದ ಚೇತರಿಸಿಕೊಂಡು ಇಂದೇ ತಂಡ ಸೇರಿಕೊಂಡಿದ್ದ ಜೋಶ್ ಹ್ಯಾಜಲ್ವುಡ್ ಪವರ್ ಪ್ಲೇನಲ್ಲೇ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ (2) ಹಾಗೂ ಜೋಶ್ ಇಂಗ್ಲಿಸ್ (4) ವಿಕೆಟ್ ಉಡಾಯಿಸಿದರು. ಸ್ಟೋಯಿನಿಸ್ ಒಂದೆರಡು ಬೌಂಡರಿ ಬಾರಿಸಿ ಚೇತರಿಕೆಯ ಮುನ್ಸೂಚನೆ ನೀಡಿದ್ದರು. ಆದರೆ ಪವರ್ ಪ್ಲೇ ನಂತರ ಸ್ಪಿನ್ನರ್ ಸುಯಾಶ್ ಶರ್ಮಾ ಪಂಜಾಬ್ ಬ್ಯಾಟರ್ಗಳನ್ನ ಕ್ರೀಸ್ನಲ್ಲಿ ನಿಲ್ಲದಂತೆ ಮಾಡಿದರು. ಸ್ಫೋಟಕ ಆಟಗಾರ ಶಶಾಂಕ್ ಸಿಂಗ್ (3) ಹಾಗೂ ಇಂದೇ ಪದಾರ್ಪಣೆ ಮಾಡಿದ ಮುಷೀರ್ ಖಾನ್(0) ವಿಕೆಟ್ಗಳನ್ನ ತಮ್ಮ ಮೊದಲನೇ ಓವರ್ನಲ್ಲಿ ಪಡೆದರು. ಒಂದು ಓವರ್ ನಂತರ ತಮ್ಮ 2ನೇ ಓವರ್ನಲ್ಲಿ17 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಹಿತ 26 ರನ್ಗಳಿಸಿ ಡೇಂಜರಸ್ ಆಗುತ್ತಿದ್ದ ಸ್ಟೋಯಿನಿಸ್ರನ್ನ ಕ್ಲೀನ್ ಬೌಲ್ಟ್ ಮಾಡುವ ಮೂಲಕ ಪಂಜಾಬ್ ಬೆನ್ನು ಮೂಳೆ ಮುರಿದರು.
100 ರನ್ಗಳ ಗಡಿ ದಾಟೋದು ಅನುಮಾನ ಎನ್ನುವ ಸಂದರ್ಭದಲ್ಲಿ ಒಮರ್ಝಾಯ್ ಹಾಗೂ ಹರ್ಪ್ರೀತ್ ಬ್ರಾರ್ 19 ರನ್ಗಳ ಜೊತೆಯಾಟ ನೀಡಿದರು. ಆದರೆ ರೊಮಾರಿಯೋ ಶೆಫರ್ಡ್ ಬ್ರಾರ್ರನ್ನ ಬೌಲ್ಡ್ ಮಾಡಿದರು. 15ನೇ ಓವರ್ನ ಮೊದಲ ಎಸೆತದಲ್ಲೇ ಹ್ಯಾಜಲ್ವುಡ್ 18 ರನ್ಗಳಿಸಿದ್ದ ಒಮರ್ಝಾಯ್ ವಿಕೆಟ್ ಪಡೆದು ಪಂಜಾಬ್ ಇನ್ನಿಂಗ್ಸ್ಗೆ ಅಂತ್ಯವಾಡಿದರು.
ಆರ್ಸಿಬಿ ಪರ ಸುಯಾಶ್ ಶರ್ಮಾ 17ಕ್ಕೆ3, ಹ್ಯಾಜಲ್ವುಡ್ 21ಕ್ಕೆ3, ಯಶ್ ದಯಾಳ್ 26ಕ್ಕೆ2, ಭುವನೇಶ್ವರ್ ಕುಮಾರ್ 17ಕ್ಕೆ 1ವಿಕೆಟ್ ಪಡೆದು ಪಂಜಾಬ್ ಇನ್ನಿಂಗ್ಸ್ಗೆ ಅಂತ್ಯವಾಡಿದರು.
ಎರಡೂ ತಂಡದಲ್ಲಿ ಒಂದೊಂದು ಬದಲಾವಣೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಜಲ್ವುಡ್
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತ್ವುಲ್ಲಾ ಒಮರ್ಜಾಯ್, ಹರ್ಪ್ರೀತ್ ಬ್ರಾರ್, ಕೈಲ್ ಜೇಮಿಸನ್,
ಎರಡು ತಂಡಗಳು ಪ್ಲೇ ಆಫ್ ದಾಖಲೆಗಳು
ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಪ್ಲೇಆಫ್ನಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದು, ಮೂರರಲ್ಲಿ ಸೋತಿವೆ. 2014 ರ ಫೈನಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮೂರು ವಿಕೆಟ್ಗಳಿಂದ ಫೈನಲ್ನಲ್ಲಿ ಸೋಲು ಕಂಡಿತ್ತು. ಇದೇ ಕೊನೆಯ ಬಾರಿ ತಂಡ ಪ್ಲೇ ಆಫ್ ತಲುಪಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 15 ಪಂದ್ಯಗಳನ್ನು ಆಡಿದ್ದು ಕೇವಲ ಐದು ಪಂದ್ಯಗಳನ್ನು ಗೆದ್ದಿದೆ, 10 ಪಂದ್ಯಗಳಲ್ಲಿ ಸೋತಿದೆ. 2024 ರಲ್ಲಿ, ಆರ್ಸಿಬಿ ರಾಜಸ್ಥಾನ ರಾಯಲ್ಸ್ ವಿರುದ್ಧ ಎಲಿಮಿನೇಟರ್ನಲ್ಲಿ ಸೋಲನ್ನು ಎದುರಿಸಿತ್ತು. 2016 ರಲ್ಲಿ ತಂಡವು ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಅದಕ್ಕೂ ಮುನ್ನ 2009 ಹಾಗೂ 2011ರಲ್ಲಿ ಫೈನಲ್ ತಲುಪಿತ್ತು.
ಹೆಡ್ ಟು ಹೆಡ್ನಲ್ಲಿ ಕಠಿಣ ಸ್ಪರ್ಧೆ ಇದೆ
PBKS vs RCB ಲೈವ್ ಸ್ಕೋರ್: ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಒಟ್ಟು 35 ಪಂದ್ಯಗಳು ನಡೆದಿದ್ದು, ಇದರಲ್ಲಿ ಪಂಜಾಬ್ 18 ಬಾರಿ ಗೆದ್ದಿದ್ದರೆ, ಬೆಂಗಳೂರು 17 ಬಾರಿ ಗೆದ್ದಿದೆ.