Last Updated:
ಅಭಿಷೇಕ್ ನಾಯರ್ ಅವರನ್ನು IPL 2026ಗೆ KKR ತಂಡದ ಹೊಸ ಹೆಡ್ ಕೋಚ್ ಆಗಿ ನೇಮಿಸಲಾಗಿದೆ. ಇದರ ಬೆನ್ನಲ್ಲೇ ರೋಹಿತ್ ಕೂಡ ಕೆಕೆಆರ್ ಸೇರಬಹುದು ಎನ್ನಲಾಗುತ್ತಿತ್ತು. ಆದರೆ ಮುಂಬೈ ಇಂಡಿಯನ್ಸ್ ಎಲ್ಲಾ ವರದಿಗೆ ಫುಲ್ ಸ್ಟಾಪ್ ಇಟ್ಟಿದೆ.
ಕೆಲವು ದಿನಗಳಿಂದ ಟೀಮ್ ಇಂಡಿಯಾ ಲೆಜೆಂಡ್ ರೋಹಿತ್ ಶರ್ಮಾ (Rohit Sharma) ಕೆಕೆಆರ್ ಸೇರಬಹುದು ಎಂಬ ಚರ್ಚೆಗಳು ನಡೆಯುತ್ತಿದ್ದವು. ಆದರೆ ಒಂದೇ ಟ್ವೀಟ್ ಮೂಲಕ ಮುಂಬೈ ಇಂಡಿಯನ್ಸ್ (Mumbai Indians) ರೋಹಿತ್ ಕೆಕೆಆರ್ಗೆ ಹೋಗಬಹುದು ಎಂಬ ರೂಮರ್‌ಗಳಿಗೆ ಸ್ಪಷ್ಟ ಉತ್ತರಕೊಟ್ಟಿದೆ. ರೋಹಿತ್‌ರ ಆಪ್ತ ಸ್ನೇಹಿತ ಅಭಿಷೇಕ್ ನಾಯರ್ (Abhishek Nayar) ಅವರನ್ನು KKR ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಕಗೊಳ್ಳುತ್ತಿದ್ದಂತೆ ರೋಹಿತ್ ಕುರಿತ ವದಂತಿಗಳು ಹೆಚ್ಚಾಗಿದ್ದವು.
ನಾಲ್ಕು ದಿನಗಳ ಹಿಂದೆ, ಎಲ್ಲಾ ಪ್ರಮುಖ ಕ್ರಿಕೆಟ್ ವೆಬ್‌ಸೈಟ್‌ಗಳು ಅಭಿಷೇಕ್ ನಾಯರ್ ಅವರನ್ನು IPL 2026ಗೆ KKR ತಂಡದ ಹೊಸ ಹೆಡ್ ಕೋಚ್ ಆಗಿ ನೇಮಿಸಲಾಗುತ್ತದೆ ಎಂದು ವರದಿ ಮಾಡಿದ್ದವು. KKR ತಂಡವು ಇನ್ನೂ ಇದನ್ನು ಅಧಿಕೃತವಾಗಿ ಘೋಷಿಸಿರಲಿಲ್ಲ. ಗುರುವಾರ ನಾಯರ್ KKR ತಂಡದ ಹೆಡ್ ಆಗಿ ನೇಮಕವಾಗಿದ್ದಾರೆ ಎಂದು ಕೆಕೆಆರ್ ಟ್ವೀಟ್ ಮಾಡಿ ಖಚಿತಪಡಿಸಿದೆ. ಹಿರಿಯ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಬದಲಿಗೆ ಸಹಾಯಕ ಕೋಚ್ ಆಗಿದ್ದ ನಾಯರ್ ರನ್ನ ಹೆಡ್ ಕೋಚ್ ಆಗಿ ಬಡ್ತಿ ನೀಡಲಾಗಿದೆ.
