IPL 2026: ಸಂಜು ಸ್ಯಾಮ್ಸನ್ ಬೇಕಾದ್ರೆ ಆ ಮೂವರಲ್ಲಿ ಒಬ್ಬರನ್ನ ಕೊಡಿ! ಸಿಎಸ್​ಕೆ ಮುಂದೆ ಭಾರೀ ಡಿಮ್ಯಾಂಡ್ ಇಟ್ಟ RR | CSK’s Sanju Samson Bid Stalls RR Seeks Ravindra Jadeja, Shivam Dube, and Ruturaj Gaikwad in Trade Deal | ಕ್ರೀಡೆ

IPL 2026: ಸಂಜು ಸ್ಯಾಮ್ಸನ್ ಬೇಕಾದ್ರೆ ಆ ಮೂವರಲ್ಲಿ ಒಬ್ಬರನ್ನ ಕೊಡಿ! ಸಿಎಸ್​ಕೆ ಮುಂದೆ ಭಾರೀ ಡಿಮ್ಯಾಂಡ್ ಇಟ್ಟ RR | CSK’s Sanju Samson Bid Stalls RR Seeks Ravindra Jadeja, Shivam Dube, and Ruturaj Gaikwad in Trade Deal | ಕ್ರೀಡೆ

Last Updated:

ಸಂಜು ಸ್ಯಾಮ್ಸನ್, 30 ವರ್ಷದ ಕೇರಳ ಮೂಲದ ಆಟಗಾರ, 2013ರಿಂದ RR ತಂಡದೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದಾರೆ. ಅವರು RRನ ಅತಿ ಹೆಚ್ಚು ರನ್ ಗಳಿಸಿದ ಆಟಗಾರ (3,986 ರನ್‌ಗಳು) ಮತ್ತು 2022ರ ಐಪಿಎಲ್ ಫೈನಲ್‌ಗೆ ತಂಡವನ್ನು ಮುನ್ನಡೆಸಿದ ಯಶಸ್ವಿ ನಾಯಕ. ಆದರೆ, ಐಪಿಎಲ್ 2026 ಋತುವಿಗೂ ಮುನ್ನ ಅವರು RRನಿಂದ ಟ್ರೇಡ್ ಅಥವಾ ಬಿಡುಗಡೆಯನ್ನು ಕೋರಿದ್ದಾರೆ.

ಧೋನಿ- ಸಂಜು ಸಾಮ್ಸನ್ಧೋನಿ- ಸಂಜು ಸಾಮ್ಸನ್
ಧೋನಿ- ಸಂಜು ಸಾಮ್ಸನ್

ರಾಜಸ್ಥಾನ್ ರಾಯಲ್ಸ್ (RR) ತಂಡದ ನಾಯಕ ಮತ್ತು ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samson) ಅವರು ಚೆನ್ನೈ ಸೂಪರ್ ಕಿಂಗ್ಸ್ (CSK)ಗೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಈ ಟ್ರೇಡ್‌ಗೆ ಸಂಬಂಧಿಸಿದಂತೆ ರಾಜಸ್ಥಾನ್ ರಾಯಲ್ಸ್ (Rajasthan Royals) ಫ್ರಾಂಚೈಸಿಯಿಂದ ಬಂದ ಭಾರೀ ಬೇಡಿಕೆಗಳಿಂದಾಗಿ ಈ ಒಪ್ಪಂದವು ಸದ್ಯಕ್ಕೆ ಅರ್ಧಕ್ಕೆ ನಿಂತಿದೆ ಎಂದು ಕ್ರಿಕ್‌ಬಝ್ ವರದಿ ತಿಳಿಸಿದೆ. ಸಂಜು ಸ್ಯಾಮ್ಸನ್, 30 ವರ್ಷದ ಕೇರಳ ಮೂಲದ ಆಟಗಾರ, 2013ರಿಂದ RR ತಂಡದೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದಾರೆ. ಅವರು RRನ ಅತಿ ಹೆಚ್ಚು ರನ್ ಗಳಿಸಿದ ಆಟಗಾರ (3,986 ರನ್‌ಗಳು) ಮತ್ತು 2022ರ ಐಪಿಎಲ್ ಫೈನಲ್‌ಗೆ ತಂಡವನ್ನು ಮುನ್ನಡೆಸಿದ ಯಶಸ್ವಿ ನಾಯಕ. ಆದರೆ, ಐಪಿಎಲ್ 2026 ಋತುವಿಗೂ ಮುನ್ನ ಅವರು RRನಿಂದ ಟ್ರೇಡ್ ಅಥವಾ ಬಿಡುಗಡೆಯನ್ನು ಕೋರಿದ್ದಾರೆ.

