Last Updated:
ನ್ರೈಸರ್ಸ್ ಹೈದರಾಬಾದ್ (SRH) 2016ರಲ್ಲಿ ಮೂರನೇ ಸ್ಥಾನ ಪಡೆದೂ ಟ್ರೋಫಿಯನ್ನು ಗೆದ್ದುಕೊಂಡಿತು. ಆದರೆ ಆ ನಂತರ ಮತ್ತೆ ಬೇರೆ ಯಾವ ತಂಡಗಳಿಗೂ ಹೈದರಾಬಾದ್ ಸಾಧನೆಯನ್ನ ಪುನಾವರ್ತಿಸಲು ಸಾಧ್ಯವಾಗಲಿಲ್ಲ. ಒಟ್ಟಾರೆ 13 ಬಾರಿ ಮೊದಲೆರಡು ಸ್ಥಾನಗಳನ್ನು ಪಡೆದ ತಂಡಗಳೆ ಚಾಂಪಿಯನ್ ಆಗಿವೆ.
ಐಪಿಎಲ್ 2025ರ (IPL 2025) ಲೀಗ್ ಹಂತ ಮಂಗಳವಾರ ಅಂತ್ಯವಾಗಿದೆ. ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 6 ವಿಕೆಟ್ಗಳ ರೋಮಾಂಚಕ ಜಯ ಸಾಧಿಸಿತು. ಆರ್ಸಿಬಿ ಗೆಲುವಿನೊಂದಿಗೆ, ಪ್ಲೇಆಫ್ನಲ್ಲಿ ಯಾರು ಯಾರನ್ನು ಎದುರಿಸುತ್ತಾರೆ ಎಂಬುದು ದೃಢಪಟ್ಟಿದೆ. ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ (PBKS) 14 ಪಂದ್ಯಗಳಿಂದ ತಲಾ 19 ಅಂಕಗಳನ್ನು ಗಳಿಸಿವೆ. ಆದರೆ ಪಂಜಾಬ್ ತಂಡವು ಉತ್ತಮ ನಿವ್ವಳ ರನ್ ದರ (+0.372) ದಿಂದಾಗಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು (+0.301) ಎರಡನೇ ಸ್ಥಾನಕ್ಕೆ ಕುಸಿದಿದೆ. ಗುಜರಾತ್ ಟೈಟಾನ್ಸ್ (ಜಿಟಿ) ಮೂರನೇ ಸ್ಥಾನ ಪಡೆದರೆ, ಮುಂಬೈ ಇಂಡಿಯನ್ಸ್ (ಎಂಐ) 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಕಳೆದ 14 ವರ್ಷಗಳಲ್ಲಿ ಇದು 13 ಬಾರಿ ಗೆದ್ದಿದ್ದು ಆ ತಂಡಗಳೇ
18ನೇ ಐಪಿಎಲ್ ಸೀಸನ್ನಲ್ಲಿ ಟ್ರೋಫಿ ಗೆಲ್ಲುವವರು ಯಾರು? ಈ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ನಿರಂತರವಾಗಿ ಓಡುತ್ತಲೇ ಇರುತ್ತದೆ. ಆದರೆ ಕಳೆದ 14 ವರ್ಷಗಳ ಐಪಿಎಲ್ ಫಲಿತಾಂಶಗಳನ್ನ ಗಮನಿಸಿದರೆ ಯಾವ ತಂಡ ಚಾಂಪಿಯನ್ ಆಗಬಹುದು ಎಂಬುದು ನಿಮಗೆ ಅರಿವಾಗುತ್ತದೆ. ಹಿಂದಿನ 14 ವರ್ಷಗಳ ಫಲಿತಾಂಶಗಳಂತೆ ಈ ಬಾರಿಯೂ ನಿಜವಾದರೆ, ಆರ್ಸಿಬಿ ಅಥವಾ ಪಂಜಾಬ್ ಚಾಂಪಿಯನ್ ಆಗುವುದು ಖಚಿತ. ವಾಸ್ತವವಾಗಿ, ಐಪಿಎಲ್ನಲ್ಲಿ ಕಳೆದ 14 ವರ್ಷಗಳಲ್ಲಿ, ಅಗ್ರ-2 ರಲ್ಲಿ ಸ್ಥಾನ ಪಡೆದ ತಂಡಗಳು 13 ಬಾರಿ ಪ್ರಶಸ್ತಿಯನ್ನು ಗೆದ್ದಿವೆ. 2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK), 2012 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR), 2013 ರಲ್ಲಿ ಮುಂಬೈ ಇಂಡಿಯನ್ಸ್, 2014 ರಲ್ಲಿ ಕೆಕೆಆರ್ ಮತ್ತು 2015 ರಲ್ಲಿ ಮುಂಬೈ ತಂಡಗಳು ಎರಡನೇ ಸ್ಥಾನ ಗಳಿಸಿದ ನಂತರ ಪ್ರಶಸ್ತಿಯನ್ನು ಗೆದ್ದವು.