ಅಭಿಷೇಕ್ ನಾಯರ್ ಕೆಕೆಆರ್ ತಂಡದ ಕೋಚ್ ಆಗುತ್ತಾರೆ ಎಂಬ ವರದಿಗಳ ಬೆನ್ನಲ್ಲೇ ರೋಹಿತ್ ಶರ್ಮಾ ಕೂಡ MI ತಂಡವನ್ನು ಬಿಟ್ಟು KKRಗೆ ಹೋಗುತ್ತಾರೆ ಎಂಬ ವದಂತಿಗಳು ಹೆಚ್ಚಾಗಿದ್ದವು. ಏಕೆಂದರೆ ನಾಯರ್ ಮತ್ತು ರೋಹಿತ್ ಇಬ್ಬರೂ ಬಹು ವರ್ಷಗಳ ಸ್ನೇಹಿತರು. ಅವರು ಮುಂಬೈ ತಂಡದಲ್ಲಿ ದೇಶೀಯ ಕ್ರಿಕೆಟ್ ಕೂಡ ಒಟ್ಟಿಗೆ ಆಡಿದ್ದರು. ನಾಯರ್ ಅವರು ರೋಹಿತ್‌ರ ವೈಯಕ್ತಿಕ ತರಬೇತಿದಾರರು ಕೂಡ ಆಗಿದ್ದಾರೆ. ರೋಹಿತ್ ಬ್ಯಾಟಿಂಗ್ನಲ್ಲಿ ಕೆಲವು ಟೆಕ್ನಿಕ್ ಬದಲಾವಣೆಗಳಿಂದ ಹಿಡಿದು, ಇತ್ತೀಚಿನ ಭಾರತ-ಆಸ್ಟ್ರೇಲಿಯಾ ODI ಸರಣಿಗೂ ಮುನ್ನ 10 ಕೆಜಿ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ನಾಯರ್ ನೆರವಾಗಿದ್ದರು.
ಆದರೆ, ಈ ಎಲ್ಲಾ ವದಂತಿಯನ್ನ ಮುಂಬೈ ಇಂಡಿಯನ್ಸ್ ತಂಡ ತಳ್ಳಿ ಹಾಕಿದೆ. ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ MI ತಂಡವು ಸೋಷಿಯಲ್ ಮೀಡಿಯಾದಲ್ಲಿ MI ತಂಡವು ಒಂದು ವ್ಯಂಗ್ಯಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ” ಸೂರ್ಯ ಮತ್ತೆ ನಾಳೆ ಬೆಳಗ್ಗೆ ಉದಯಿಸುವುದು ಖಚಿತ. ಆದರೆ ರಾತ್ರಿ (ನೈಟ್) ಸಮಯದಲ್ಲಿ ಇದು ಕಷ್ಟಕರ ಮಾತ್ರವಲ್ಲ, ಅಸಾಧ್ಯ!” (???????????? ???????????????? ???????????????? ???????????????????????????????? ???????????????????? ye toh confirm hai, but at (K)night… मुश्किल ही नहीं, नामुमकिन है! ) ಎಂದು ಬರೆದಿದ್ದಾರೆ. ಇದರ ಮೂಲಕ, ರೋಹಿತ್ MI ತಂಡದಲ್ಲೇ ಉಳಿಯುತ್ತಾರೆ ಎಂದು ಸೂಚಿಸಿದೆ.
???????????? ???????????????? ???????????????? ???????????????????????????????? ???????????????????? ye toh confirm hai, but at (K)night… मुश्किल ही नहीं, नामुमकिन है! 💙 pic.twitter.com/E5yH3abB4g
— Mumbai Indians (@mipaltan) October 30, 2025
ರೋಹಿತ್ ಶರ್ಮಾ MI ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದು, ಅವರ ಭವಿಷ್ಯದ ಬಗ್ಗೆ ಫ್ಯಾನ್‌ಗಳು ಆತಂಕಗೊಂಡಿದ್ದರು. ಆದರೆ ಮುಂಬೈ ತಂಡ ಒಂದು ಟ್ವೀಟ್ ಮೂಲಕ ಎಲ್ಲಾ ಗೊಂದಲಕ್ಕೂ ತೆರೆ ಎಳೆದಿದೆ.
October 30, 2025 6:33 PM IST