ಧೋನಿ ಪರ್ಯಾಯವಾಗಿ ಸಂಜು

ಧೋನಿ ಮುಂದಿನ ಸೀಸನ್​ ಆಡುವುದು ಅನುಮಾನವಾಗಿದೆ. ಆಡಿದರೂ ಅದೇ ಲಾಸ್ಟ್ ಸೀಸನ್​. ಹಾಗಾಗಿ ಸಿಎಸ್ಕೆ ಎಂಎಸ್ ಧೋನಿಯ ನಂತರದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್​ಗಾಗಿ ಹುಡುಕಾಟದಲ್ಲಿರುವುದರಿಂದ, ಸಂಜುರನ್ನ ತಂಡಕ್ಕೆ ಸೇರಿಸಿಕೊಳ್ಳುವುದಕ್ಕೆ ಆಸಕ್ತಿ ತೋರಿದೆ. ಐಪಿಎಲ್ 2025ರ ನಂತರ ಸಂಜು, CSKನ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಮತ್ತು ಆಡಳಿತ ಮಂಡಳಿಯೊಂದಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಭೇಟಿಯಾಗಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರಾಜಸ್ಥಾನ್ ಮಾಲೀಕರಿಂದ ಭಾರೀ ಬೇಡಿಕೆ

RRನ ಮಾಲೀಕ ಮನೋಜ್ ಬಡಾಲೆ ಅವರು ಸಂಜು ಸ್ಯಾಮ್ಸನ್‌ ಟ್ರೇಡಿಂಗ್ ಮಾಡಬೇಕಾದರೆ CSK ತಂಡದಲ್ಲಿರುವ ಸ್ಟಾರ್​ ಆಟಗಾರರಾದ ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ಅಥವಾ ರವೀಂದ್ರ ಜಡೇಜಾ ಇವರಲ್ಲಿ ಒಬ್ಬರನ್ನು ಟ್ರೇಡ್‌ನ ಭಾಗವಾಗಿ ಕೇಳಿದ್ದಾರೆ. ಆದರೆ, CSK ಈ ಮೂವರು ಆಟಗಾರರನ್ನೂ ಬಿಟ್ಟುಕೊಡಲು ಒಪ್ಪಿಲ್ಲ, ಇದರಿಂದ ಟ್ರೇಡ್ ಒಪ್ಪಂದವು ನಿಂತಿದೆ.

ಸಿಎಸ್​ಕೆ ಮುಂದಿನ ದಾರಿ

CSKಗೆ ಸಂಜು ಸ್ಯಾಮ್ಸನ್​​ರನ್ನ ಪಡೆಯಲು ಮಿನಿ ಹರಾಜಿನಲ್ಲಿ ಬಿಡ್ ಮಾಡುವುದೊಂದೇ ಆಯ್ಕೆ ಇದೆ, ಆದರೆ RR ಇತರ ತಂಡಗಳೊಂದಿಗೂ ಚರ್ಚೆ ನಡೆಸುತ್ತಿದೆ, ಮತ್ತು ಒಂದು ತಂಡದೊಂದಿಗೆ ಒಪ್ಪಂದಕ್ಕೆ ಸನಿಹವಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಬಹುಶಃ ನಾಯಕತ್ವದ ಆಯ್ಕೆಗೆ ಹುಡುಕಾಡುತ್ತಿರುವ ಕೆಕೆಆರ್ ಇರಬಹುದು ಎಂಬ ಊಹಾಪೋಹಗಳಿವೆ.