3ನೇ ಸ್ಥಾನ ಪಡೆದು ಗೆದ್ದದ್ದೂ ಒಂದೇ ತಂಡ
ಆದರೆ ಸನ್ರೈಸರ್ಸ್ ಹೈದರಾಬಾದ್ (SRH) 2016ರಲ್ಲಿ ಮೂರನೇ ಸ್ಥಾನ ಪಡೆದೂ ಟ್ರೋಫಿಯನ್ನು ಗೆದ್ದುಕೊಂಡಿತು. ಆದರೆ ಆ ನಂತರ ಮತ್ತೆ ಬೇರೆ ಯಾವ ತಂಡಗಳಿಗೂ ಹೈದರಾಬಾದ್ ಸಾಧನೆಯನ್ನ ಪುನಾವರ್ತಿಸಲು ಸಾಧ್ಯವಾಗಲಿಲ್ಲ. ಮುಂಬೈ ತಂಡ 2017 ರಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಆಯಿತು.ಚೆನ್ನೈ 2018 ರಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಆಯಿತು. 2019 ಮತ್ತು 2020 ರಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಮುಂಬೈ ಸತತ 2 ಹಾಗೂ ಒಟ್ಟಾರೆ 5ನೇ ಟ್ರೋಫಿಯನ್ನು ಎತ್ತಿ ಹಿಡಿದಿತು.
2021 ರಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸಿಎಸ್ಕೆ 4ನೇ ಟ್ರೋಫಿಯನ್ನು ಗೆದ್ದರೆ 2022 ರಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನ ಪಡೆಯುವ ಮೂಲಕ ಟ್ರೋಫಿಯನ್ನು ಗೆದ್ದಿತ್ತು. 2023 ರಲ್ಲಿ CSK ಎರಡನೇ ಸ್ಥಾನ ಮತ್ತು 2024 ರಲ್ಲಿ KKR ಮೊದಲ ಸ್ಥಾನ ಪಡೆದು ಚಾಂಪಿಯನ್ ಆದವು. ಚೆನ್ನೈ ಮತ್ತು ಮುಂಬೈ ಜಂಟಿಯಾಗಿ ಅತಿ ಹೆಚ್ಚು ಐಪಿಎಲ್ ಟ್ರೋಫಿಗಳನ್ನು ಗೆದ್ದಿವೆ. ಎರಡೂ ತಲಾ ಐದು ಬಾರಿ ಚಾಂಪಿಯನ್ ಆಗಿವೆ. ಕೆಕೆಆರ್ 3 ಬಾರಿ ಟ್ರೋಫಿ ಗೆದ್ದು 3ನೇ ಯಶಸ್ವಿ ತಂಡವಾಗಿದೆ.
ಐಪಿಎಲ್ 2025 ಪ್ಲೇಆಫ್ ವೇಳಾಪಟ್ಟಿ
ಗುರುವಾರ (ಮೇ 29) ಪಂಜಾಬ್ ಮತ್ತು ಆರ್ಸಿಬಿ ನಡುವೆ ಕ್ವಾಲಿಫೈಯರ್-1 ಪಂದ್ಯ ನಡೆಯಲಿದೆ. ಈ ಪಂದ್ಯ ಮುಲ್ಲನ್ಪುರ ಮೈದಾನದಲ್ಲಿ ನಡೆಯಲಿದೆ. ಪಿಬಿಕೆಎಸ್ ಮತ್ತು ಬೆಂಗಳೂರು ನಡುವೆ ಯಾವ ತಂಡ ಗೆದ್ದರೂ ಅದು ಫೈನಲ್ ಪ್ರವೇಶಿಸುತ್ತದೆ. ಕ್ವಾಲಿಫೈಯರ್-1 ರಲ್ಲಿ ಸೋತ ತಂಡಕ್ಕೆ ಫೈನಲ್ ತಲುಪಲು ಇನ್ನೊಂದು ಅವಕಾಶ ಸಿಗುತ್ತದೆ. ಅವರು ಕ್ವಾಲಿಫೈಯರ್ -2 ರಲ್ಲಿ ಎಲಿಮಿನೇಟರ್ ವಿಜೇತರನ್ನು ಎದುರಿಸಲಿದ್ದಾರೆ. ಶುಕ್ರವಾರ (ಮೇ 30) ಮುಲ್ಲನ್ಪುರದಲ್ಲಿ ಗುಜರಾತ್ ಮತ್ತು ಮುಂಬೈ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಲಿವೆ. ಕ್ವಾಲಿಫೈಯರ್-2 ಪಂದ್ಯ ಭಾನುವಾರ (ಜೂನ್ 1) ಅಹಮದಾಬಾದ್ನಲ್ಲಿ ನಡೆಯಲಿದೆ. ಕ್ವಾಲಿಫೈಯರ್ 2 ಅನ್ನು ಗೆದ್ದ ತಂಡವು ಮಂಗಳವಾರ (ಜೂನ್ 3) ನಡೆಯಲಿರುವ ಫೈನಲ್ನಲ್ಲಿ ಕ್ವಾಲಿಫೈಯರ್ 1 ರ ವಿಜೇತರನ್ನು ಎದುರಿಸಲಿದೆ.