ಸಂಜು ಸ್ಯಾಮ್ಸನ್​ರನ್ನ ರಾಯಲ್ಸ್ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 18 ಕೋಟಿ ರೂ.ಗೆ RR ರಿಟೇನ್ ಮಾಡಿಕೊಂಡಿತ್ತು. ಆದರೆ, 2026ರ ಋತುವಿಗೆ ಅವರ ಭವಿಷ್ಯ ಅನಿಶ್ಚಿತವಾಗಿದೆ. RR ತಂಡವು ಟ್ರೇಡ್ ಒಪ್ಪಂದಕ್ಕೆ ಒಪ್ಪದಿದ್ದರೆ ಅಥವಾ ಸಂಜುವನ್ನು ಬಿಡುಗಡೆ ಮಾಡದಿದ್ದರೆ, ಅವರು 2026ರ ಐಪಿಎಲ್‌ನಲ್ಲಿ RRಗಾಗಿಯೇ ಆಡಬೇಕಾಗುತ್ತದೆ.

ಐಪಿಎಲ್ ನಿಯಮಗಳೇನು?

ಐಪಿಎಲ್‌ನ ನಿಯಮಗಳ ಪ್ರಕಾರ, ಮೆಗಾ ಹರಾಜಿನ ಮೊದಲು ಆಟಗಾರನಿಗೆ ತಂಡವನ್ನು ಬಿಟ್ಟು ಹೋಗುವ ಅಧಿಕಾರವಿದೆ, ಆದರೆ ಇತರ ವರ್ಷಗಳಲ್ಲಿ ತಂಡವೇ ಒಪ್ಪಂದವನ್ನು ನವೀಕರಿಸುವ ಅಥವಾ ಬಿಡುಗಡೆ ಮಾಡುವ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಇಲ್ಲಿ ಆಟಗಾರರಿಗೆ ಯಾವುದೇ ಸ್ವಾತಂತ್ರ್ಯವಿರುವುದಿಲ್ಲ.

ಸಂಜು ಸ್ಯಾಮ್ಸನ್ ಮತ್ತು RR ಆಡಳಿತದ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಇವೆ ಎಂದು ವರದಿಗಳು ತಿಳಿಸಿವೆ. 2025ರ ಐಪಿಎಲ್‌ನಲ್ಲಿ ಸಂಜು ಗಾಯದಿಂದಾಗಿ ಕೇವಲ 9 ಪಂದ್ಯಗಳನ್ನು ಆಡಿದ್ದರು. ಈ ಸಂದರ್ಭದಲ್ಲಿ ರಿಯಾನ್ ಪರಾಗ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. RR ತಂಡವು 9ನೇ ಸ್ಥಾನಕ್ಕೆ ಕುಸಿದಿತ್ತು. ಇದಲ್ಲದೇ, ಜೋಸ್ ಬಟ್ಲರ್‌ರನ್ನು ಬಿಡುಗಡೆ ಮಾಡಿದ RRನ ನಿರ್ಧಾರವೂ ಸಂಜುಗೆ ಇಷ್ಟವಾಗಿರಲಿಲ್ಲ. “ಬಟ್ಲರ್‌ರನ್ನು ಬಿಡುಗಡೆ ಮಾಡಿದ್ದು ನನಗೆ ಕಷ್ಟಕರ ನಿರ್ಧಾರವಾಗಿತ್ತು. ಐಪಿಎಲ್‌ನಲ್ಲಿ ಒಂದು ನಿಯಮವನ್ನು ಬದಲಾಯಿಸಬೇಕೆಂದರೆ, ಪ್ರತಿ ಮೂರು ವರ್ಷಕ್ಕೊಮ್ಮೆ ಆಟಗಾರರನ್ನು ಬಿಡುಗಡೆ ಮಾಡುವ ನಿಯಮವನ್ನೇ ಬದಲಾಯಿಸುತ್ತೇನೆ,” ಎಂದು ಸಂಜು ಸ್ಟಾರ್ ಸ್ಪೋರ್ಟ್ಸ್ಗೆ ಹೇಳಿದ್ದರು.